ಕುಟುಂಬ ರಾಜಕಾರಣದಾಚೆ: ತಂದೆಯ ಹಗರಣದ ಆರೋಪ ಮತ್ತು ಸ್ವಂತ ಗುರುತಿನ ಕೊರತೆಯನ್ನು ಮೀರಬಲ್ಲರೇ ನಿಖಿಲ್?

ಗಮನಿಸಬೇಕಾದ ಅಂಶವೆಂದರೆ, ಎಚ್ ಡಿ ಕುಮಾರಸ್ವಾಮಿ ಅವರು ತನ್ನ ಸ್ವಂತ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೂ ಚಿಂತಿಲ್ಲ ಎಂಬಂತೆ ಸಾರ್ವಜನಿಕರ ಕಣ್ಣಲ್ಲಿ ತನ್ನ ಮಗನ ಕುರಿತು ಸದಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ...

Written by - Girish Linganna | Last Updated : Oct 13, 2024, 08:24 PM IST
    • ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
    • ಕೇಂದ್ರ ಸಚಿವ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ.
    • ತೆರವಾದ ಚನ್ನಪಟ್ಟಣ ವಿಧಾನಸಭಾ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸಾಧ್ಯತೆ
ಕುಟುಂಬ ರಾಜಕಾರಣದಾಚೆ: ತಂದೆಯ ಹಗರಣದ ಆರೋಪ ಮತ್ತು ಸ್ವಂತ ಗುರುತಿನ ಕೊರತೆಯನ್ನು ಮೀರಬಲ್ಲರೇ ನಿಖಿಲ್? title=

ಬೆಂಗಳೂರು : ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ರ‍್ಯಾಂಕಿನ ಹಿಮಾಚಲ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಎಡಿಜಿಪಿ ಎಂ ಚಂದ್ರ ಶೇಖರ್ ಅವರು ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿದ್ದಾರೆ. ಅವರ ತಂಡ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದು, ಚಂದ್ರ ಶೇಖರ್ ಅವರು ಅಕ್ಟೋಬರ್ 11, ಶುಕ್ರವಾರದಂದು ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರ ಶೇಖರ್ ಅವರು ಈ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರು ತಳಕು ಹಾಕಿಕೊಂಡಿರುವುದರಿಂದ, ತಂದೆ ಮತ್ತು ಮಗ ಇಬ್ಬರೂ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ತನಗೆ ಬೆದರಿಕೆ ಒಡ್ಡಿದ್ದಾರೆ ಎಂದು ಎಡಿಜಿಪಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಚಂದ್ರ ಶೇಖರ್ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿದ್ದು, ಕಾನೂನಿನ ಪ್ರಕಾರ ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್ ನಡೆಯಲಿದೆ ಎಂದಿದ್ದಾರೆ. ಜೂನ್ 4ರಂದು ಪ್ರಕಟಗೊಂಡ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಕೇಂದ್ರ ಸಚಿವ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ.

