ಬೆಂಗಳೂರು: ಮಾಜಿ ಸಚಿವ ಆರ್.ಅಶೋಕ್ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು ಎಂಬ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ʼಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು ʼಬಕೆಟ್ ಜನತಾ ಪಾರ್ಟಿ!ʼ ಎಂದು ಟೀಕಿಸಿದೆ.
ʼಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು! ಭ್ರಷ್ಟ ಜನತಾ ಪಾರ್ಟಿ, ಬ್ಲಾಕ್ಮೇಲ್ ಜನತಾ ಪಾರ್ಟಿ, ಬ್ಲೂ ಬಾಯ್ಸ್ ಜನತಾ ಪಾರ್ಟಿ ಈಗ ಹೊಸದಾಗಿ ಬಕೆಟ್ ಜನತಾ ಪಾರ್ಟಿ! ಆರ್.ಅಶೋಕ್ ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿರಿ? ಯಾವ ಬ್ರಾಂಡ್ ಬಕೆಟ್ ಹಿಡಿದಿರಿ? ಯಾರಿಗೆ ಬಕೆಟ್ ಹಿಡಿದು ನಿಮ್ಮ ಅಕ್ರಮಗಳನ್ನು ಮುಚ್ಚಿಕೊಂಡಿರಿ?ʼ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಕೆಟ್ ಬಕೆಟ್ ಬಕೆಟ್....
"ಅಶೋಕ್ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು"
- ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್!ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು -
B ಬಕೆಟ್ Jಜನತಾ Pಪಾರ್ಟಿ! pic.twitter.com/2Uyf1YBWw5— Karnataka Congress (@INCKarnataka) December 9, 2023
ಇದನ್ನೂ ಓದಿ: CM Ibrahim : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಜೆಡಿಎಸ್ನಿಂದ ಸಿ.ಎಂ. ಇಬ್ರಾಹಿಂ ಉಚ್ಛಾಟನೆ..!
ʼಬಿಜೆಪಿಯಲ್ಲಿನ ಕಚ್ಚಾಟದಿಂದಾಗಿ ಸಾಮ್ರಾಟರು "ಶೋಕ" ರಾಗ ಹಾಡುತ್ತಿದ್ದಾರೆ. ಅಶೋಕರಲ್ಲಿ ಆ ಕಳೆದು "ಶೋಕ" ಮಾತ್ರ ಉಳಿದುಕೊಂಡಿದೆ! ಸದನದಲ್ಲಿ ಏನು ಚರ್ಚಿಸಬೇಕು, ಏನು ಮಾಡಬೇಕು ಎನ್ನುವುದು ವಿರೋಧ ಪಕ್ಷದ ನಾಯಕನ ತೀರ್ಮಾನವೋ, ಶಾಸಕನೊಬ್ಬನ ತೀರ್ಮಾನವೋ? ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕ ಅಶೋಕ್ ಅವರೋ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಅವರೋ ಎಂಬ ಗೊಂದಲ ಸ್ವತಃ ಬಿಜೆಪಿಗರಿಗೆ ಇದ್ದಂತಿದೆ. ಶಾಸಕಾಂಗ ಪಕ್ಷದ ನಾಯಕನ ನಿರ್ಧಾರಕ್ಕೆ ಅವರ ಶಾಸಕರೇ ಕಿಮ್ಮತ್ತು ಕೊಡದಿರುವುದು #BucketJanathaParty ಅನುಭವಿಸುತ್ತಿರುವ ದುರಂತ ಸ್ಥಿತಿ. ಬಕೆಟ್ ಹಿಡಿದು ವಿಪಕ್ಷ ನಾಯಕರಾಗಿದ್ದಕ್ಕೆ ನಿಮಗೆ ಈ ದುಃಸ್ಥಿತಿಯೇ ಆರ್.ಅಶೋಕ್?ʼ ಎಂದು ಕಾಂಗ್ರೆಸ್ ಕುಟುಕಿದೆ.
ಬಿಜೆಪಿಗೆ ಬಿಜೆಪಿಗರಿಂದಲೇ ಸಿಕ್ಕಿದ್ದು ಅದೆಷ್ಟು ಹೆಸರುಗಳು!
🔹ಭ್ರಷ್ಟ ಜನತಾ ಪಾರ್ಟಿ
🔹ಬ್ಲಾಕ್ಮೇಲ್ ಜನತಾ ಪಾರ್ಟಿ
🔹ಬ್ಲೂ ಬಾಯ್ಸ್ ಜನತಾ ಪಾರ್ಟಿ
ಈಗ ಹೊಸದಾಗಿ
🔹ಬಕೆಟ್ ಜನತಾ ಪಾರ್ಟಿ!@RAshokaBJP ಅವರೇ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಯಾರಿಗೆ ಬಕೆಟ್ ಹಿಡಿದಿರಿ? ಯಾವ ಬ್ರಾಂಡ್ ಬಕೆಟ್ ಹಿಡಿದಿರಿ?
ಯಾರಿಗೆ ಬಕೆಟ್… pic.twitter.com/4UkDEnqSjL— Karnataka Congress (@INCKarnataka) December 9, 2023
ʼಯತ್ನಾಳ್ ಹೇಳಿದ್ದಕ್ಕೆ ಸಭಾತ್ಯಾಗ ಮಾಡಿದೆವು" ಎನ್ನುವ ಮೂಲಕ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಎಂದು ಆರ್.ಅಶೋಕ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಬಿಜೆಪಿಯಲ್ಲಿ ಕೆಂಡದಂತಹ ಕಚ್ಚಾಟವಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾತಿಗೆ ಮೂರು ಪೈಸೆ ಕಿಮ್ಮತ್ತಿಲ್ಲ ಎನ್ನುವುದು ಕೂಡ ಬಿಜೆಪಿಯ "ಸದನ ಕದನ"ದಿಂದ ಬಯಲಾಗಿದೆ. ಡಿಯರ್ ಬಿಜೆಪಿ, ನಿಮ್ಮದು "ಮನೆಯೊಂದು ಮೂರು ಬಾಗಿಲಲ್ಲ, ಮುನ್ನೂರು ಬಾಗಿಲು" ಅಲ್ಲವೇ!ʼ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಪರಿಪೂರ್ಣ ಕಲಾವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೂಟಾಟಿಕೆಯನ್ನು ಇನ್ನಾದರೂ ಬಿಡಿ!
ರಾಜಕೀಯ ಪಕ್ಷ ಬದಲಾದಂತೆ "ಹಿಂದೂ ಉಲಿ"ಯ ವೇಷವೂ ಬದಲಾಗುತ್ತದೆ!
ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ.
ಮುಸ್ಲಿಮರೊಂದಿಗೆ ಬದುಕು.
ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ.@BasanagoudaBJP ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ!ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ… pic.twitter.com/zhqpmFkPdD
— Karnataka Congress (@INCKarnataka) December 9, 2023
ʼರಾಜಕೀಯ ಪಕ್ಷ ಬದಲಾದಂತೆ "ಹಿಂದೂ ಉಲಿ"ಯ ವೇಷವೂ ಬದಲಾಗುತ್ತದೆ! ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ. ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿʼ ಎಂದು ಕಾಂಗ್ರೆಸ್ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