ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ : ಬಿಸಿಲಿಗೆ ತಂಪನ್ನು ಅರಸಿ ಬರುತ್ತಿರುವ ಪ್ರಾಣಿಗಳು, ಜನರಲ್ಲಿ ಹೆಚ್ಚಿದ ಆತಂಕ

ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬೆಂಗಳೂರಿನಲ್ಲಿ ವಿಪರೀತ ಸೆಕೆಯಿಂದ  ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುವಂತಾಗಿದ್ದು, ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಹೊರ ಬರುತ್ತಿವೆ.

Written by - Zee Kannada News Desk | Last Updated : Mar 16, 2024, 10:25 PM IST
  • ಪೀಪಲ್ ಫಾರ್ ಅನಿಮಲ್ (ಪಿಎಫ್‌ಎ) ಜನರಲ್ ಮ್ಯಾನೇಜರ್ ಕರ್ನಲ್ ನವಾಜ್ ಷರೀಫ್ ಅವರು ಹೇಳಿದ್ದಾರೆ.
  • ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ತಂಪಾದ ಜಾಗಗಳನ್ನು ಹುಡುಕಿಕೊಂಡು ಹಾವುಗಳು ಬಿಲಗಳಿಂದ ಹೊರ ಬರುತ್ತಿವೆ.
  • ಈ ಸಂಖ್ಯೆ ಹೆಚ್ಚಾಗಿದೆ ಎಂದು ಬಿಬಿಎಂಪಿ ವನ್ಯಜೀವಿ ವಾರ್ಡನ್ ಪ್ರಸನ್ನಕುಮಾರ್ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ : ಬಿಸಿಲಿಗೆ ತಂಪನ್ನು ಅರಸಿ ಬರುತ್ತಿರುವ ಪ್ರಾಣಿಗಳು, ಜನರಲ್ಲಿ ಹೆಚ್ಚಿದ ಆತಂಕ title=

Temperature in Bengaluru : ಬೆಂಗಳೂರಿನಲ್ಲಿ ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುವಂತಾಗಿದೆ. ವಿಪರೀತ ಸೆಕೆಯಿಂದ ಮನುಷ್ಯರು ಫ್ಯಾನು, ಏಸಿಗಳ ಮೊರೆ ಹೋಗುತ್ತಿದ್ದು, ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಹೊರ ಬರುತ್ತಿವೆ.  ಬಿಸಿಲ ದಗೆ ತಾಳಲಾರದೆ ಹಾವುಗಳು ಬಿಲಗಳಿಂದ ಹೊರಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. 

ಆಗಸದಲ್ಲಿ ಹಾರಾಡುವ ಮೈನಾ, ಕಾಗೆಯಂತಹ  ಪಕ್ಷಿಗಳು  ಕೆಳಗೆ ಬೀಳುತ್ತಿವೆ.  ಕೆಳಗೆ ಬಿದ್ದ ಪಕ್ಷಿಗಳ ರಕ್ಷಣ ಮಾಡುವಂತೆ ಆರ್ ಆರ್ ನಗರ ವಲಯ, ಯಲಹಂಕ ಮತ್ತು ದಾಸರಹಳ್ಳಿ ವಲಯದಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಉದ್ಯಾನವನಗಳು ಹಾಗೂ ಅಡುಗೆ ಮನೆಗಳಲ್ಲಿ ಹಾವು ಕಾಣಿಸಿಕೊಳ್ಳುತ್ತಿರುವ ಕುರಿತು ಕರೆಗಳು ಬರುತ್ತಿವೆ.

ಇದನ್ನು ಓದಿ : ಪ್ರಸಾರ ಭಾರತಿ ನೂತನ ಅಧ್ಯಕ್ಷರಾಗಿ ನವನೀತ್ ಕುಮಾರ್ ಸೆಹಗಲ್ ನೇಮಕ

ಈ ಬಾರಿಯ ಬೇಸಿಗೆಯಲ್ಲಿ ಸಹಾಯವಣಿ ಸಂಖ್ಯೆಗೆ ಹೆಚ್ಚಿನ ಕರೆಗಳು ಬರುತ್ತಿರುವೆ ರಕ್ಷಣಾ ಕಾರ್ಯಗಳ ಸಂಖ್ಯೆಯಲ್ಲಿಯೂ ಹೆಚ್ಚಳಗಳು ಕಂಡು ಬಂದಿವೆ. ಇಲಾಖೆಗೆ ಪ್ರತಿದಿನ ಕನಿಷ್ಠ 100 ಕರೆಗಳು ಬರುತ್ತಿವೆ, ಕಳೆದ ಎರಡು ವಾರಗಳ ಹಿಂದೆ 45 ಕರೆಗಳು ಬರುತ್ತಿತ್ತು. ಆದರೀಗ ಈ ಸಂಖ್ಯೆ ಹೆಚ್ಚಾಗಿದೆ ಎಂದು ಬಿಬಿಎಂಪಿ ವನ್ಯಜೀವಿ ವಾರ್ಡನ್ ಪ್ರಸನ್ನಕುಮಾರ್ ಮಾತನಾಡಿದ್ದಾರೆ.

 ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.20ರಷ್ಟು ಹೆಚ್ಚು ದೂರವಾಣಿ ಕರೆಗಳು ಬರುತ್ತಿವೆ ಎಂದು ಪೀಪಲ್ ಫಾರ್ ಅನಿಮಲ್ (ಪಿಎಫ್‌ಎ) ಜನರಲ್ ಮ್ಯಾನೇಜರ್ ಕರ್ನಲ್ ನವಾಜ್ ಷರೀಫ್ ಅವರು ಹೇಳಿದ್ದಾರೆ.

ಇದನ್ನು ಓದಿ : ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ಈ 5 ಲಕ್ಷಣಗಳು ಕಾಣಿಸಿಕೊಂಡರೆ ರಕ್ತದೊತ್ತಡ ಹೆಚ್ಚಿದೆ ಎಂದರ್ಥ!

ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ತಂಪಾದ ಜಾಗಗಳನ್ನು ಹುಡುಕಿಕೊಂಡು ಹಾವುಗಳು ಬಿಲಗಳಿಂದ ಹೊರ ಬರುತ್ತಿವೆ. ಇದರಲ್ಲಿ ಭಯಪಡುವ ಅಗತ್ಯವಿಲ್ಲ. ಈ ಹಾವುಗಳನ್ನು ತಾವೇ ನಿಭಾಯಿಸುವ ಬದಲು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಜನರು ಕರೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News