ಇದನ್ನೂ ಓದಿ:'ಗೃಹಲಕ್ಷ್ಮಿ' ಯೋಜನೆಯ ಹಣ ಕೂಡಿಟ್ಟು, ಮಗನಿಗೆ ಬೈಕ್ ಗಿಫ್ಟ್ ನೀಡಿದ ಮಹಿಳೆ

ಗಮನಿಸಬೇಕಾದ ಅಂಶವೆಂದರೆ, ಎಚ್ ಡಿ ಕುಮಾರಸ್ವಾಮಿ ಅವರು ತನ್ನ ಸ್ವಂತ ವಿಶ್ವಾಸಾರ್ಹತೆಯನ್ನು ಕಳೆದುಕೊಂಡರೂ ಚಿಂತಿಲ್ಲ ಎಂಬಂತೆ ಸಾರ್ವಜನಿಕರ ಕಣ್ಣಲ್ಲಿ ತನ್ನ ಮಗನ ಕುರಿತು ಸದಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಈಗ ಲೋಕಸಭಾ ಸದಸ್ಯರಾಗಿರುವುದರಿಂದ, ತೆರವಾದ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಂಬರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಪ್ರಕರಣ ನಡೆದು ಬಂದ ಹಾದಿ : ವಿಶೇಷ ತನಿಖಾ ದಳ (ಎಸ್ಐಟಿ) ಒಂದು ಡಿನೋಟಿಫಿಕೇಶನ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಅದರಲ್ಲಿ ಎಚ್ ಡಿ ಕುಮಾರಸ್ವಾಮಿ ಅವರೂ ಆರೋಪಿಯಾಗಿದ್ದಾರೆ. ಆದರೆ, ಚಂದ್ರ ಶೇಖರ್ ಅವರು ಸೆಪ್ಟೆಂಬರ್ 28, 2024ರಂದು ತನ್ನ ಸಿಬ್ಬಂದಿಗಳಿಗೆ ಬರೆದ ಪತ್ರವೊಂದು ಬಹಿರಂಗಗೊಂಡು, ಪ್ರಕರಣ ಕೆಟ್ಟ ತಿರುವು ಪಡೆದುಕೊಂಡಿತು. ತಾನು ಬರೆದ ಪತ್ರದಲ್ಲಿ, ಎಡಿಜಿಪಿ ಚಂದ್ರ ಶೇಖರ್ ಎಸ್ಐಟಿ ಸಿಬ್ಬಂದಿಗಳಿಗೆ ನಾವು ನಮ್ಮ ಕರ್ತವ್ಯ ನಿಭಾಯಿಸುವುದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದು ಬೇಡ ಎಂದು ಕರೆ ನೀಡಿದ್ದು, ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ, ಬೆದರಿಕೆ ಒಡ್ಡಿದ್ದರು ಎಂದು ದೂರಿದ್ದರು.

ಬಹುಶಃ ಚಂದ್ರ ಶೇಖರ್ ಅವರ ಮಾತುಗಳು ಇಷ್ಟಕ್ಕೇ ಸೀಮಿತವಾಗಿದ್ದರೆ ಏನೂ ಸಮಸ್ಯೆ ಉಂಟಾಗುತ್ತಿರಲಿಲ್ಲವೇನೋ. ಆದರೆ, ಚಂದ್ರ ಶೇಖರ್ ಅವರ ಪತ್ರದ ಎರಡನೇ ಭಾಗ ನಿಜಕ್ಕೂ ಅನವಶ್ಯಕವಾಗಿತ್ತು. ಅಲ್ಲಿ ಜಾರ್ಜ್ ಬರ್ನಾರ್ಡ್ ಶಾ ಅವರ ಇಂಗ್ಲಿಷ್ ಹೇಳಿಕೆಯೊಂದನ್ನು ಉಲ್ಲೇಖಿಸಿದ ಚಂದ್ರ ಶೇಖರ್, 'ಯಾವತ್ತೂ ಹಂದಿಯೊಡನೆ ಗುದ್ದಾಟಕ್ಕೆ ಇಳಿಯಬೇಡಿ. ಅದರಿಂದ ನೀವಿಬ್ಬರೂ ಕೊಳಕಾಗುತ್ತೀರಿ. ಆದರೆ ಹಂದಿ ಅದನ್ನು ಆನಂದಿಸುತ್ತದೆ" ಎಂದು ಬರೆದಿದ್ದರು. ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಕೇಂದ್ರ ಸಚಿವರ ಕುರಿತು ಆಡಿದ ಮಾತುಗಳಲ್ಲಿ ಅವರನ್ನು ಹಂದಿಗೆ ಹೋಲಿಸುವಂತೆ ಮಾತನಾಡಿದ್ದು ಅವರ ವೃತ್ತಿಪರತೆಯ ಕುರಿತು ಅನುಮಾನಗಳು ಮೂಡುವಂತೆ ಮಾಡಿತ್ತು.

