ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ, ಅನರ್ಹ..! ಇದೇಲ್ಲಕ್ಕೂ ಕಾರಣ ಈ ಕರ್ನಾಟಕ ʼಬಿಜೆಪಿ ನಾಯಕʼ..

Rahul Gandhi defamation case : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡುತ್ತಿದ್ದರು. ಕೋಲಾರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೆ.ಎಚ್ ಮುನಿಯಪ್ಪ ಪರ ಮತಯಾಚನೆ ಮಾಡುವ ವೇಳೆ ರಾಹುಲ್‌ ಗಾಂಧಿ ನಿಂದನೆಯ ಮಾತು ಆಡಿದ್ದರು.  ರಾಹುಲ್ ಗಾಂಧಿ ಹೇಳಿಕೆ ಆಧರಿಸಿ ಬಿಜೆಪಿ ಶಾಸಕ ಪೂರ್ಣೆಶ್ ಮೋದಿ ಕ್ರಿಮಿನಲ್ ಮಾನಹಾನಿ ಕೇಸ್‌ ದಾಖಲು ಮಾಡಿದ್ದರು. 

Written by - Zee Kannada News Desk | Edited by - Krishna N K | Last Updated : Mar 24, 2023, 08:12 PM IST
  • 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡುತ್ತಿದ್ದರು.
  • ಕೆ.ಎಚ್ ಮುನಿಯಪ್ಪ ಪರ ಮತಯಾಚನೆ ಮಾಡುವ ವೇಳೆ ರಾಹುಲ್‌ ಗಾಂಧಿ ನಿಂದನೆಯ ಮಾತು ಆಡಿದ್ದರು.
  • ಬಿಜೆಪಿ ಶಾಸಕ ಪೂರ್ಣೆಶ್ ಮೋದಿ ಕ್ರಿಮಿನಲ್ ಮಾನಹಾನಿ ಕೇಸ್‌ ದಾಖಲು ಮಾಡಿದ್ದರು.
 ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ, ಅನರ್ಹ..! ಇದೇಲ್ಲಕ್ಕೂ ಕಾರಣ ಈ ಕರ್ನಾಟಕ ʼಬಿಜೆಪಿ ನಾಯಕʼ.. title=

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ 'ಮೋದಿ' ಎನ್ನುವ ಸರ್‌ನೇಮ್‌ ಟೀಕೆ ಮಾಡುವ ಮೂಲಕ ಒಬಿಸಿ ಜಾತಿ ನಿಂದನೆ ಮಾಡಿದ್ದ ರಾಹುಲ್‌ ಗಾಂಧಿಗೆ ಸೂರತ್‌ ಕೋರ್ಟ್‌ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿಯ ದಂಡ ಶಿಕ್ಷೆ ವಿಧಿಸಿದೆ. ಈ ನಡುವೆ ರಾಹುಲ್‌ ಗಾಂಧಿ ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದು ಮುಳಬಾಗಿಲಿನ ಬಿಜೆಪಿ ನಾಯಕ ಪಿಎಂ ರಘುನಾಥ್‌ ಎನ್ನುವ ವಿಚಾರ ಬಹಿರಂಗವಾಗಿದೆ. 

ರಾಹುಲ್ ಗಾಂಧಿ ಅವರಿಗೆ ಮುಳುವಾದ ಮುಳಬಾಗಿಲಿನ ಸಾಕ್ಷಿಯೇ ಹಿನ್ನಡೆಯಾಗಿ ಪರಿಣಮಿಸಿತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಭಾಷಣ ಮಾಡುತ್ತಿದ್ದರು. ಕೋಲಾರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೆ.ಎಚ್ ಮುನಿಯಪ್ಪ ಪರ ಮತಯಾಚನೆ ಮಾಡುವ ವೇಳೆ ರಾಹುಲ್‌ ಗಾಂಧಿ ನಿಂದನೆಯ ಮಾತು ಆಡಿದ್ದರು. 

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಭೇಟಿಯಾದ ಹೆಚ್‌ಡಿಕೆ : ಜೆಡಿಎಸ್‌ ಪ್ರಚಾರಕ್ಕೆ ʼದೀದಿʼ ಸಾಥ್‌...!

ನೀರವ್ ಮೋದಿ, ಲಲಿತ್ ಮೋದಿ ಹಾಗೂ ನರೇಂದ್ರ ಮೋದಿ ಅವರೆಲ್ಲರ ಸರ್‌ನೇಮ್‌ ಒಂದೇ ಆಗಿದೆ. ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ರಾಹುಲ್ ಗಾಂಧಿ ಹೇಳಿಕೆ ಆಧರಿಸಿ ಬಿಜೆಪಿ ಶಾಸಕ ಪೂರ್ಣೆಶ್ ಮೋದಿ ಕ್ರಿಮಿನಲ್ ಮಾನಹಾನಿ ಕೇಸ್‌ ದಾಖಲು ಮಾಡಿದ್ದರು. ಸೂರತ್ ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನಹಾನಿ ದೂರು ದಾಖಲು ಮಾಡಿದ್ದರು.

