ʼಭಂಡ ಹಾಗೂ ಭ್ರಷ್ಟ ಮತ್ತು ವಲಸಿಗ ಕಾಂಗ್ರೆಸ್ಸಿಗ ಸಿದ್ದರಾಮಯ್ಯ ಅವರೇ, ನೀವು ನಿಮ್ಮ ಹಿಂದಿನ ಅವಧಿಯಲ್ಲಿ ಬಲಿಷ್ಠ ಲೋಕಾಯುಕ್ತ ಸಂಸ್ಥೆಗೆ ಬೀಗ ಜಡಿದು ದುರ್ಬಲ ಎಸಿಬಿ ಸ್ಥಾಪಿಸಿದ್ದು ನೀವು ಪರಪ್ಪನ ಅಗ್ರಹಾರದ ಖಾಯಂ ನಿವಾಸಿಯಾಗುವುದನ್ನು ತಪ್ಪಿಸಿಕೊಳ್ಳಲು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯʼವೆಂದು ಬಿಜೆಪಿ ಟ್ವೀಟ್ ಮಾಡಿದೆ.
MUDA Scam: ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿದ್ದರಾಮಯ್ಯನವರು ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿಯೂ ಸಿದ್ದರಾಮಯ್ಯ ಮೊದಲ ಆರೋಪಿ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜಮಾತೆ ಪ್ರಮೋದಾದೇವಿಯವರು ಹಾಗೂ ಸಂಸದ ಯದುವೀರ್ ಅವರು ಸಭೆ ನಡೆಸುವುದು ಕಾನೂನುಬಾಹಿರ ಎಂದು ಆಡಳಿತ ಮಂಡಳಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಹಿಂದೆಯೂ ಆಡಳಿತ ಮಂಡಳಿ ಇತ್ತು.
ಬಿಜೆಪಿಯಿಂದ ವಚನಭ್ರಷ್ಟ ಎನಿಸಿಕೊಂಡು, ಬಿಜೆಪಿಯೊಂದಿಗೆ ಇನ್ನೆಂದಿಗೂ ಮೈತ್ರಿ ಇಲ್ಲ ಎಂದು ಜನರ ಕಿವಿ ಮೇಲೆ ಲಾಲ್ ಬಾಗ್ ಇಟ್ಟು, ಬಿಜೆಪಿಯ ಹಗರಣಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿ ಈಗ ನಾಚಿಕೆ ಬಿಟ್ಟು ಅದೇ ಬಿಜೆಪಿಯ ಶಾಲನ್ನು ಹೆಗಲೇರಿಸಿ, ಅದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕುತ್ತಿರುವುದು ಅಸಹ್ಯದ ಪರಮಾವಧಿಯಲ್ಲವೇ? ಎಂದು ಎಚ್ಡಿಕೆಗೆ ಕಾಂಗ್ರೆಸ್ ಪ್ರಶ್ನಿಸಿದೆ.
ಮೈಸೂರು ನಗರಾಭಿವೃದ್ಧಿ (ಮುಡಾ) ಹಗರಣ, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಇದೊಂದು ತಾರ್ಕಿಕ ಅಂತ್ಯ ಕಾಣುತ್ತದೆ ಎಂದು ಭಾವಿಸಲಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ಹಗರಣವನ್ನು ಸಮರ್ಥನೆ ಮಾಡಿಕೊಂಡಿದೆ.
ಕುಮಾರಸ್ವಾಮಿಯವರು ನಾನು ಪೆನ್ಡ್ರೈವ್ ಬಿಡುಗಡೆ ಮಾಡಿದೆ ಎಂದು ಸುಳ್ಳು ಆರೋಪ ಮಾಡಿದ್ದರು. ಈ ಶಿವಕುಮಾರ್ ಅಂತಹ ನೀಚ ರಾಜಕಾರಣ ಮಾಡುವುದಿಲ್ಲ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಈಗ ಕುಮಾರಸ್ವಾಮಿಯವರೇ ಈ ಪೆನ್ಡ್ರೈವ್ಗಳನ್ನು ಬಿಟ್ಟಿರುವುದು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಎಂದು ಹೇಳಿದ್ದಾರೆ. ಪ್ರೀತಂಗೌಡನನ್ನು ವೇದಿಕೆಯಲ್ಲಿಟ್ಟುಕೊಂಡು ನನ್ನನ್ನು ಪಾದಯಾತ್ರೆ, ಸಭೆಗೆ ಕರೆಯುತ್ತಾರೆ. ಹೀಗಾಗಿ ನಾನು ಭಾಗವಹಿಸುವುದಿಲ್ಲವೆಂದು ಕುಮಾರಸ್ವಾಮಿ ಹೇಳಿದ್ದರು, ಈಗ ಹೋಗಿದ್ದಾರೆ. ಅವರ ಮಾತಿಗೂ ಕೃತಿಗೂ ಸಂಬಂಧವೇ ಇರುವುದಿಲ್ಲವೆಂದು ಕುಟುಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಬಾಹಿರವಾಗಿ, ಕಾನೂನು ಬಾಹಿರವಾಗಿ ಕ್ಯಾಬಿನೆಟ್ ನಡೆಸಿ ರಾಜ್ಯಪಾಲರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು
Cheque Bounce: ಗಂವ್ಹಾರ ಪಂಚಾಯತ್ ಅದ್ಯಕ್ಷೆ ಆರತಿ ಹಾಗೂ ಪಿಡಿಓ ಧರ್ಮಣ್ಣ ಕರ್ನಾಟಕ ಗ್ರಾಮೀಣ ಬ್ಯಾಂಕ್ (Cavery Gramina Bank) ನಿಂದ 25071 ರೂಪಾಯಿಯ ಚೆಕ್ ನ್ನು ವಿದ್ಯುತ್ ಬಿಲ್ (Electricity Bill) ಪಾವತಿಗೆ ನೀಡಿದ್ದಾರೆ. ಜೂನ್ 30 ರಂದು ಜೆಸ್ಕಾಂ ನವರು ಬ್ಯಾಂಕಿಗೆ ಚೆಕ್ ಹಾಕಿದ್ದಾರೆ.
