ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ - ಸ್ವಗ್ರಾಮದಲ್ಲಿಯೇ ಉಮೇಶ್ ಕತ್ತಿ ಅಂತ್ಯಕ್ರಿಯೆ

ಉತ್ತರ ಕರ್ನಾಟಕ ಅಭಿವೃದ್ದಿಯ ಆಶಾಕಿರಣ ಆರಿ ಹೋಗಿದೆ. ತಮ್ಮ ನಾಯಕನನ್ನು ಕಳೆದುಕೊಂಡ ಗ್ರಾಮಸ್ಥರಲ್ಲಿ ಶೋಕ ಮಡುಗಟ್ಟಿದೆ. ಕಬ್ಬೂರ ರಸ್ತೆಗೆ ಹೊಂದಿಕೊಂಡಿರುವ ಕತ್ತಿ ಮನೆತನದ ತೋಟದ ಜಮೀನಿನಲ್ಲಿಯೇ ಉಮೇಶ್ ಕತ್ತಿ  ಅಂತ್ಯಕ್ರಿಯೆ ನೆರವೇರಲಿದೆ.

Written by - Ranjitha R K | Last Updated : Sep 7, 2022, 08:13 AM IST
  • ಸಚಿವ ಉಮೇಶ್ ಕತ್ತಿ ನಿಧನ
  • ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಅಂತ್ಯಕ್ರಿಯೆ
  • ಮುಗಿಲು ಮುಟ್ಟಿದೆ ಕುಟುಂಸ್ಥರ ಆಕ್ರಂದನ
 ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ - ಸ್ವಗ್ರಾಮದಲ್ಲಿಯೇ ಉಮೇಶ್ ಕತ್ತಿ ಅಂತ್ಯಕ್ರಿಯೆ  title=
Umesh katti Death

ಬೆಳಗಾವಿ : ಸಚಿವ ಉಮೇಶ್ ಕತ್ತಿ ನಿಧನ‌‌ ಹಿನ್ನಲೆಯಲ್ಲಿ ಅವರ ಹುಟ್ಟೂರು  ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ ಆವರಿಸಿದೆ. ಇಂದು ಸ್ವ ಗ್ರಾಮಕ್ಕೆ ಉಮೇಶ್ ಕತ್ತಿ ಪಾರ್ಥಿವ ಶರೀರ ಆಗಮಿಸಲಿದೆ. ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಕತ್ತಿ ಅಂತ್ಯಕ್ರಿಯೆ ನೆರವೇರಲಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ ನಡೆಯಲಿದೆ.  

ಉತ್ತರ ಕರ್ನಾಟಕ ಅಭಿವೃದ್ದಿಯ ಆಶಾಕಿರಣ ಆರಿ ಹೋಗಿದೆ. ತಮ್ಮ ನಾಯಕನನ್ನು ಕಳೆದುಕೊಂಡ ಗ್ರಾಮಸ್ಥರಲ್ಲಿ ಶೋಕ ಮಡುಗಟ್ಟಿದೆ. ಇಂದು  ಉಮೇಶ್ ಕತ್ತಿ  ಪಾರ್ಥಿವ ಶರೀರ ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ  ತಲುಪಲಿದೆ. ಕಬ್ಬೂರ ರಸ್ತೆಗೆ ಹೊಂದಿಕೊಂಡಿರುವ ಕತ್ತಿ ಮನೆತನದ ತೋಟದ ಜಮೀನಿನಲ್ಲಿಯೇ ಉಮೇಶ್ ಕತ್ತಿ ಅಂತ್ಯಕ್ರಿಯೆ ನೆರವೇರಲಿದೆ. 

ಇದನ್ನೂ ಓದಿ : Breaking News: ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ

ಬೆಳಗಾವಿ ಮನೆಯಿಂದ ಬೆಲ್ಲದ ಬಾಗೇವಾಡಿಗೆ ಉಮೇಶ್ ಕತ್ತಿ ಪತ್ನಿ, ಸೊಸೆ, ಮೊಮ್ಮಗಳು  ಆಗಮಿಸಿದ್ದಾರೆ. ಕತ್ತಿ ಕುಟುಂಬಸ್ಥರು ಕೂಡಾ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ವಿಧಿ ವಿಧಾನಗಳ ಮೂಲಕ ಉಮೇಶ್ ಕತ್ತಿ ಅಂತ್ಯಕ್ರಿಯೆ ನೆರವೇರಲಿದೆ. ತಂದೆ ವಿಶ್ವನಾಥ ಕತ್ತಿ ಸಮಾಧಿ ಪಕ್ಕದಲ್ಲೇ ಉಮೇಶ್ ಕತ್ತಿ ಅಂತ್ಯಕ್ರಿಯೆ ನಡೆಯಲಿದೆ.  

ಇನ್ನು ಉಮೇಶ್ ಕತ್ತಿ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ, ಉಮೇಶ್ ಕತ್ತಿ ಮನೆಯ ಬಳಿ ಆಗಮಿಸುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಕತ್ತಿ ನಿವಾಸದತ್ತ ಜನ ಸಾಗರವೇ ಹರಿದು ಬರುತ್ತಿದೆ.  ಉಮೇಶ್ ಕತ್ತಿ ಸಾವಿನ ಹಿನ್ನೆಲೆಯಲ್ಲಿ ಗಣೇಶ್ ಚರ್ತುರ್ಥಿಗಾಗಿ ಗ್ರಾಮದಲ್ಲಿ ಹಾಕಿದ್ದ ಅಲಂಕಾರ, ದೀಪಗಳನ್ನು ತೆರುವುಗೊಳಿಸಲಾಗಿದೆ. ಗ್ರಾಮದಲ್ಲಿರುವ ಗಣೇಶ ಮೂರ್ತಿಗಳ ವಿಸರ್ಜನೆ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ : Umesh Katti: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಸಿಎಂ ಆಗುವ ಕನಸು ಕಂಡಿದ್ದ ಉಮೇಶ್ ಕತ್ತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News