ರಾಜ್ಯದಲ್ಲಿ 1 ರಿಂದ 5 ನೇ ತರಗತಿಯವರೆಗೆ ಶಾಲೆ ಪುನರಾರಂಭ , ದಿನಾಂಕವೂ ನಿಗದಿ

ಈಗಾಗಲೇ ತಜ್ಞರ ಸಮಿತಿಯು ವರದಿಯನ್ನು ನೀಡಿದೆ. ಈ ವರದಿಯನ್ನಾಧರಿಸಿ ಆದೇಶ ಹೊರಡಿಸುವುದಾಗಿ ಸಿಎಂ ಹೇಳಿದ್ದಾರೆ.  ಯಾವ ದಿನಾಂಕದಿಂದ ತರಗತಿಗಳನ್ನು ಆರಂಭಿಸಲಾಗುವುದು ಎಂಬಿತ್ಯಾದಿ ವಿವರಗಳಿಗೆ ಸಂಬಂಧಿಸಿದಂತೆ,  ರಾಜ್ಯ ಮುಖ್ಯ ಕಾರ್ಯದರ್ಶಿ ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. 

Written by - Ranjitha R K | Last Updated : Oct 18, 2021, 04:39 PM IST
  • ರಾಜ್ಯದಲ್ಲಿ 1 ರಿಂದ 5 ನೇ ತರಗತಿಯವರೆಗೆ ಪುನರಾರಂಭ
  • ಶೀಘ್ರದಲ್ಲೇ ದಿನಾಂಕ ಪ್ರಕಟ : ಸಿಎಂ ಬಸವರಾಜ್ ಬೊಮ್ಮಾಯಿ
  • ಅಧಿಕಾರಿಗಳೊಂದಿಗಿನ ಚರ್ಚೆಯ ನಂತರ ನಿರ್ಧಾರ - ಸಿಎಂ
ರಾಜ್ಯದಲ್ಲಿ 1 ರಿಂದ 5 ನೇ ತರಗತಿಯವರೆಗೆ ಶಾಲೆ ಪುನರಾರಂಭ ,  ದಿನಾಂಕವೂ ನಿಗದಿ  title=
ರಾಜ್ಯದಲ್ಲಿ 1 ರಿಂದ 5 ನೇ ತರಗತಿಯವರೆಗೆ ಪುನರಾರಂಭ (file photo)

ಬೆಂಗಳೂರು :  ರಾಜ್ಯದಲ್ಲಿ ಒಂದರಿಂದ 5 ನೇ ತರಗತಿವರೆಗೆ ಶಾಲೆಗಳನ್ನು ಶೀಘ್ರವೇ (School reopen) ತೆರೆಯಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ (Basavraj Bommai) ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿಗಳು (karnataka CM) ತಿಳಿಸಿದ್ದಾರೆ. 

"ಈಗಾಗಲೇ ತಜ್ಞರ ಸಮಿತಿಯು ವರದಿಯನ್ನು ನೀಡಿದೆ. ಈ ವರದಿಯನ್ನಾಧರಿಸಿ ಆದೇಶ ಹೊರಡಿಸುವುದಾಗಿ ಸಿಎಂ ಹೇಳಿದ್ದಾರೆ.  ಯಾವ ದಿನಾಂಕದಿಂದ ತರಗತಿಗಳನ್ನು ಆರಂಭಿಸಲಾಗುವುದು ಎಂಬಿತ್ಯಾದಿ ವಿವರಗಳಿಗೆ ಸಂಬಂಧಿಸಿದಂತೆ,  ರಾಜ್ಯ ಮುಖ್ಯ ಕಾರ್ಯದರ್ಶಿ ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಬೊಮ್ಮಾಯಿ (Bommai) ತಿಳಿಸಿದ್ದಾರೆ. ಅಧಿಕಾರಿಗಳೊಂದಿಗಿನ ಚರ್ಚೆಗಳ ನಂತರ ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯುವ (Karnataka school reopen) ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ. 

ಇದನ್ನೂ  ಓದಿ : ಕೃಷಿ ವಿ.ವಿ. ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕ ಸ್ಪಂದನೆ-ರಾಜ್ಯಪಾಲರ ಭರವಸೆ

COVID-19 ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ರಾಜ್ಯದಲ್ಲಿ ಸೆಪ್ಟೆಂಬರ್ 6 ರಿಂದ  6 ರಿಂದ 8 ನೇ ತರಗತಿವರೆಗೆ ಮತ್ತು   ಆಗಸ್ಟ್ 23 ರಿಂದ  9 ರಿಂದ 12 ನೇ ತರಗತಿಯವೆರೆಗೆ ಶಾಲೆಯನ್ನು ಪುನರಾರಂಭಿಸಿತ್ತು. ಇದಕ್ಕೂ ಮೊದಲು  ಮಾತನಾಡಿದ್ದಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( Bc nagesh), ಕೋವಿಡ್ -19 ಕುರಿತು ರಾಜ್ಯದ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯುವುದಾಗಿ ಹೇಳಿದ್ದರು.  ಅಕ್ಟೋಬರ್ 21 ರಿಂದ ಆರಂಭಿಸುವಂತೆ ಸಮಿತಿ ಹೇಳಿದರೆ ಅಂದಿನಿಂದಲೇ ಶಾಲೆಯನ್ನು ಆರಂಭಿಸಲಾಗುವುದು. ಒಂದು ವಾರದ ನಂತರ ಆರಂಭಿಸುವಂತೆ ಸೂಚಿಸಿದರೆ ವಾರದ ನಂತರ ಪ್ರಾರಂಭಿಸಲಾಗುವುದು ಎಂದಿದ್ದಾರೆ. 

ಸರ್ಕಾರವು ಒಂದರಿಂದ ಒಂದರಿಂದ ಐದು ತರಗತಿಗಳನ್ನು ಪ್ರಾರಂಭಿಸಲು ಬಯಸುತ್ತದೆ. ಆದರೆ ಆರಂಭಿಕ ಒಂದು ವಾರ  ಅರ್ಧ ದಿನದ ತರಗತಿಗಳನ್ನು ನಡೆಸಲಾಗುವುದು. ನಂತರ ಕ್ರಮೇಣ ಪೂರ್ತಿ ದಿನ ತರಗತಿ ನಡೆಸಲಾಗುವುದು ಎಂದು ಹೇಳಿದ್ದಾರೆ . 
ಆದರೆ LKG ಮತ್ತು UKG ಮಕ್ಕಳಿಗಾಗಿ ಶಾಲೆಗಳನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವರು ಹೇಳಿದ್ದಾರೆ. 

ಇದನ್ನೂ  ಓದಿ : ಮಳೆ ನಿಂತ ನಂತರ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಸಲಾಗುವುದು - ಸಿಎಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News