ಹುಬ್ಬಳ್ಳಿ: ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಕಿ ನೀಡಿದ್ದು, ಈಗ ಕರ್ನಾಟಕ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಈಗಾಗಲೇ ಎಂಟು ಬಾರಿ ಗೆಲುವು ಸಾಧಿಸಿ ದಾಖಲೆ ಮಾಡಿದ್ದೇ. ಆದರೆ ಈಗ ನಾನು ಸಭಾಪತಿ ಆಗಿರುವಾಗಲೇ ಹನ್ನೊಂದು ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.
ಇದನ್ನೂ ಓದಿ- ಕರ್ನಾಟಕ ಮೆಂಟಲ್ ಹೆಲ್ತ್ ಹಬ್ ಆಗಿ ಪರಿವರ್ತನೆ; ದಿನೇಶ್ ಗುಂಡೂರಾವ್
2018ರಲ್ಲಿ ವಿ.ಎಸ್.ಉಗ್ರಪ್ಪ, 2021ರಲ್ಲಿ ಶ್ರೀನಿವಾಸ ಮಾನೆ, ಸಿ.ಆರ್.ಮನೋಹರ, 2022ರಲ್ಲಿ ಸಿ.ಎಂ.ಇಬ್ರಾಹಿಂ, 2023ರಲ್ಲಿ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್, ಆರ್.ಶಂಕರ್, ಸವದಿ ಲಕ್ಷ್ಮಣ, ಆಯನೂರು ಮಂಜುನಾಥ್, 2024ರಲ್ಲಿ ಜಗದೀಶ್ ಶೆಟ್ಟರ್, ಮರಿತಿಬ್ಬೇಗೌಡ ಸೇರಿದಂತೆ ಒಟ್ಟು ಹನ್ನೊಂದು ಜನರು ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ- ನಾವು ಜೆಡಿಎಸ್ʼನವರನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೇವೆ: ಸಂಸದ ಡಿ.ಕೆ. ಸುರೇಶ್
ಇನ್ನೂ ಎರಡು ದಿನಗಳಲ್ಲಿ ಇನ್ನೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ. ಎರಡು ವಿಧವಾಗಿ ರಾಜೀನಾಮೆ ನೀಡಬಹುದಾಗಿದೆ. ಅದು ಹೇಗೆ ಇರಲಿ ಒಬ್ಬ ಸದಸ್ಯ ಮಾತ್ರ ರಾಜೀನಾಮೆ ನೀಡುವುದು ಶತಸಿದ್ಧ ಎಂದು ಅವರು ಮಾಹಿತಿ ನೀಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.