ಬೆಂಗಳೂರು : ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಹಾಲಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಅಭ್ಯರ್ಥಿ ಯಾರು ಎಂದು ಕುತೂಹಲ ಹೆಚ್ಚಿದೆ.
2004 ರಿಂದ 2019 ವರೆಗೂ ಸತತವಾಗಿ 4 ಲೋಕಸಭೆ ಚುನಾವಣೆಯಿಂದ ಬಿಜೆಪಿ ಸಂಸದರನ್ನು ನೀಡಿದ ಉತ್ತರ ಲೋಕಸಭೆ ಕ್ಷೇತ್ರ, ಕಮಲದ ಭದ್ರಕೋಟೆ ಆಗಿದೆ. ಮಾಜಿ ಸಚಿವರ ನಿವೃತ್ತಿ ಬೆನ್ನಲ್ಲೇ ಗೆಲುವಿನ ಹಾದಿ ಸುಗಮ ಆಗಿರುವ ಕ್ಷೇತ್ರದಲ್ಲಿ ಅಭ್ಯರ್ಥಿ ಆಗುವ ಬಯಕೆ ಹೆಚ್ಚಿದೆ.
ಇದನ್ನೂ ಓದಿ: ಡೆಲ್ಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಪ್ರತ್ಯಸ್ತ್ರದ ಹುಡುಕಾಟದಲ್ಲಿ ಬಿಜೆಪಿ; ಸವಾಲಿನ ಸುಳಿಯಲ್ಲಿ ವಿಜಯೇಂದ್ರ
ರಾಜ್ಯ ಬಿಜೆಪಿಗೆ ಅಭ್ಯರ್ಥಿ ಶಿಫಾರಸ್ಸು ತಲೆ ಬಿಸಿ! : ಯಾವ ಮಾನದಂಡ ಮೇಲೆ ಕೇಂದ್ರಕ್ಕೆ ಹೆಸರು ಶಿಫಾರಸ್ಸು ಮಾಡಬೇಕು ಎಂಬ ತಲೆಬಿಸಿ ರಾಜ್ಯ ಬಿಜೆಪಿಗೆ ಎಸುರಾಗಿದೆ. ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಈ ಭಾರಿ ಹಿನಾಯ ಸೋಲನ್ನ ಬಿಜೆಪಿ ಕಂಡಿದೆ. ಆದರೆ ಸೋತ ಅಭ್ಯರ್ಥಿಗಳು ಪಕ್ಷಕ್ಕೆ ದುಡಿದವರು. ಇವರನ್ನ ಪರಿಗಣಿಸಬೇಕಾ? ತಳಮಟ್ಟದ ಕಾರ್ಯಕರ್ತರಿಗೆ ಅವಕಾಶ ನೀಡಬೇಕಾ? ಪಕ್ಷದ ಮೇಲೆ ಮುನಿಸು ಇರುವವರಿಗೆ ಟಿಕೆಟ್ ನೀಡಬೇಕಾ? ಸ್ವಂತ ಕ್ಷೇತ್ರದಿಂದ ಟಿಕೆಟ್ ಕಳೆದುಕೊಂಡ ನಾಯಕರಿಗೆ ಸಮಾಧಾನಕ್ಕೆ ಆದ್ಯತೆ ನೀಡಬೇಕಾ? ಅಥವಾ ಸದಾನಂದ ಗೌಡರಿಗೆ ನಿವೃತ್ತಿ ಹಿಂಪಡೆದು ಮತ್ತೆ ನೀವೇ ಸ್ಪರ್ಧೆ ಮಾಡಿ ಎಂದು ಒತ್ತಡ ತರಬೇಕಾ? ಎಂಬ ಸವಾಲುಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಬಿದ್ದೆದೆ. ಈ ಮದ್ಯೆ ಬಿಜೆಪಿ ಮೂಲಗಳು ಕೆಲ ಹೆಸರುಗಳನ್ನ ಹಾಗೂ ಕಾರಣಗಳನ್ನು ಹೇಳುತ್ತಿವೆ, ಆ ಪೈಕಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರುಗಳು,
1. ಸಿ ಟಿ ರವಿ : ವಿಧಾನಸಭೆ ಚುನಾವಣೆಯಲ್ಲಿ ಸೋಲು ಆಗಿದೆ, ಆದರೆ ಪಕ್ಷ ಪರವಾಗಿ ಗಟ್ಟಿ ದ್ವನಿ ಎತ್ತುವ ನಾಯಕರಲ್ಲಿ ಒಬ್ಬರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಹಿನ್ನಲೆ ಡೆಲ್ಲಿ ನಂಟು ಹಾಗೂ ಕೇಂದ್ರ ಸರ್ಕಾರದ ಕಾರ್ಯವೈಖರಿ ತಿಳಿದಿದೆ. ಹಿಂದುತ್ವದ ಫೈರ್ ಬ್ರಾಂಡ್, ತಮಿಳುನಾಡು ಚುನಾವಣೆ ಸೇರಿದಂತೆ ಇತರೆ ಚುನಾವಣೆಯಲ್ಲಿ ಕೆಲಸ ಮಾಡಿರುವ ನಾಯಕ.
