ಮಣ್ಣಲ್ಲಿ ಮಣ್ಣಾದ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು

ಶನಿವಾರದಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ಶರಣ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ ಅಂತ್ಯಕ್ರಿಯೆಗೆ ಇಂದು ಸಾವಿರಾರು ಜನರ ಸಾಗರವೇ ಹರಿದುಬಂದಿತು.ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀಗಳನ್ನು ಗದುಗಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. 

Last Updated : Oct 21, 2018, 04:25 PM IST
ಮಣ್ಣಲ್ಲಿ ಮಣ್ಣಾದ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು title=

ಗದಗ: ಶನಿವಾರದಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ಶರಣ ಶ್ರೀ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳ ಅಂತ್ಯಕ್ರಿಯೆಗೆ ಇಂದು ಸಾವಿರಾರು ಜನರ ಸಾಗರವೇ ಹರಿದುಬಂದಿತು.ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀಗಳನ್ನು ಗದುಗಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. 

ನಂತರ ತೋಂಟದಾರ್ಯ ಮಠದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳ ಜೊತೆಗೆ ಲಿಂಗಾಯತ ಧರ್ಮದಂತೆ ಅಂತ್ಯಕ್ರಿಯೆ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಯಿತು. ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪುಷ್ಪ ವಿಭೂತಿ ರುದ್ರಾಕ್ಷಿಗಳನ್ನು ಅರ್ಪಿಸುವುದರ ಮೂಲಕ ಅಂತ್ಯಕ್ರಿಯೆ ಮಾಡಲಾಯಿತು.

ಹಲವಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀಗಳು ಹಲವಾರು ದಶಕಗಳಿಂದ ಅನ್ನದಾಸೋಹ ನಡೆಸಿಕೊಂಡು ಬಡ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದರು.ಅಲ್ಲದೆ ಈಗ ಭಾಗದಲ್ಲಿ ಅವರನ್ನು ಭಕ್ತ ಸಮೂಹ ಅವರನ್ನು ದೈವಿ ಸ್ವರೂಪ ಎಂದೇ ಪರಿಗಣಿಸಿತ್ತು.

ಈ ಭಾಗದಲ್ಲಿನ ಪೋಸ್ಕೊ ವಿರುದ್ದದ ಹೋರಾಟ, ಮಹದಾಯಿ ಹೋರಾಟ, ಕಪ್ಪತ್ತಗುಡ್ಡದ  ಹೋರಾಟ ಹೀಗೆ ಸಮಾಜ ಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀಗಳು ಕನ್ನಡ ಮತ್ತು ಕರ್ನಾಟಕದ ಸಾಕ್ಷಿಪ್ರಜ್ನೆಯಾಗಿದ್ದರು.ಈಗ ಅವರ ನಿಧನದಿಂದಾಗಿ ಪ್ರಗತಿಪರ ಚಿಂತನೆಗಳ ಧ್ವನಿಯೊಂದು ಇಲ್ಲದಂತಾಗಿದೆ.

Trending News