ನವದೆಹಲಿ: ದೇಶಾದ್ಯಂತ ಮಾರಕ ಕೊರೊನಾ ವೈರಸ್ ಪ್ರಕೋಪ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮೇ 31ರವರೆಗೆ ಮುಂದುವರೆಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ವೈರಸ್ ಪ್ರತಿ ಜನರಲ್ಲಿ ಸತತ ಜಾಗ್ರತಿ ಮೂಡಿಸುತ್ತಲೇ ಇವೆ. ಆದರೆ, ಇದೀಗ ದೇಶದ ನಾಗರಿಕರನ್ನು ಪ್ರತಿನಿಧಿಸುವ ಮುಖಂಡರು ಲಾಕ್ ಡೌನ್ ನಿಯಮಗಳ ಉಲ್ಲಂಘನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೇಂದ್ರದ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಕೇಂದ್ರ ಸಚಿವ ಸದಾನಂದ್ ಗೌಡ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ.
'ನಾನೊಬ್ಬ ಮಂತ್ರಿಯಾಗಿದ್ದೇನೆ'-ಸದಾನಂದ್ ಗೌಡ
ಕೇಂದ್ರ ಸರ್ಕಾರದಲ್ಲಿ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿರುವ ಡಿ.ವಿ. ಸದಾನಂದ್ ಗೌಡ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ. ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳ ಪ್ರಕಾರ ಅವರು ಏಳು ದಿನಗಳ ಕಾಲ ಸರ್ಕಾರಿ ಕ್ವಾರಂಟೀನ್ ಗೆ ಹೋಗಬೇಕು. ಆದರೆ ಅವರು ಹೀಗೆ ಮಾಡಿಲ್ಲ. ಈ ಕುರಿತು ಅವರನ್ನು ಪ್ರಶ್ನಿಸಲಾಗಿ, "ನಾನೊಬ್ಬ ಮಂತ್ರಿಯಾಗಿದ್ದೇನೆ, ಕೇಂದ್ರ ಔಷಧಿ ಖಾತೆ ಸಚಿವಾಲಯದ ಸಚಿವನಾಗಿದ್ದೇನೆ. ದೇಶದ ಪ್ರತಿ ಮೂಲೆಗಳಿಗೆ ಔಷಧಿಗಳ ಸಪ್ಲೈ ಸರಿಯಾಗಿ ಆಗುವುದನ್ನು ನೋಡುವುದು ನನ್ನ ಜವಾಬ್ದಾರಿ" ಎಂದಿದ್ದಾರೆ.
Guidelines are applicable to all citizens, but there are certain exemption clauses, for those who hold certain responsible posts: S Gowda, Union Minister on allegations by opposition parties that he didn't go to required institutional quarantine after domestic air travel pic.twitter.com/lVVrS1FABc
— ANI (@ANI) May 25, 2020
ಅಷ್ಟೇ ಅಲ್ಲ "ಕೆಲ ವಿಶೇಷ ಹುದ್ದೆಗಳಲ್ಲಿ ಕೆಲಸ ಮಾಡುವ ವಿಶೇಷ ವ್ಯಕ್ತಿಗಳನ್ನು ಕ್ವಾರಂಟೀನ್ ನಿಯಮಗಳಿಂದ ಮುಕ್ತಗೊಳಿಸಲಾಗಿದೆ. ಉದಾಹರಣೆಗೆ ವೈದ್ಯರು, ದಾದಿಯರು ಹಾಗೂ ಅಗತ್ಯ ಔಷಧಗಳ ಪೂರೈಕೆದಾರರನ್ನು ನಿರ್ಬಂಧಿಸಿದರೆ ನಾವು ಕೊರೊನಾವನ್ನು ತಡೆಗಟ್ಟಲು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕಕ್ಕೆ ತೆರಳುವ ಎಲ್ಲರು ಏಳು ದಿನಗಳ ಸರ್ಕಾರಿ ಕ್ವಾರಂಟೀನ್ ಗೆ ಹೋಗುವುದು ಅನಿವಾರ್ಯ
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ದೆಹಲಿ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಹಾಗೂ ತಮಿಳುನಾಡಿನಿಂದ ಬರುವ ಎಲ್ಲ ಜನರು ಏಳು ದಿನಗಳ ಸರ್ಕಾರಿ ಕ್ವಾರಂಟೀನ್ ಗೆ ಹೋಗುವುದು ಕಡ್ಡಾಯ ಎಂದು ಕರ್ನಾಟಕದ ಬಿಜೆಪಿ ಸರ್ಕಾರ ನಿಯಮ ಮಾಡಿದೆ. ಅಷ್ಟೇ ಅಲ್ಲ ಔಷದ ವಲಯಕ್ಕೆ ಈ ನಿಯಮದಿಂದ ಯಾವುದೇ ವಿಶೇಷ ವಿನಾಯ್ತಿ ನೀಡಿಲ್ಲ.