ಇಂದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವ ಆನಂದ್ ಆಸ್ನೋಟಿಕರ್

ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ  ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ.

Last Updated : Jan 15, 2018, 09:40 AM IST
ಇಂದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವ ಆನಂದ್ ಆಸ್ನೋಟಿಕರ್ title=

ಬೆಂಗಳೂರು: ಕಾರವಾರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಿಜೆಪಿ ಅವಧಿಯಲ್ಲಿ ಸಚಿವರಾಗಿದ್ದ ಆನಂದ್ ಆಸ್ನೋಟಿಕರ್ ಇಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.

ಬೆಂಗಳೂರಿನ  ಅಮೋಘ ನಿವಾಸ, ಪದ್ಮನಾಭ ನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ  ಕುಮಾರಸ್ವಾಮಿ ಸಮ್ಮುಖದಲ್ಲಿ ಆನಂದ್ ಆಸ್ನೋಟಿಕರ್ ಇಂದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ಅಧಿಕೃತ ಮೂಲಗಳು ತಿಳಿಸಿವೆ.

ಬಿಜೆಪಿ ಪಕ್ಷದಲ್ಲಿದ್ದ ಆಸ್ನೋಟಿಕರ್ ಸೇರ್ಪಡೆ ಅವರನ್ನು ಜೆಡಿಎಸ್'ಗೆ ಸೇರ್ಪಡೆಗೊಳ್ಳುವಂತೆ  ಜೆಡಿಎಸ್ ಯವ ಘಟಕದ ರಾಜ್ಯಾದ್ಯಕ್ಷ ಮಧು ಬಂಗಾರಪ್ಪ ಮಾತುಕತೆ ನಡೆಸಿದರು. ಕಾರವಾರ ಕ್ಷೇತ್ರದಿಂದ ಗೆದ್ದು ಬಿಜೆಪಿ ಅವಧಿಯಲ್ಲಿ ಮೀನುಗಾರಿಕಾ ಸಚಿವರಾಗಿದ್ದ ಆನಂದ್ ಆಸ್ನೋಟಿಕರ್ ಇತ್ತೀಚಿಗೆ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಿಂದ ಟಿಕೆಟ್ ಗಾಗಿ ಪ್ರಯತ್ನಿಸಿದ್ದ ಆಸ್ನೋಟಿಕರ್ ಅವರಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಆನಂದ್ ಆಸ್ನೋಟಿಕರ್ ಅಂತಿಮವಾಗಿ ಜೆಡಿಎಸ್ ನತ್ತ ತಮ್ಮ ಚಿತ್ತ ಹರಿಸಿದ್ದಾರೆ.

Trending News