ಬೆಂಗಳೂರು: ರಾಷ್ಟ್ರದಲ್ಲಿ ಹುಲಿಯ ಕ್ರೌರ್ಯ ಹೆಚ್ಚಾಗಿದೆ, ಕೂಡಲೇ ಅದನ್ನು ಕಾಡಿಗೆ ಅಟ್ಟಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಟಾಂಗ್ ನೀಡಿದ್ದಾರೆ.
ಸಂಸದ ಅನಂತ್ ಕುಮಾರ ಹೆಗಡೆ ಅವರು ವಿಪಕ್ಷಗಳನ್ನು ಕೋತಿ, ಕಾಗೆ, ನರಿಗೆ ಹೋಲಿಸಿ ಮಾತನಾಡಿದ್ದಾರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೀರಪ್ಪ ಮೊಯ್ಲಿ ಅವರು, ಹುಲಿಯ ಕ್ರೌಯತೆ ಹೆಚ್ಚಾಗಿದೆ. ಕೂಡಲೇ ಮರಳಿ ಕಾಡಿಗೆ ಅಟ್ಟಬೇಕಿದೆ ಎಂದು ಹೇಳುವ ಮೂಲಕ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
The tiger has become wild, and has to be sent back to the forest: Veerappa Moily,Congress on Union Minister Ananthkumar Hegde's statement 'on one side crows, monkeys, foxes and others have come together, On the other side we have a tiger. In 2019, choose to elect the tiger' pic.twitter.com/WuZqPA7QCA
— ANI (@ANI) June 29, 2018
ಗುರುವಾರ ಕಾರವಾರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಗೆ, ಕೋತಿ, ನರಿ ಮತ್ತಿತರರು ಒಂದಾಗಿವೆ. ಮತ್ತೊಂದೆಡೆ ನಮ್ಮೊಂದಿಗೆ 'ಹುಲಿ' ನರೇಂದ್ರ ಮೋದಿ ಇದ್ದಾರೆ. ಹಾಗಾಗಿ ಹುಲಿಗೆ ಮತ ಹಾಕಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಪಶು-ಪಕ್ಷಿಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.