ನಾನು ಕಾಂಗ್ರೆಸ್‌ನಲ್ಲೇ ಇದ್ದಿದ್ರೆ ಸಿದ್ದರಾಮಯ್ಯ ನನಗೂ ಅದೇ ರೀತಿ ಮಾಡುತ್ತಿದ್ದರು: ವಿಶ್ವನಾಥ್

ಕಾಂಗ್ರೆಸ್‌ನಿಂದ ರೋಷನ್ ಬೇಗ್ ಅಮಾನತ್ತಿನ ಬಗ್ಗೆ ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್.

Last Updated : Jun 20, 2019, 01:44 PM IST
ನಾನು ಕಾಂಗ್ರೆಸ್‌ನಲ್ಲೇ ಇದ್ದಿದ್ರೆ ಸಿದ್ದರಾಮಯ್ಯ ನನಗೂ ಅದೇ ರೀತಿ ಮಾಡುತ್ತಿದ್ದರು: ವಿಶ್ವನಾಥ್ title=
Pic Courtesy: ANI

ಬೆಂಗಳೂರು: ಶಾಸಕ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಶಾಸಕ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ನಾನು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ಸಿದ್ದರಾಮಯ್ಯ ನನಗೂ ಅದೇ ರೀತಿ ಮಾಡುತ್ತಿದ್ದರು ಎಂದಿದ್ದಾರೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ಜೊತೆಗೆ ಮಾತನಾಡಿರುವ ಅವರು, ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವುದು ಸಿದ್ದರಾಮಯ್ಯ ಅವರ ವೈಯಕ್ತಿಕ ಪ್ರತೀಕಾರ ಅವರು ಒಳ್ಳೆಯ ರಾಜಕಾರಣಿಯಲ್ಲ ಎಂದು ತಿಳಿಸಿದ್ದಾರೆ.

ರೋಷನ್ ಬೇಗ್ ಅವರನ್ನು ಪಕ್ಷ (ಕಾಂಗ್ರೆಸ್) ಅಮಾನತುಗೊಳಿಸಿರುವುದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿರುವ ವಿಶ್ವನಾಥ್, ನಾನು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ಸಿದ್ದರಾಮಯ್ಯ ಅವರು ನನಗೂ ಅದೇ ರೀತಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

Trending News