ಹೊನ್ನಾವರ : ಇತ್ತೇಚೆಗೆ ಉತ್ತರಕನ್ನಡ ಜಿಲ್ಲೆಯು ಕೋಮು ಗಲಭೆಯ ವಿಚಾರವಾಗಿ ಸುದ್ದಿಯಲ್ಲಿದೆ.ಇನ್ನು ಪರೇಶ ಮೆಸ್ತಾ ಕೊಲೆಯ ಪ್ರಕರಣವು ಜೀವಂತವಾಗಿರುವ ಸಂದರ್ಭದಲ್ಲಿ ಮತ್ತೆ ಈಗ ಕಾವ್ಯ ಶೇಖರ ಪ್ರಕರಣದ ಮೂಲಕ ಅನ್ಯ ಕೋಮಿನವರ ಮೇಲೆ ದೂರು ಹೊರೆಸುವುದರ ಮೂಲಕ ಕೋಮು ಗಲಭೆಗೆ ಪ್ರಚೋದನೆ ಕೊಡುವ ಮತ್ತೊಂದು ಆಘಾತಕಾರಿ ವಿಷಯವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಾಗಾದರೆ ಈ ಘಟನೆಯ ಹಿನ್ನಲೆ ಏನು ?
ಡಿಸೆಂಬರ್ 14ರಂದು ಹೊನ್ನಾವರ ತಾಲ್ಲೂಕಿನ ಕೊಡ್ಲಗದ್ದೆ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ತಾನು ಶಾಲೆಗೆ ಹೋಗುವಾಗ ದಾರಿಯಲ್ಲಿ ಇಬ್ಬರು ಹಿಂದಿನಿಂದ ಬಂದು ಬಾಯಿಗೆ ಕರ್ಚಿಫ್ ತುರುಕಿ ಕೈಗೆ ಚಾಕುವಿನಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರಿದ್ದಳು. ಹಾಗೆ ಬಂದವರಲ್ಲಿ ಒಬ್ಬ ಕಪ್ಪಗೆ – ದಪ್ಪಗಿದ್ದನೆಂದೂ ಮತ್ತೊಬ್ಬ ತೆಳ್ಳಗೆ – ಬೆಳ್ಳಗಿದ್ದನೆಂದೂ ವಿವರ ನೀಡಿದ್ದಳು. ಅವಳು ವಿವರಣೆ ನೀಡಿದ ಆಧಾರದ ಮೇಲೆ ಈ ಕುರಿತಾಗಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಘಟನೆಯ ಸಂಪೂರ್ಣ ವಿವರವನ್ನು ಈ ಕೆಳಗಿನ ಪ್ರಕಟಣೆಯಲ್ಲಿ ನೀಡಿದ್ದಾರೆ .
ಈ ವಿಷಯ ಕೆಲವು ಕಿಡಿಗೇಡಿಗಳು ಅದನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾಗಿ ಅದನ್ನು. ಮುಸ್ಲಿಂ ಯುವಕರೇ ಈ ಕೃತ್ಯ ಎಸಗಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದರು. ಆಗಲೇ ಕೋಮು ದಳ್ಳುರಿಗೆ ಬಲಿಯಾಗಿದ್ದ ಪಟ್ಟಣ ಮತ್ತೆ ಈ ಘಟನೆಯ ಮೂಲಕ ಮುಸ್ಲಿಮ ಸಮುದಾಯಗಳ ಮೇಲೆ ದಾಳಿಯನ್ನು ಮಾಡಲಾಗಿದೆ.
ನಂತರ ಉತ್ತರ ಕನ್ನಡ ಪೊಲೀಸರು ಕಾವ್ಯಾಳ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚುರುಕಿನ ತನಿಖೆ ನಡೆಸಲು ಪ್ರಾರಂಭ ಮಾಡಿದರು .ಅಲ್ಲದೆ ಆ ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕರ ಸುಪರ್ದಿಗೆ ಒಪ್ಪಿಸುವ ಮೂಲಕ . ಅಲ್ಲಿನ ವಿಚಾರಣೆ ಹಾಗೂ ಸಮರ್ಪಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ಒಟ್ಟು ಪ್ರಕರಣವೇ ಸುಳ್ಳೆಂದು ಸಾಬೀತಾಗಿದೆ. ಆ ಬಾಲಕಿ ತನಗೆ ತಾನೇ ನಿಂಬೆ ಮುಳ್ಳಿನಿಂದ ಹೊಡೆದುಕೊಂಡಿರುವ ಅಂಶ ಆಪ್ತ ಸಮಾಲೋಚಕರ ರೊಂದಿಗಿನ ಮಾತುಕತೆಯ ಮೂಲಕ ಬೆಳಕಿಗೆ ಬಂದಿದೆ.
ಈ ನಕಲಿ ಸುದ್ದಿಯನ್ನು ಹಬ್ಬಿಸಿದ್ದರ ಹಿನ್ನಲೆ ಏನು ?
