Shani Dev: ಕೆಲವೇ ಗಂಟೆಗಳ ಬಳಿಕ 3 ರಾಶಿಗಳ ಮೇಲೆ ಶನಿಯ ಕೃಪಾವೃಷ್ಟಿ, ಶುಭ ದಶಮ ದೃಷ್ಟಿಯಿಂದ ಅಪಾರ ಧನ ಪ್ರಾಪ್ತಿಯ ಯೋಗ!

Shani Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವ ತನ್ನ ದಶಮಿ ಶುಭ ದೃಷ್ಟಿಯನ್ನು ಬೀರಲು ಆರಂಭಿಸಿದ್ದು, ಕೆಲ ರಾಶಿಗಳ ಪಾಲಿಗೆ ಇದು ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಶನಿಯ ಈ ದಶಮ ದೃಷ್ಟಿಯಿಂದ ಒಟ್ಟು 3 ರಾಶಿಗಳ ಜಾತಕದವರಿಗೆ ಭಾರಿ ಧನಲಾಭವಾಗಲಿದ್ದು, ಬಡ್ತಿಯ ಎಲ್ಲಾ ಸಾಧ್ಯತೆಗಳು ಮತ್ತು ಯೋಗ ನಿರ್ಮಾಣಗೊಳ್ಳುತ್ತಿವೆ.  

Written by - Nitin Tabib | Last Updated : Apr 9, 2023, 09:09 PM IST
  • ಹಾಗೆ ನೋಡಿದರೆ ವೃಶ್ಚಿಕ ರಾಶಿಯ ಮೇಲೆ ಮಂಗಳ ದೇವನ ಆಧಿಪತ್ಯವಿದೆ.
  • ಹೀಗಿರುವಾಗ 3 ರಾಶಿಗಳ ಜನರ ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಭಾರಿ ಧನಲಾಭವಾಗುವ ಸಾಧ್ಯತೆ ಇದೆ.
  • ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ 3 ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Shani Dev: ಕೆಲವೇ ಗಂಟೆಗಳ ಬಳಿಕ 3 ರಾಶಿಗಳ ಮೇಲೆ ಶನಿಯ ಕೃಪಾವೃಷ್ಟಿ, ಶುಭ ದಶಮ ದೃಷ್ಟಿಯಿಂದ ಅಪಾರ ಧನ ಪ್ರಾಪ್ತಿಯ ಯೋಗ! title=
ಶನಿಯ ಶುಭ ದಶಮ ದೃಷ್ಟಿ, 3 ರಾಶಿಗಳಿಗೆ ಬಂಬಾಟ್ ಧನಲಾಭ!

Shani Drishti Prabhav: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲ-ಕಾಲಕ್ಕೆ ತನ್ನ ರಾಶಿಯನ್ನು ಪರಿವರ್ತಿಸಿ ಶುಭ ಹಾಗೂ ಅಶುಭ ಪ್ರಭಾವಗಳನ್ನು ಮಾನವನ ಜೀವನದ ಮೇಲೆ ಮತ್ತು ಭೂಮಿಯ ಮೇಲೇರುವ ಸಕಲ ಚರಾಚರಗಳ ಮೇಲೆ ಬೀರಲು ಪ್ರಾರಭಿಸುತ್ತವೆ. ಪ್ರಸ್ತುತ 30 ವರ್ಷಗಳ ಸುದೀರ್ಘ ಅವಧಿಯ ನಂತರ ಶನಿ ಮಹಾರಾಜ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿಯೇ ತನ್ನ ಸಂಚಾರ ಆರಂಭಿಸಿದ್ದು, ಆತ ತನ್ನ ದಶಮ ದೃಷ್ಟಿಯನ್ನು ವೃಶ್ಚಿಕ ರಾಶಿಯ ಮೇಲೆ ಕೇಂದ್ರೀಕರಿಸಿದ್ದಾನೆ. ಇನ್ನೊಂದೆಡೆ ಶುಕ್ರ ಗ್ರಹ ಕೂಡ ವೃಷ್ಟಿಕ ರಾಶಿಯ ಮೇಲೆ ತನ್ನ ಸಪ್ತಮ ದೃಷ್ಟಿಯನ್ನು ಬೀರಿದ್ದಾನೆ. ಇನ್ನೊಂದೆಡೆ ಶಶ್ ಹಾಗೂ ಮಾಲವ್ಯ ರಾಜಯೋಗಗಳು ಕೂಡ ರೂಪುಗೊಳ್ಳುತ್ತಿವೆ. ಹಾಗೆ ನೋಡಿದರೆ ವೃಶ್ಚಿಕ ರಾಶಿಯ ಮೇಲೆ ಮಂಗಳ ದೇವನ ಆಧಿಪತ್ಯವಿದೆ. ಹೀಗಿರುವಾಗ 3 ರಾಶಿಗಳ ಜನರ ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಭಾರಿ ಧನಲಾಭವಾಗುವ ಸಾಧ್ಯತೆ ಇದೆ. ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ 3 ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

