Heavy Rain : ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಭಾರೀ ಮಳೆ..!

ಕಳೆದ ಎಂಟು-ಹತ್ತು ದಿನಗಳ ಕಾಲ ಕಡಿಮೆಯಾಗಿದ್ದ ಪೂರ್ವ ಮುಂಗಾರು ಚೇತರಿಕೆ

Last Updated : May 10, 2021, 01:50 PM IST
  • ಕಳೆದ ಎಂಟು-ಹತ್ತು ದಿನಗಳ ಕಾಲ ಕಡಿಮೆಯಾಗಿದ್ದ ಪೂರ್ವ ಮುಂಗಾರು ಚೇತರಿಕೆ
  • ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆ
  • ರಾಜ್ಯದಲ್ಲಿ ಬೇಸಿಗೆ ಮಳೆ ಸುಮಾರು ಹತ್ತು ದಿನಗಳಿಂದ ಕಡಿಮೆ
Heavy Rain : ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಭಾರೀ ಮಳೆ..! title=

ಬೆಂಗಳೂರು : ಕಳೆದ ಎಂಟು-ಹತ್ತು ದಿನಗಳ ಕಾಲ ಕಡಿಮೆಯಾಗಿದ್ದ ಪೂರ್ವ ಮುಂಗಾರು ಚೇತರಿಕೆಯಾಗುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಬೇಸಿಗೆ ಮಳೆ ಸುಮಾರು ಹತ್ತು ದಿನಗಳಿಂದ ಕಡಿಮೆಯಾಗಿತ್ತು. ಆದರೂ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆ ಮುಂದುವರೆದಿತ್ತು.

ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಾಗಿದ್ದು, ಇಂದಿನಿಂದ ಮೂರು-ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ(Heavy Rain)ಯಾಗುವ ಮುನ್ಸೂಚನೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ತಿಳಿಸಿದ್ದಾರೆ.

ಇದನ್ನೂ ಓದಿ : Infosys Foundation : ಕೊರೋನಾ ಸಂಕಷ್ಟಕ್ಕೆ ಮತ್ತೆ ₹100 ಕೋಟಿ ಹಣ ನೀಡಿದ ಇನ್‌ಫೋಸಿಸ್‌ ಫೌಂಡೇಶನ್!

ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ(Rain)ಯಾಗುವ ಲಕ್ಷಣಗಳಿವೆ. ಕಳೆದೊಂದು ವಾರಕ್ಕೂ ಹೆಚ್ಚು ಕಾಲದಿಂದ ರಾಜ್ಯದಲ್ಲಿ ಒಣ ಹವೆ ಇದ್ದುದ್ದರಿಂದ ವಾತಾವರಣದಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಿತ್ತು. ಇದರಿಂದ ವಾತಾವರಣದಲ್ಲಿನ ತೇವಾಂಶವನ್ನು ಸೆಳೆದುಕೊಳ್ಳಲಾಗಿದೆ. ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಪಶ್ಚಿಮದಿಂದ ಪೂರ್ವದ ಕಡೆಗೆ ಗಾಳಿ ಬೀಸುತ್ತಿರುವುದು ಮಳೆಯಾಗಲು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕರೋನಾ ಕಠಿಣ ಲಾಕ್‍ಡೌನ್ ನಡುವೆ ಲಸಿಕೆ ಹಾಕಿಸಿಕೊಳ್ಳುವುದು ಹೇಗೆ..?

ಚಾಮರಾಜನಗರ, ಮೈಸೂರು(Mysore) ಸೇರಿದಂತೆ ಹಲವು ಕಡೆಗಳಲ್ಲಿ ಪೂರ್ವ ಮುಂಗಾರಿನ ಬಿತ್ತನೆಯಾಗಿದ್ದು, ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ. ಸಂಜೆ ಹಾಗೂ ರಾತ್ರಿ ವೇಳೆ ರಾಜ್ಯದ ಕೆಲವೆಡೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Umesh Katti : 'ನೀವು ಉಳಿಯುತ್ತಿರೋ ಇಲ್ಲವೋ ನಾನಂತೂ ಉಳಿಯಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News