ಇದನ್ನೂ ಓದಿ:
2. ಸುಮಲತಾ ಅಂಬರೀಷ್ : ಕೆಲ ತಿಂಗಳ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಘೋಷಣೆ ಬಳಿಕ ಹಾಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಬಿಜೆಪಿ ಮತ್ತೆ ಮಂಡ್ಯ ಲೋಕಸಭೆ ಟಿಕೆಟ್ ನೀಡಲಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯ ಸೀಟ್ ಹಂಚಿಕೆ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲದಿರುವ ಹಿನ್ನಲೆ, ಒಂದು ವೇಳೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಸುಮಲತಾ ಅಂಬರೀಷ್ ಗೆ ಬೆಂಗಳೂರು ಉತ್ತರ ಕ್ಕೆ ಪರಿಗಣಿಸಬಹುದು. ಜೆಡಿಎಸ್ ಜೊತೆ ಮೈತ್ರಿ ಆಗುವ ಮುನ್ನ ಸುಮಲತಾ ಅಂಬರೀಷ್ ಬಿಜೆಪಿ ಪಕ್ಷಕ್ಕೆ ಸಹಬಾಗಿತ್ವ (co-membership)ಪಡೆದಿದ್ದರೂ. ಹೀಗಾಗಿ ಸೂಕ್ತ ಸ್ಥಾನ ನೀಡುವ ಜವಾಬ್ದಾರಿ ಕಮಲ ಪಕ್ಷಕ್ಕೆ ಇದೇ.
3. ಶೋಭಾ ಕರಂದ್ಲಾಜೆ : ಕಾಂಗ್ರೆಸ್ ನಿಂದ ಬಿಜೆಪಿ ಗೆ ಬಂದ ಉಡುಪಿ ರಾಜಕೀಯ ನಾಯಕ ಪ್ರಮೋದ್ ಮಧ್ವರಾಜ್ ಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಟಿಕೆಟ್ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವೆ (ರಾಜ್ಯ ಖಾತೆ ) ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಟಿಕೆಟ್ ನೀಡುವ ಸಾಧ್ಯತೆ ಇದೇ.
ಈ ಹೆಸರುಗಳಲ್ಲದೆ ಇನ್ನು ಅನೇಕ ಹೆಸರುಗಳು ಜಗನ್ನಾಥ ಭವನದಲ್ಲಿ ಕೇಳಿಬರುತ್ತಿದೆ. ಕೆಲ ಹಿರಿಯ ನಾಯಕರು, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ, ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಲಿದೆ ಎಂದು ಸಲಹೆ ನೀಡಿದ್ದಾರೆ.
ಒಟ್ಟಾರೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಸವಾಲು ಈಗ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮುಂದಿದೆ. ರಾಜ್ಯ ಬಿಜೆಪಿ ನೀಡಿರುವ ಶಿಫಾರಸ್ಸಿಗೆ ಕೇಂದ್ರ ಬೆಜೆಪಿ ಅಸ್ತು ಅನ್ನುತ್ತಾ? ಅಥವಾ ಕೇಂದ್ರ ಬಿಜೆಪಿ ಸ್ವತಂತ್ರವಾಗಿ ಟಿಕೆಟ್ ಘೋಷಣೆ ಮಾಡಲಿದ್ಯಾ? ಇವಕ್ಕೆ ಉತ್ತರ ಇನ್ನು ಒಂದು ತಿಂಗಳೊಳಗೆ ಉತ್ತರ ಸಿಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.