ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಏಳು ಸ್ಥಳಗಳ ಗುರುತು: ಡಿಸಿಎಂ ಡಿಕೆ ಶಿವಕುಮಾರ್

ಅಂತಿಮವಾಗಿ ಕೇಂದ್ರ ಸರ್ಕಾರವೇ ಅನುಮತಿ ನೀಡಬೇಕು. ಕೇಂದ್ರ ತಂಡ ಸಾಧಕ-ಭಾದಕಗಳನ್ನು ಗಮನಿಸಿ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಯಾವ ಜಾಗದಲ್ಲಿ ವಿಮಾನ ನಿಲ್ದಾಣ ಬಂದರೆ ಒಳ್ಳೆಯದು, ಬೆಂಗಳೂರಿಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.  

Written by - Prashobh Devanahalli | Last Updated : Aug 5, 2024, 09:52 PM IST
    • ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಅಧಿಕಾರಿಗಳ ಸಭೆ
    • ಈ ಕಾರಣಕ್ಕೆ ಎಂಟು ಸ್ಥಳಗಳನ್ನು ಗುರುತಿಸಲಾಗಿದೆ
    • ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್
ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಏಳು ಸ್ಥಳಗಳ ಗುರುತು: ಡಿಸಿಎಂ ಡಿಕೆ ಶಿವಕುಮಾರ್ title=
File Photo

ಬೆಂಗಳೂರು: ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ವಿಧಾನಸೌಧದಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು,ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಅತಿದೊಡ್ಡ ನಿಲ್ದಾಣವಾಗಿದೆ. ಮುಂಬೈ, ದೆಹಲಿ ಬಿಟ್ಟರೇ ದಕ್ಷಿಣ ಭಾರತದಲ್ಲೇ ದೊಡ್ಡ ನಿಲ್ದಾಣವಾಗಿದ್ದು 70 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ 110 ಮಿಲಿಯನ್ ಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ” ಎಂದರು.

ಇದನ್ನೂ ಓದಿ: ಶ್ರಾವಣದಲ್ಲಿ 90 ವರ್ಷಗಳ ಬಳಿಕ ಶಿವಚಂದ್ರ ಯೋಗ: ಈ 3 ರಾಶಿಗಳ ಮೇಲೆ ಮಹಾಶಿವನ ಕೃಪಾದೃಷ್ಟಿ! ಸಿರಿಸಂಪತ್ತಿನ ಮಳೆ, ಇವರಷ್ಟು ಲಕ್ಕಿ ಮತ್ಯಾರು ಇರಲ್ಲ

ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಹೊಸ ನಿಲ್ದಾಣವನ್ನು ಇದೇ ರೀತಿ ನಿರ್ಮಾಣ ಮಾಡಲಾಗುವುದು. ಇದರಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪಾಲೂ ಇರುತ್ತದೆ. ಮೂಲಸೌಕರ್ಯ ವ್ಯವಸ್ಥೆ ನೋಡಿ ಜಾಗಕ್ಕೆ ಹಸಿರು ನಿಶಾನೆ ನೀಡಲಾಗುತ್ತದೆ. ಸಚಿವರಾದ ಎಂ.ಬಿ.ಪಾಟೀಲರು ಅತ್ಯಂತ ಅಚ್ಚುಕಟ್ಟಾಗಿ ಯೋಜನೆ ಸಿದ್ದಪಡಿಸಿಕೊಂಡಿದ್ದಾರೆ. ತಾಂತ್ರಿಕ ವರದಿಗಳು ಸಹ ಬಂದಿದ್ದು ಇವುಗಳನ್ನು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಲಾಗುವುದು. ನಂತರ ದೆಹಲಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ಅಂತಿಮವಾಗಿ ಕೇಂದ್ರ ಸರ್ಕಾರವೇ ಅನುಮತಿ ನೀಡಬೇಕು. ಕೇಂದ್ರ ತಂಡ ಸಾಧಕ-ಭಾದಕಗಳನ್ನು ಗಮನಿಸಿ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಯಾವ ಜಾಗದಲ್ಲಿ ವಿಮಾನ ನಿಲ್ದಾಣ ಬಂದರೆ ಒಳ್ಳೆಯದು, ಬೆಂಗಳೂರಿಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ನೋಡಿ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಭಾಗದಲ್ಲಿ ವಿಮಾನ ನಿಲ್ಧಾಣ ಬರುತ್ತದೆಯೇ ಎಂದಾಗ “ಇದು ಕರ್ನಾಟಕಕ್ಕೆ ಅನುಕೂಲವಾಗಲು ಮಾಡುತ್ತಿರುವುದು. ನಿಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ” ಎಂದು ತಿಳಿಸಿದರು.

ವಿಮಾನ ನಿಲ್ದಾಣ ನಿರ್ಮಾಣದ ಕಾಲಾವಧಿಯ ಬಗ್ಗೆ ಕೇಳಿದಾಗ “ಕೇಂದ್ರದಿಂದ ಅನುಮತಿ ನೀಡಿದ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು. 2035 ರ ವೇಳೆಗೆ ಕಾರ್ಯಾಚರಣೆ ಮಾಡುವಂತೆ ನಿರ್ಮಾಣ ಮಾಡಲಾಗುವುದು. ಈ ಮೊದಲು ಎಚ್ ಎಎಲ್ ಹಾಗೂ ಮೈಸೂರಿನಲ್ಲಿ ನಿರ್ಮಾಣ ಮಾಡಲು ಅವಕಾಶ ನೀಡಲಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದೆವು. ಬೇರೆ ರಾಜ್ಯಗಳು ಈ ಸಂದರ್ಭವನ್ನು ಬಳಸಿಕೊಳ್ಳಬಾರದು ಎಂದು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು.

ಇದನ್ನೂ ಓದಿ: ಅಂದು "ನೀನ್ಯಾವ ಸೀಮೆ ನಟ" ಅಂದ್ರು... 1000 ರೂ.ಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆತ ಇಂದು 100 ಕೋಟಿ ಸಂಭಾವನೆ ಪಡೆಯುವ ಖ್ಯಾತ ನಟ!

150 ಕಿ.ಮೀ ವ್ಯಾಪ್ತಿಯಲ್ಲಿ ಎರಡೆರಡು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಬಾರದು ಎನ್ನುವ ನಿಯಮವಿತ್ತು. ಈ ನಿಯಮ 2032- 33 ಕ್ಕೆ ಮುಗಿಯಲಿದೆ. ಪ್ರಸ್ತುತ ಎರಡು ರನ್ ವೇಗಳನ್ನು 4 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು ನಿರ್ಮಾಣ ಮಾಡಲಾಗಿತ್ತು. ಎರಡು ರನ್ ವೇ ಗಳು ಭವಿಷ್ಯದಲ್ಲಿ ಸಾಲುವುದಿಲ್ಲ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಕೇವಲ ಒಂದು ವಿಮಾನ ನಿಲ್ದಾಣ ಸಾಕಾಗುವುದಿಲ್ಲ. ಸಚಿವರಾದ ಎಂಬಿ.ಪಾಟೀಲ್ ಅವರ ನೇತೃತ್ವದಲ್ಲಿ ಹತ್ತಾರು ಸಭೆಗಳು ನಡೆಸಲಾಗಿದೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಂದಷ್ಟು ನಿಯಮಗಳಿಗೆ ಆದ ಕಾರಣಕ್ಕೆ ಈಗಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News