ವೃಷಭ ರಾಶಿ: ವೃಷಭ ರಾಶಿಯ ಜಾತಕದವರ ಪಾಲಿಗೆ ಶನಿ ದೇವನ ದಶಮ ದೃಷ್ಟಿ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಏಪ್ರಿಲ್ 6 ರಂದು ಶುಕ್ರ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಗೋಚರಿಸಿದ್ದಾನೆ. ಮತ್ತು ಆತನ ಸಪ್ತಮ ದೃಷ್ಟಿ ನಿಮ್ಮ ಜಾತಕದ ದಾಂಪತ್ಯ ಭಾವದ ಮೇಲಿರಲಿದೆ. ಇನ್ನೊಂದೆಡೆ ಶನಿ ದೇವ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಆತನೂ ಕೂಡ ಸಪ್ತಮ ಭಾವದ ಮೇಲೆ ತನ್ನ ದೃಷ್ಟಿ ಕೇಂದ್ರೀಕರಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ನಿಮಗೆ ಸುಖ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ಮಹತ್ವದ ವ್ಯಾಪಾರ ಒಪ್ಪಂದ ಕುದುರುವ ಸಾಧ್ಯತೆ ಇದೆ. ಶನಿ ನಿಮ್ಮ ಜಾತಕದಲ್ಲಿ ನವಪಂಚಮ ರಾಜಯೋಗ ಕೂಡ ನಿರ್ಮಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾರಿ ನೆಮ್ಮದಿ ಸಿಗಲಿದೆ. ನಿಮ್ಮ ಅತ್ಯಾವಶ್ಯಕ ಕಾರ್ಯಗಳು ಪೂರ್ಣಗೊಳ್ಳಲಿದ್ದು ವೃತ್ತಿ ಜೀವನದಲ್ಲಿ ಉನ್ನತಿಯ ಯೋಗವಿದೆ.  