ಶಾಸಕ ಪೂರ್ಣೇಶ್ ಕೇಸ್ ದಾಖಲು ಮಾಡಿದ್ದರೂ, ಅದರ ಸಹ ಸೂತ್ರಧಾರ ಮುಳಬಾಗಿಲು ತಾಲೂಕಿನ ಬಿಜೆಪಿ ಮುಖಂಡ ಪಿ.ಎಂ ರಘುನಾಥ್. ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ವಿಡಿಯೋವನ್ನು ಶಾಸಕ ಪೂರ್ಣೇಶ್ ಮೋದಿಯನ್ನು ಸಂಪರ್ಕಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಘುನಾಥ್‌ ವ್ಯವಸ್ಥೆ ಮಾಡಿದ್ದರು. ಸೂರತ್ ಗೆ ತೆರಳಿ ರಾಹುಲ್ ಗಾಂಧಿ ವಿರುದ್ಧ ಪಿಎಂ ರಘುನಾಥ್‌ ಸಾಕ್ಷಿ ಕೂಡ ಹೇಳಿದ್ದರು. ರಾಹುಲ್ ಗಾಂಧಿಯನ್ನು ಗುರುತಿಸಿ ಇವರೇ ಮಾನಹಾನಿ ಭಾಷಣ ಮಾಡಿದ್ದು ಎಂದು ರಘುನಾಥ್‌ ಸಾಕ್ಷಿ ಕೂಡ ಹೇಳಿದ್ದರು.

ಇದನ್ನೂ ಓದಿ:ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಸಾಧನೆಗೆ ಸ್ಪೂರ್ತಿʼ - ಸಾಲುಮರದ ತಿಮ್ಮಕ್ಕ

ರಾಹುಲ್ ಭಾಷಣವನ್ನು ಚಿತ್ರೀಕರಿಸಿದ್ದ ಮುಳಬಾಗಿಲು ಬಿಜೆಪಿ ಮುಖಂಡ ಪಿ.ಎಂ ರಘುನಾಥ್ ಇದನ್ನು ಚುನಾವಣಾ ಆಯೋಗಕ್ಕೂ ನೀಡಿದ್ದರು. ಇನ್ನು ರಾಹುಲ್‌ ಗಾಂಧಿಗೆ ಹಿನ್ನಡೆಯಾಗಿದ್ದು ರಘುನಾಥ್‌ ಮಾತ್ರವಲ್ಲ. ಸ್ವತಃ ಸೂರತ್‌ ಕೋರ್ಟ್‌ 2019ರಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವ ಸಮಯದಲ್ಲಿ ಇದ್ದ ಕೋಲಾರದ ಜಿಲ್ಲಾಧಿಕಾರಿ ಹಾಗೂ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯನ್ನೂ ವಿಚಾರಣೆಗೆ ಕರೆದಿತ್ತು. ರಘುನಾಥ್‌ ಮಾಡಿದ್ದ ವಿಡಿಯೋ ಸತ್ಯಾಸತ್ಯತೆಗಳೇನು ಎನ್ನುವುದರ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಇವರಿಬ್ಬರೂ ಕೂಡ ರಾಹುಲ್‌ ಗಾಂದಿ ಈ ಮಾತು ಹೇಳಿದ್ದು ನಿಜ ಎಂದಿದ್ದರು.

ಅದರ ಬೆನ್ನಲ್ಲಿಯೇ ರಾಹುಲ್‌ ಗಾಂಧಿ ದೋಷಿ ಎಂದು ತೀರ್ಮಾನವಾಗುವುದು ಖಚಿತವಾಗಿತ್ತು. ಕೋರ್ಟ್‌ ತೀರ್ಪಿನ ವಿರುದ್ಧ ಕಾಂಗ್ರೆಸ್‌, ದೆಹಲಿ, ಹೈದರಾಬಾದ್‌ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಲಿದೆ.ಉದ್ದೇಶ ಪೂರ್ವಕವಾಗಿ ಬಿಜೆಪಿ ಇಂತಹ ಕೃತ್ಯಗಳನ್ನ ಮಾಡುತ್ತಿದೆ. ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿರೋದು ಸರಿಯಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ಅರೋಪಿಸಿದೆ. ಅದಾನಿ ವಿಷ್ಯದ ಬಗ್ಗೆ ಪ್ರಶ್ನೆ ಮಾಡೋಕು ಸಹ ಬಿಜೆಪಿ ಅವಕಾಶ ನೀಡುತ್ತಿಲ್ಲ. ವಿಪಕ್ಷಗಳ ಬಾಯಿ ಮುಚ್ಚಿಸೋಕೆ ಬಿಜೆಪಿ ಈ ರೀತಿಯ ತಂತ್ರಗಳನ್ನ ಅನುಸರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಈ ತೀರ್ಪಿನ ಬಳಿಕ ರಾಹುಲ್ ಗಾಂಧಿಯನ್ನ ಅನರ್ಹ ಗೊಳಿಸಲು ಬಿಜೆಪಿ ಸಹ ಪಟ್ಟು ಹಿಡಿದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News