ಅಕ್ಟೋಬರ್ 11ರಂದು ಎಡಿಜಿಪಿ ದೂರು : ಕುಮಾರಸ್ವಾಮಿ ಅವರು 2006ರಿಂದ 2008ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ, ಬಳ್ಳಾರಿ ಜಿಲ್ಲೆಯಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ (ಎಸ್ಎಸ್‌ವಿಎಂ) ಸಂಸ್ಥೆಗೆ ಅಕ್ರಮವಾಗಿ 550 ಎಕರೆ ಗಣಿಗಾರಿಕೆ ಭೂಮಿಯ ಗುತ್ತಿಗೆಗೆ ಅನುಮತಿ ನೀಡಿದ್ದಾರೆ ಎಂಬುದು ಈಗ ವಿಚಾರಣೆಗೆ ಬಂದಿರುವ ಪ್ರಕರಣ. ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಚಂದ್ರ ಶೇಖರ್ ಅವರು, "ಎಸ್ಐಟಿ ವಿಚಾರಣಾ ವರದಿಯನ್ನು ಸಿದ್ಧಪಡಿಸಿದ ಬಳಿಕ, ಆರೋಪಿ (ಕುಮಾರಸ್ವಾಮಿ) ಕರ್ನಾಟಕದ ರಾಜ್ಯಪಾಲರಿಗೆ ಪತ್ರ ಬರೆದು, ಆರೋಪಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಾಸಿಕ್ಯೂಷನ್ ನಿರ್ಬಂಧ ತರಬೇಕೆಂದು ಆಗ್ರಹಿಸಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೇರೆ ಸಿನಿಮಾಗಳ ಪಕ್ಕ ನಿಲ್ಲೋ ಹಾಗೆ ಮಾಡಿದೀವಿ ಎಂದ ಎ.ಪಿ.ಅರ್ಜುನ್‌

ವರದಿಯನ್ನು ಗಮನಿಸಿದ ಬಳಿಕ, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜುಲೈ 29ರಂದು ಬರೆದ ಪತ್ರದಲ್ಲಿ, ಒಂದಷ್ಟು ಸ್ಪಷ್ಟೀಕರಣ ಕೋರಿದ್ದಾರೆ ಎಂದು ಚಂದ್ರ ಶೇಖರ್ ವಿವರಿಸಿದ್ದಾರೆ. ಎಸ್ಐಟಿ ರಾಜ್ಯಪಾಲರ ಸಂದೇಹಗಳು ಮತ್ತು ಇತರ ದಾಖಲೆಗಳನ್ನು ಆಗಸ್ಟ್ 8ರ ಸಂಜೆ ಸ್ವೀಕರಿಸಿದ್ದು, ಆಗಸ್ಟ್ 19ರಂದು ಅವರಿಗೆ ಸ್ಪಷ್ಟೀಕರಣ ಕಳುಹಿಸಿತ್ತು. ಆಗಸ್ಟ್ 29ರಂದು ಅದನ್ನು ಮರಳಿ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್, ಕನ್ನಡದಲ್ಲಿದ್ದ ದಾಖಲೆಗಳನ್ನು ಇಂಗ್ಲಿಷ್‌ನಲ್ಲಿ ಒದಗಿಸುವಂತೆ ಕೇಳಿದ್ದರೆಂದು ಎಡಿಜಿಪಿ ವಿವರಿಸಿದ್ದಾರೆ.

ಮಾಧ್ಯಮ ವರದಿಯ ಪ್ರಕಾರ, ಚಂದ್ರ ಶೇಖರ್ ಅವರು ರಾಜ್ಯಪಾಲರು ಮತ್ತು ಎಸ್ಐಟಿ ನಡುವೆ ನೇರವಾಗಿ ನಡೆದ ಸಂವಹನದ ನಿಖರ ವಿವರಗಳು ಕುಮಾರಸ್ವಾಮಿ ಅವರಿಗೆ ಹೇಗೆ ತಲುಪಿತು ಎನ್ನುವುದು ತನಗೆ ಅರ್ಥವಾಗದ ವಿಚಾರ ಎಂದಿದ್ದಾರೆ. ಇದರ ಮೇಲಿನಿಂದ, ಎಸ್ಐಟಿ ಕುಮಾರಸ್ವಾಮಿ ಅವರ ವಿರುದ್ಧ ಕಲೆಹಾಕಿದ್ದ ಅವೇ ದಾಖಲಾತಿಗಳನ್ನೂ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ ಎಂದೂ ಚಂದ್ರ ಶೇಖರ್ ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರು ತನ್ನ ಮೇಲೆ ವಾಗ್ದಾಳಿ ನಡೆಸಿರುವುದು ಮಾತ್ರವಲ್ಲದೆ, ತನ್ನ ಕೇಡರ್ ಅನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾಯಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

