ಹಿರಿಯ ಕವಿ ಬಿ.ಎ.ಸನದಿ ಇನ್ನಿಲ್ಲ

ಹಿರಿಯ ಕವಿ ಬಿ.ಎ ಸನದಿ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರದಂದು ಬೆಳಗ್ಗೆ ನಿಧನರಾಗಿದ್ದಾರೆ ಎನ್ನಲಾಗಿದೆ.ಬಾಬಾ ಸಾಹೇಬ್ ಅಹಮದ್ ಸಾಹೇಬ್ ಸನದಿಯವರು ವಾಗ್ಮಿಯಾಗಿ ಅನುವಾದಕಾರರಾಗಿ ಹೆಸರು ಮಾಡಿದ್ದರು.ಅಲ್ಲದೆ ಮಕ್ಕಳ ಸಾಹಿತ್ಯ, ನಾಟಕ ರಚನೆ ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Last Updated : Mar 31, 2019, 02:22 PM IST
 ಹಿರಿಯ ಕವಿ ಬಿ.ಎ.ಸನದಿ ಇನ್ನಿಲ್ಲ title=
Photo courtesy: Facebook

ಬೆಂಗಳೂರು: ಹಿರಿಯ ಕವಿ ಬಿ.ಎ ಸನದಿ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರದಂದು ಬೆಳಗ್ಗೆ ನಿಧನರಾಗಿದ್ದಾರೆ ಎನ್ನಲಾಗಿದೆ.ಬಾಬಾ ಸಾಹೇಬ್ ಅಹಮದ್ ಸಾಹೇಬ್ ಸನದಿಯವರು ವಾಗ್ಮಿಯಾಗಿ ಅನುವಾದಕಾರರಾಗಿ ಹೆಸರು ಮಾಡಿದ್ದರು.ಅಲ್ಲದೆ ಮಕ್ಕಳ ಸಾಹಿತ್ಯ, ನಾಟಕ ರಚನೆ ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಬಿ.ಎ ಸನದಿಯವರು 1933 ಅಗಸ್ಟ್, 18 ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದರು.1954 ರಲ್ಲಿ  ಧಾರವಾಡದ ಕರ್ನಾಟಕ ವಿವಿಯಿಂದ ಅರ್ಥಶಾಸ್ತ್ರ ಪದವಿ ಪಡೆದಿದ್ದಲ್ಲದೆ.1972ರಲ್ಲಿ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಹಾಗು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.ಮುಂದೆ ಮುಂಬಯಿ ಆಕಾಶವಾಣಿಯಲ್ಲಿ ಅಧಿಕಾರಿಯಾದ ನಂತರ ಸ್ವತ ಅವರೇ ಬರೆದು ನಿರ್ದೇಶಿಸಿದ, 'ಗಂಡ ಹೆಂಡತಿ' ರೇಡಿಯೋ ನಾಟಕ,ಬಹಳ ಹೆಸರು ವಾಸಿಯಾಗಿತ್ತು.

ಪ್ರಶಸ್ತಿ ಪುರಸ್ಕಾರಗಳು:

ಬಿ.ಎ.ಸನದಿಯವರ ಕಾರ್ಯಕ್ಕೆ  ಹಲವಾರು ಪುರಸ್ಕಾರ ಮತ್ತು ಸನ್ಮಾನಗಳು ಬಂದಿದ್ದು ಅದರಲ್ಲಿ 2015ನೇ ಸಾಲಿನ ‘ಪಂಪ ಪ್ರಶಸ್ತಿ, ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್,ಗೋರುರು ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ, ಭೂಸನೂರ ಮಠ ಪ್ರತಿಷ್ಠಾನ ಪ್ರಶಸ್ತಿ,ಮುಂಬಯಿ ನ ಶ್ರೀ ನಾರಾಯಣ ಗುರು ಪ್ರಶಸ್ತಿಗಳು ಪ್ರಮುಖವಾದವುಗಳು. 

 

Trending News