ಪ್ರತಿದಿನ ಮನೆಯಿಂದ ಶಾಲೆಗೆ ನಡೆದುಹೋಗುತ್ತಿದ್ದ ಬಾಲಕಿಯನ್ನು ಅದೇ ಹಳ್ಳಿಯ ಗಣೇಶ ನಾಯ್ಕ ಎಂಬ ಯುವಕ ಆ ಬಾಲಕಿಗೆ ಬೈಕಿನಲ್ಲಿ ಬಾ ಎಂದು ಪೀಡಿಸುತ್ತಿದ್ದ. ಅವಳು ನಿರಾಕರಿಸಿದಾಗ “ನಿನಗೆ ಏನಾದರೂ ಆದರೆ ನೀನಾಗಿಯೇ ಬರುತ್ತೀಯ” ಎಂದು ಹೆದರಿಸಿದ್ದ. ಆಗ ವನು ತನ್ನ ಮೇಲೆ ಅತ್ಯಾಚಾರ ಮಾಡಬಹುದು, ಇದರಿಂದ ಮನೆಯ ಮಾನ ಹರಾಜಾಗಿ ಹೋಗುತ್ತದೆ ಅಂತಾ ಬಾಲಕಿ ಎಂದು ಬಾಲಕಿ ಹೆದರಿದ್ದಳು. ಇದನ್ನು ತನ್ನ ತಾಯಿಗೂ ತಿಳಿಸಿದ್ದಳು. ಕೊನೆಗೆ ಈ ವಿಷಯ ಗ್ರಾಮದ ಪಂಚಾಯ್ತಿ ಸದಸ್ಯರವರೆಗೂ ಹೋಗಿತ್ತು.
ಈ ಎಲ್ಲ ಹಿನ್ನಲೆಯಲ್ಲಿ ಕೆಲ ದಿನಗಳ ಕಾಲ ಶಾಲೆಗೆ ಗೈರುಹಾಜರಾಗಿದ್ದ ಬಾಲಕಿ, ಪರೀಕ್ಷೆ ಇದ್ದ ಕಾರಣ ಈ ಸಾರಿ ಧೈರ್ಯ ದಿಂದ ಹೊರಟಿದ್ದಳು.ಆದರೆ ದಾರಿಯಲ್ಲಿ ಮತ್ತೆ ಆ ಹುಡುಗ ಕಾಡಬಹುದು ಎಂಬ ಯೋಚನೆ ಬಂದಾಗ ನಿಂಬೆ ಬರಲಿನಿಂದ ತನ್ನ ಕೈಗಳಿಗೆ ತಾನೇ ಹೊಡೆದು ಗಾಯ ಮಾಡಿಕೊಂಡಿದ್ದಳು. ಶಾಲೆಗೆ ಹೋದಾಗ ಆಕೆಯ ಕೈಗಳು ಕೊಯ್ದು ರಕ್ತ ಸುರಿಯುತ್ತಿತ್ತು . ಆಗ ಬ್ಯಾಂಡೇಜ್ ತರಲೆಂದು ಹತ್ತಿರದ ಅಂಗಡಿಗೆ ಹೋದಾಗ ಅಲ್ಲಿದವನು ಆಕೆಯ ಗಾಯದ ಹಿನ್ನಲೆಯನ್ನು ವಿಚಾರಿಸದೆ, ನಿನ್ನೆ ಇಬ್ಬರು ರಾತ್ರಿ ಕೊಡ್ಲಗದ್ದೆಯ ಕಡೆಗೆ ಹೋಗ್ತಿದ್ದರು. ಅವರೇ ಗಾಯ ಮಾಡಿದ್ದಾರೆ ಎಂದು ಅಂಗಡಿಯಲ್ಲಿ ಇದ್ದವರ ಮುಂದೆ ಹೇಳಿದ .ಅದರಲ್ಲೊಬ್ಬ ತಾನೂ ಅವರನ್ನು ನೋಡಿದ್ದಾಗಿ ಹೇಳಿದ. ಆ ಜನಗಳು ಹೇಳಿದ ಕಥೆ ಮತ್ತು ಮುಖಚರ್ಯೆಯ ವಿವರಗಳನ್ನೇ ಬಾಲಕಿಯು ಹೆದರಿ ಪೊಲೀಸರ ಎದುರು ಪುನರುಚ್ಚರಿಸಿದ್ದಳು. ತಾನೇ ಗಾಯ ಮಾಡಿಕೊಂಡಿದೆಂದು ಹೇಳಿದರೆ ಅದರ ಕಾರಣವನ್ನು ತಿಳಿಸಿದರೆ ಇದು ಸಮಸ್ಯೆ ಆಗಬಹುದೆಂದು ಭಯದಿಂದ ಆ ಅಂಗಡಿಯವನು ಹೇಳಿದ ಸುಳ್ಳನ್ನೇ ಅವಳ ತನ್ನ ರಕ್ಷಣೆಗೆ ಬಂಡವಾಳ ಮಾಡಿಕೊಂಡಿದ್ದಾಳೆ.ನಂತರ ಇದು ವೈದ್ಯರ ಬಳಿ ಪರೀಕ್ಷಿಸಿದಾಗ ಇದು ಅವಳೇ ಮಾಡಿಕೊಂಡಿರುವ ಗಾಯದ ಗುರುತುಗಳು ಎಂದು ಸ್ಪಷ್ಟವಾಗಿದೆ.
ಇದನ್ನು ಆ ಬಾಲಕಿ ಆಪ್ತಸಮಾಲೋಚಕರ ಎದುರು ಕೂಡ ಬಾಲಕಿ ಒಪ್ಪಿಕೊಂಡಿದ್ದಾಳೆ. ಇದಕ್ಕೆ ಕಾರಣನಾದ ಆ ಗಣೇಶ ನಾಯಕನ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ ಎಂದು ತಿಳಿದು ಬಂದಿದೆ.