ನಾಫೆಡ್ ಕೊಬ್ಬರಿ ಕೇಂದ್ರದಲ್ಲಿ ಭ್ರಷ್ಟಾಚಾರ ತಾಂಡವ
ಕೊಬ್ಬರಿ ತುಂಬುವ ಚೀಲಕ್ಕೆ 26 ರೂ. ನೀಡಲು ತಾಕೀತು
10 KG ಹೆಚ್ಚುವರಿ ಕೊಬ್ಬರಿ ಕೊಡಲು ಅಧಿಕಾರಿಗಳ ತಾಕೀತು
ಅಧಿಕಾರಿಗಳ ಸುಲಿಗೆ ಕಾರ್ಯಕ್ಕೆ ಅನ್ನದಾತರು ಹೈರಾಣು
ಮಂಡ್ಯದ ನಾಗಮಂಗಲ ತಾ. ಕದಬಹಳ್ಳಿಯ APMCಯಲ್ಲಿ ಘಟನೆ
ʼಪ್ರಧಾನಿ ಮೋದಿ ಅವರಾಗಲೀ, ಬಿಜೆಪಿಯವರಾಗಲೀ ಇವತ್ತಿನವರೆಗೆ ಯುವಕರು, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾಗಿ ಒಂದೇ ಒಂದು ಸರಿಯಾದ ಕಾರ್ಯಕ್ರಮ ಜಾರಿ ಮಾಡಲಿಲ್ಲ. ಇದೇನಾ ಅಚ್ಛೆ ದಿನ್? ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ ಮೋದಿಯವರೇ? ಇದಾ ನಿಮ್ಮ ಅಭಿವೃದ್ಧಿ?ʼ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ಮೇಲೆ 110 ಕೋಟಿ ಭ್ರಷ್ಟಾಚಾರ ಆರೋಪ
ಮಾಡದ ಕೆಲಸಕ್ಕೆ 110 ಕೋಟಿ ಹಣ ಬಿಡುಗಡೆ ಮಾಡಿದ ಅಧಿಕಾರಿಗಳು
ನೀರುಗಾಲುವೆ ವಿಭಾಗದ 110 ಕೋಟಿ ಕಾಮಗಾರಿ ಹೆಸರಲ್ಲಿ ಹಣ ರಿಲೀಸ್
ಕಳೆದ 3 ವರ್ಷದಲ್ಲಿ ನೂರಹತ್ತು ಕೋಟಿ ನೀಡಿರುವ ಅಧಿಕಾರಿಗಳು
Congress guarantee schemes: 1.56 ಕೋಟಿ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದರ ಜೊತೆಗೆ 1.50 ರೂ. ವಿದ್ಯುತ್ ದರ ಇಳಿಸಿದ್ದೇವೆ. ಇದಕ್ಕೆ ವಿರೋಧ ಪಕ್ಷಗಳು ಏನು ಹೇಳುತ್ತವೆ? ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಇದಕ್ಕೆ ಉತ್ತರಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
BJP vs Congress: ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು, ಜನರ ಅಭಿಪ್ರಾಯವನ್ನು ಧಿಕ್ಕರಿಸುವುದು, ಸಂವಿಧಾನವನ್ನು ಅಪಮಾನಿಸುವುದು ಕಾಂಗ್ರೆಸ್ಸಿಗರ ಸ್ವಭಾವ! ಎಂದು ಬಿಜೆಪಿ ಕಿಡಿಕಾರಿದೆ.
ರಾಜ್ಯಗಳ ಪರಿಸ್ಥಿತಿ ಏನಾದರೂ ಸರಿಯೇ ಕೇಂದ್ರ ಸರ್ಕಾರದ ಪಾಲಿಗೆ ಹೆಚ್ಚಿನ ತೆರಿಗೆ ಹಣ ಉಳಿಸಿಕೊಳ್ಳಬೇಕು ಎನ್ನುವ ತಮ್ಮ ಕುತಂತ್ರ ಫಲಿಸದೆ ಹೋದಾಗ ಅನಿವಾರ್ಯವಾಗಿ ಪ್ರಧಾನಿ ಮೋದಿ ತಮ್ಮ ಅವಧಿಯ ಪ್ರಥಮ ಬಜೆಟ್ ಮಂಡನೆಗೂ 48 ಗಂಟೆಗಳ ಮುನ್ನವಷ್ಟೇ ಆಯವ್ಯಯವನ್ನು ತಿದ್ದಿ ಬರೆಯುವ ಕೆಲಸಕ್ಕೆ ಕೈಹಾಕಿದ್ದರು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.