ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸಂತೋಷ್ ಕುಟುಂಬಸ್ಥರು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ತಾಕತ್ತಿದ್ದರೆ ಹೈಕೋರ್ಟ್, ಸುಪ್ರಿಂಕೋರ್ಟ್ ಗೆ ಹೋಗಿ ಯಶಸ್ವಿಯಾಗಿ ಬರಲಿ. ಗೆದ್ದು ಬಂದ್ರೆ ಅವರು ಹೇಳಿದ ಹಾಗೆ ಮಾಡ್ತೀನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಬಿ ರಿಪೋರ್ಟ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಮಾತಾಡಿದವರಿಗೆ ಬಿಲ್ ಸಾಂಕ್ಷನ್ ಆಗಲು ಸಾಧ್ಯವಿಲ್ಲ. ಪ್ರಧಾನಿಗೆ ಕಮಿಷನ್ ದಂಧೆ ಬಗ್ಗೆ ಪತ್ರ ಬರ್ದಿದ್ದಕ್ಕೆ ಡಿಫೇಮೇಶನ್ ಕೇಸ್ಹಾಕಿದ್ರು. ಸಂತೋಷ್ ಜೀವ ತಗೆದುಕೊಳ್ಳುವ ಹಾಗಾಯ್ತು ಎಂದು ಮದು ಅವರು ಅಸಮಾಧಾನ ಹೊರಹಾಕಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.