"ಆರೋಪಿ ನನ್ನನ್ನು ಕರ್ನಾಟಕದಿಂದ ವರ್ಗಾಯಿಸುವುದಾಗಿ ಹೇಳಿ ಬೆದರಿಕೆ ಒಡ್ಡುತ್ತಿರುವುದು ಮಾತ್ರವಲ್ಲದೆ, ನನ್ನ ಕುಟುಂಬಸ್ಥರಿಗೂ ತೊಂದರೆ ಉಂಟುಮಾಡುತ್ತಿದ್ದಾರೆ. ತನ್ನ ನಡವಳಿಕೆಯಿಂದಲೇ ಆರೋಪಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದು, ಆರೋಪಿಯ ವಿರುದ್ಧದ ವಿಚಾರಣೆಯಲ್ಲಿ ನಾನು ಮುಂದುವರಿಯದಂತೆ ತಡೆಯಲು ಪ್ರಯತ್ನ ಪಡುತ್ತಿದ್ದಾರೆ. ಆರೋಪಿಯ ಈ ನಡೆ ಭಾರತೀಯ ನ್ಯಾಯ ಸಂಹಿತೆ 2023ರ (ಬಿಎನ್ಎಸ್) 224ನೇ ವಿಧಿಯಡಿ ಶಿಕ್ಷಾರ್ಹ ಅಪರಾಧ" ಎಂದು ಎಡಿಜಿಪಿ ತನ್ನ ದೂರಿನಲ್ಲಿ ಹೇಳಿದ್ದಾರೆ.

ಮಗನ ಚುನಾವಣಾ ಪ್ರಚಾರಕ್ಕೆ ಹಣ ಸಂಪಾದಿಸುವ ಯತ್ನ : ಈ ತಿಂಗಳ ಆರಂಭದಲ್ಲಿ, ಎಚ್ ಡಿ ಕುಮಾರಸ್ವಾಮಿ ಅವರ ಪಕ್ಷದ ಮುಖಂಡ, ಜಾತ್ಯಾತೀತ ಜನತಾದಳದ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರಾದ ವಿಜಯ ಟಾಟಾ ಅವರು ಕುಮಾರಸ್ವಾಮಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸುಲಿಗೆ ಯತ್ನದ ದೂರು ದಾಖಲಿಸಿದ್ದರು.

ಅಕ್ಟೋಬರ್ 1ರಂದು ದಾಖಲಿಸಿದ ದೂರಿನಲ್ಲಿ, ಟಾಟಾ ಅವರು ತಮ್ಮದೇ ಪಕ್ಷದ ರಮೇಶ್ ಗೌಡ ಎಂಬವರು ಆಗಸ್ಟ್ 24ರಂದು ತನ್ನ ಮನೆಗೆ ಬಂದು, ಕುಮಾರಸ್ವಾಮಿ ಅವರ ದೂರವಾಣಿಗೆ ಕರೆ ಮಾಡಿ, ಕೇಂದ್ರ ಸಚಿವರೊಡನೆ ಮಾತನಾಡುವಂತೆ ಮಾಡಿದರು. ಈ ಸಂದರ್ಭದಲ್ಲಿ, ಕೇಂದ್ರ ಸಚಿವರು ಚನ್ನಪಟ್ಟಣ ಉಪಚುನಾವಣೆಗಾಗಿ 50 ಕೋಟಿ ರೂಪಾಯಿ ಕೊಡುವಂತೆ ತನ್ನಲ್ಲಿ ಕೇಳಿದರು. ಅದರೊಡನೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಈ ಮೊತ್ತವನ್ನು ಒದಗಿಸದಿದ್ದರೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದು ಕಷ್ಟಕರವಾಗುವಂತೆ ಮಾಡುವುದಾಗಿ ಬೆದರಿಕೆ ಒಡ್ಡಿದರು. ಅಷ್ಟೇ ಯಾಕೆ, ಬೆಂಗಳೂರಿನಲ್ಲಿ ಜೀವನ ನಡೆಸುವುದೇ ದುಸ್ತರವಾಗುವಂತೆ ಮಾಡುತ್ತೇನೆ ಎಂದು ಎಚ್ಚರಿಸಿದರು ಎಂದು ವಿಜಯ ಟಾಟಾ ಹೇಳಿದ್ದಾರೆ.