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ಪಾಲಿಗೆ ಶನಿಯ ದಶಮಿ ದೃಷ್ಟಿ ಅತ್ಯಂತ ಸುಖಕರ ಹಾಗೂ ಲಾಭಪ್ರದ ಸಾಗೀತಾಗಲಿದೆ. ಏಕೆಂದರೆ, ನಿಮ್ಮ ಗೋಚರ ಜಾತಕದ ವೃತ್ತಿಜೀವನ ಭಾವದ ಮೇಲೆ ಶುಕ್ರನ ಗೋಚಾರದಿಂದ ಮಾಲವ್ಯ ರಾಜಯೋಗ ನಿರ್ಮಾಣಗೊಳ್ಳುತ್ತಲಿದೆ. ಹೀಗಾಗಿ ಒಂದು ವೇಳೆ ನೀವು ಚಲನ ಚಿತ್ರೋದ್ಯಮ, ಕಲೆ, ಸಂಗೀತ ಅಥವಾ ಮಾಧ್ಯಮ ರಂಗಕ್ಕೆ ಸಂಬಂಧಿಸಿದ್ದರೆ, ಈ ಸಮಯ ನಿಮಗೆ ಅತ್ಯಂತ ಅದ್ಭುತ ಸಾಬೀತಾಗಲಿದೆ. ಇನ್ನೊಂದೆಡೆ ಶನಿಯ ದಶಮ ದೃಷ್ಟಿ ನಿಮ್ಮ ಜಾತಕದ ಚತುರ್ಥ ಭಾವದ ಮೇಲೆ ಇರಲಿದೆ. ಹೀಗಾಗಿ ಒಂದು ವೇಳೆ ನಿಮ್ಮ ವ್ಯಾಪಾರ ರಿಯಲ್ ಇಸ್ಟೇಟ್, ಎಣ್ಣೆ, ಮದ್ಯ, ಪೆಟ್ರೋಲಿಯಂ ಹಾಗೂ ಖನಿಜಕ್ಕೆ ಸಂಬಂಧಿಸಿದ್ದರೆ, ಈ ಸಮಯ ನಿಮ್ಮ ಪಾಲಿಗೆ ಅತ್ಯಂತ ಅದ್ಭುತ ಸಾಗೀತಾಗಲಿದೆ. ಇದಲ್ಲದೆ ಕಾಲಕಾಲಕ್ಕೆ  ನಿಮಗೆ ಆಸ್ತಿಪಾಸ್ತಿಯ ಲಾಭ ಕೂಡ ಸಿಗಲಿದೆ. 14 ಏಪ್ರಿಲ್ ನಿಂದ ನಿಮ್ಮ ರಾಶಿಯ ಅಧಿಪತಿಯಾಗಿರುವ ಸೂರ್ಯ ದೇವ ನಿಮ್ಮ ಅದೃಷ್ಟ ಭಾವದಲ್ಲಿ ಉಚ್ಚ ಸ್ಥಿತಿಯಲ್ಲಿರಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಭಾರಿ ಬೆಂಬಲ ಕೂಡ ಸಿಗಲಿದೆ.

ಇದನ್ನೂ ಓದಿ-Venus Transit 2023: 3 ರಾಶಿಗಳ ಗೋಚರ ಜಾತಕದಲ್ಲಿ 'ಮಹಾಧನ ಯೋಗ', ಶುಕ್ರನ ಕೃಪೆಯಿಂದ ಸಿಗಲಿದೆ ಅಪಾರ ಹಣ, ಸ್ಥಾನಮಾನ!
  
ಕುಂಭ ರಾಶಿ: ಶನಿ ದೇವನ ದಶಮ ದೃಷ್ಟಿ ಕುಂಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಶನಿ ದೇವ ನಿಮ್ಮ ಗೋಚರ ಜಾತಕದಲ್ಲಿ ಶಶ್ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಿಸಿದ್ದಾನೆ. ಇನ್ನೊಂದೆಡೆ ಶುಕ್ರ ಗೋಚರದಿಂದ ಮಾಲವ್ಯ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಇದರ ಜೊತೆಗೆ ಶನಿಯ ಹಾಗೂ ಶುಕ್ರನ ದೃಷ್ಟಿ ನಿಮ್ಮ ವೃತ್ತಿಜೀವನ ಹಾಗೂ ವ್ಯಾಪಾರದ ಭಾವದ ಮೇಲಿರಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಕೆಲಸ ಮತ್ತು ವ್ಯಾಪಾರದಲ್ಲಿ ನಿಮಗೆ ಭಾರಿ ಲಾಭ ಉಂಟಾಗುವ ಎಲ್ಲಾ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಪಾರ ಧನಲಾಬವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಈಗಾಗಲೇ ನೌಕರಿಯನ್ನು ಹೊಂದಿರುವ ಜನರಿಗೆ ಪದೋನ್ನತಿ ಮತ್ತು ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. 

ಇದನ್ನೂ ಓದಿ-April 22 ರಿಂದ ಮೇಷ ಸೇರಿದಂತೆ 3 ರಾಶಿಗಳ ಅಚ್ಛೆ ದಿನ್ ಆರಂಭ, ಗುರು ಗೋಚರದಿಂದ ಅಪಾರ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News