ಬೆಂಗಳೂರು- ಗುತ್ತುಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ಹೊರಹಾಕಿದ್ದಾರೆ. ಯಾರು ಏನೇ ಮಾತಾಡಿದ್ರೂ ಸರ್ಕಾರ ಜೀವ ತೆಗೆಯುತ್ತೆ, ಈ ಸರ್ಕಾರದಲ್ಲಿ ಗುತ್ತಿಗೆದಾರರಿಗೆ ಉಳಿವಿಲ್ಲ. ನ್ಯಾಯ ಅನ್ನೋದನ್ನು ಕೇಳಲು ಸಾಧ್ಯನೇ ಇಲ್ಲ ಎಂದು ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಬಾಲಸುಬ್ರಹ್ಮಣ್ಯ ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಮಾತಾಡಿದವರಿಗೆ ಬಿಲ್ ಸಾಂಕ್ಷನ್ ಆಗಲು ಸಾಧ್ಯವಿಲ್ಲ. ಪ್ರಧಾನಿಗೆ ಕಮಿಷನ್ ದಂಧೆ ಬಗ್ಗೆ ಪತ್ರ ಬರ್ದಿದ್ದಕ್ಕೆ ಡಿಫೇಮೇಶನ್ ಕೇಸ್‌ಹಾಕಿದ್ರು. ಸಂತೋಷ್ ಪಾಟೀಲ್ ಜೀವ ತಗೆದುಕೊಳ್ಳುವ ಹಾಗಾಯ್ತು ಎಂದು ಮದು ಅವರು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ- ಸಾಕ್ಷಿ ನಾಶ ತಡೆಯಲು ಶೀಘ್ರವೇ ಈಶ್ವರಪ್ಪ ಬಂಧನ ಅಗತ್ಯ: ಪೊಲೀಸರಿಗೆ AAP ದೂರು
ಇನ್ನು ಗುತ್ತಿಗೆದಾರ ಸಂಘದ ಅಂಬಿಕಾಪತಿ ಮಾತನಾಡಿ, ಬಿಬಿಎಂಪಿಯಲ್ಲೇ ಕಳೆದ ವರ್ಷ 7 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. 3500 ಸಾವಿರ ಕೋಟಿ ಬಿಲ್‌ಬಾಕಿ ಉಳಿದಿದ್ದರೆ ಬದುಕುಳಿಯುವುದಾದರೂ ಹೇಗೆ.. ಸಂತೋಷ್ ಗುತ್ತಿಗೆದಾರನ ಆತ್ಮಹತ್ಯೆ ಇಡೀ ಗುತ್ತಿಗೆದಾರರ ಸಮಾಜಕ್ಕೇ ಭಾರೀ ಹೊಡೆತ ಬಿದ್ದಿರುವ ವಿಚಾರ. ಗುತ್ತಿಗೆದಾರರ ಸಮಸ್ಯೆ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಲಾಗಿದೆ. ಪ್ರಧಾನಿ, ರಾಜ್ಯಪಾಲರಿಗೆ, ಸಿಎಂ ಗೂ 40% ಕಮಿಷನ್ ಬಗ್ಗೆ ಗಮನಕ್ಕೆ ತರಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಗುತ್ತಿಗೆದಾರರ ಸಂಘದಿಂದ ಹೋರಾಟ ನಡೆಸಿದ್ರೂ ಸರ್ಕಾರ ಸ್ಪಂದಿಸಿಲ್ಲ. ಮುಂದಕ್ಕೂ ಹಲವಾರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು. ಇಂದು ನಡೆದಿರುವ ಘಟನೆಯಲ್ಲಿ ನೇರವಾಗಿ ಈಶ್ವರಪ್ಪ ಭಾಗಿಯಾಗಿದ್ದಾರೆ. ಈಶ್ವರಪ್ಪ ರಾಜೀನಾಮೆ ಕೊಡಬೇಕು. ಸರ್ಕಾರ ಅವರನ್ನು ಅರೆಸ್ಟ್ ಮಾಡ್ಬೇಕೆಂದು ಆಗ್ರಹಿಸ್ತೇವೆ ಎಂದವರು ಆಗ್ರಹಿಸಿದರು.
ಇದನ್ನೂ ಓದಿ- ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಸಚಿವ ಕೆ.ಎಸ್.ಈಶ್ವರಪ್ಪ ತಲೆದಂಡ ಬಹುತೇಕ ಖಚಿತ!?
ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆ ಟಿ ಮಂಜುನಾಥ್ ಮಾತನಾಡಿ, ಶಾಸಕರು , ಮಾಜಿ ಕಾರ್ಪೊರೇಟರ್ , ಜೆಇ , ಇಇ , ಕಮೀಷನರ್ ಎಲ್ಲ ಹಂತದಲ್ಲೂ ಲಂಚ ಇದೆ. ಶೇ.15 ರಷ್ಟು ಲಂಚ ಕೊಡಲೇಬೇಕು. ಬಿಲ್ ಬಿಡುಗಡೆಗೂ ಲಂಚ ಕೊಡಬೇಕು. ಲಂಚ ಕೊಡದಿದ್ದರೆ ನಾವ್ ನಿರುದ್ಯೋಗಿ ಆಗ್ತಿವಿ. ಹೆಸರು ಹೇಳಿದ ಸಂತೋಷ್‌ಪಾಟೀಲ್ ಗೆ ಯಾವ್ ಗತಿ ಬಂತು. ಲಂಚ ಕೇಳಿದವರ ಹೆಸರು ಹೇಳಲು ನಮಗೆ ಭಯ ಇದೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.