ಟಾಟಾ ಅವರು ತನ್ನ ದೂರಿನಲ್ಲಿ, ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರಿಗೇ ಜೆಡಿಎಸ್ ಟಿಕೆಟ್ ಖಚಿತವಾಗಿದ್ದು, ಚುನಾವಣಾ ವೆಚ್ಚಕ್ಕೆ 50 ಕೋಟಿ ಒದಗಿಸಬೇಕು ಎಂದು ರಮೇಶ್ ಗೌಡ ಹೇಳಿದರು ಎಂದಿದ್ದಾರೆ. ಟಾಟಾ ಅವರ ಆರೋಪದ ಅನುಸಾರ, ಅಮೃತಹಳ್ಳಿ ಪೊಲೀಸರು ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಬಿಎನ್ಎಸ್ 2023ರ 3(5), 308(2), ಹಾಗೂ 351(2) ವಿಧಿಗಳಡಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಉದ್ಯಮಿ ರತನ್‌ ಟಾಟಾ ನಿಧನಕ್ಕೆ ಡಾ.ಸುಭಾಷ್‌ ಚಂದ್ರ ಸಂತಾಪ

ನಿಖಿಲ್ ಕುಮಾರಸ್ವಾಮಿ ಅವರು ಒಂದು ದೊಡ್ಡ ರಾಜಕೀಯ ಕುಟುಂಬದ ಕುಡಿಯಾಗಿದ್ದು, ತನ್ನದೇ ಆದ ಗುರುತಿನ ಕೊರತೆ ಅನುಭವಿಸುತ್ತಿರುವಂತೆ ಕಂಡುಬರುತ್ತಿದ್ದಾರೆ. ಅವರ ತಾತ, ಎಚ್ ಡಿ ದೇವೇಗೌಡರು ಜೂನ್ 1, 1996ರಿಂದ ಎಪ್ರಿಲ್ 21, 1997ರ ನಡುವೆ ಭಾರತದ ಪ್ರಧಾನಿಯಾಗಿದ್ದರು. ಅದಕ್ಕೂ ಮುನ್ನ, 1994ರಿಂದ 1996ರ ನಡುವೆ ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದರು. ಅವರು ಪ್ರಸ್ತುತ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ನಿಖಿಲ್ ಅವರ ತಂದೆ, ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ 2019ರಿಂದ 2019ರ ನಡುವೆ, ಅದಕ್ಕೂ ಮುನ್ನ 2006ರಿಂದ 2007ರ ನಡುವೆ ಸೇವೆ ಸಲ್ಲಿಸಿದ್ದರು.

ಇನ್ನು ನಿಖಿಲ್ ಕುಮಾರಸ್ವಾಮಿ ಅವರ ತಾಯಿ, ಅನಿತಾ ಕುಮಾರಸ್ವಾಮಿ ಅವರೂ ಎರಡು ಬಾರಿ ವಿಧಾನಸಭಾ ಸದಸ್ಯರಾಗಿದ್ದರು. ಅವರು 2018ರಲ್ಲಿ ರಾಮನಗರ ಉಪ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ಅದಕ್ಕೂ ಮುನ್ನ, 2008ರಿಂದ 2013ರ ನಡುವೆ ಮಧುಗಿರಿಯ ಶಾಸಕಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News