ಸಿದ್ದರಾಮಯ್ಯ ವಯಸ್ಸು 71 ಅಲ್ಲ 21,ಅವರಿಗೆ ಇನ್ನೊಂದು ಮದುವೆ ಮಾಡುವೆ- ಬಿ.ಬಿ.ಚಿಮ್ಮನಕಟ್ಟಿ

    

Updated: Jun 11, 2018 , 06:37 PM IST
ಸಿದ್ದರಾಮಯ್ಯ ವಯಸ್ಸು 71 ಅಲ್ಲ 21,ಅವರಿಗೆ ಇನ್ನೊಂದು ಮದುವೆ ಮಾಡುವೆ- ಬಿ.ಬಿ.ಚಿಮ್ಮನಕಟ್ಟಿ

ಬಾದಾಮಿ: ಸಿದ್ದರಾಮಯ್ಯನವರ ವಯಸ್ಸು 71 ಅಲ್ಲ 21,ಅವರಿಗೆ ಇನ್ನೊಂದು ಮದುವೆ ಮಾಡುವೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರೇ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಚಿಮ್ಮನಕಟ್ಟಿ , ಸಿದ್ದರಾಮಯ್ಯ ಅವರಿಗೆ ವಯಸ್ಸು 71 ಎಂದು ಹೇಳುತ್ತಾರೆ. ಆದರೆ, ಅವರು ಈಗಲೂ ಕೂಡ 21ರ ವಯಸ್ಸಿನ ಹುಡುಗನಂತೆ ಓಡಾಡುತ್ತಿದ್ದಾರೆ.ಅದ್ದರಿಂದ ಅವರ ಹುಮ್ಮಸ್ಸು ನೋಡಿದರೆ ನಾನು ಅವರಿಗೆ ಇನ್ನೊಂದು ಮದುವೆ ಮಾಡಬೇಕು ಎಂದು ಅನ್ನಿಸುತ್ತಿದೆ ಎಂದು ತಿಳಿಸಿದರು. ಈ ಮಾತಿಗೆ ಪಕ್ಕದಲ್ಲೇ ಕುಳಿತಿದ್ದ ಸಿದ್ದರಾಮಯ್ಯ ಮುಗುಳನಗೆ ಬೀರಿದರು.

ಇದೇ ಸಂದರ್ಭದಲ್ಲಿ ಬಾದಾಮಿಯಲ್ಲಿ ಸ್ವಲ್ಪ ಸಡಿಲ ಬಿಟ್ಟಿದ್ದರೂ ಸಾಕಿತ್ತು ಇಲ್ಲಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸಿ ಬಿಡುತ್ತಿದ್ದರು.ಅವರಿಗೆ ಒಳ್ಳೆಯದಾಗಲಿ ಎಂದು ಚಿಮ್ಮನಕಟ್ಟಿ  ಶುಭಕೋರಿದರು.