ರೈಲ್ವೆ ಪ್ರಯಾಣಿಕರ ಗಮನಕ್ಕೆ; ಬೆಂಗಳೂರು-ಮೈಸೂರು ಮಾರ್ಗದ ರೈಲುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!

Bengaluru to Mysore Trains: ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ರೈಲುಗಳ ಸೇವೆ ನೀಡಲಾಗಿದೆ. ಈ ಮಾರ್ಗದಲ್ಲಿ ಒಟ್ಟು 20 ರೈಲುಗಳು ಪ್ರತಿದಿನವೂ ಸಂಚಾರ ನಡೆಸುತ್ತವೆ. ಅಲ್ಲದೆ ಪ್ರಯಾಣಿಕರ ಬೇಡಿಕೆ ಮೇರೆಗೆ ಆಗಾಗ ವಿಶೇಷ ರೈಲುಗಳನ್ನು ಸಹ ಬಿಡಲಾಗುತ್ತದೆ. 

Written by - Puttaraj K Alur | Last Updated : Dec 22, 2024, 09:13 PM IST
  • ಬೆಂಗಳೂರು-ಮೈಸೂರು ನಡುವೆ ಯಾವ್ಯಾವ ರೈಲುಗಳು ಸಂಚರಿಸುತ್ತವೆ
  • ಈ ಮಾರ್ಗದಲ್ಲಿ ಒಟ್ಟು 20 ರೈಲುಗಳು ಪ್ರತಿದಿನವೂ ಸಂಚಾರ ನಡೆಸುತ್ತವೆ
  • ಯಾವ ಸಮಯದಲ್ಲಿ ಸಂಚಾರಿಸುತ್ತವೆ ಅನ್ನೋದರ ಸಂಪೂರ್ಣ ಮಾಹಿತಿ
ರೈಲ್ವೆ ಪ್ರಯಾಣಿಕರ ಗಮನಕ್ಕೆ; ಬೆಂಗಳೂರು-ಮೈಸೂರು ಮಾರ್ಗದ ರೈಲುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!! title=
ಬೆಂಗಳೂರು-ಮೈಸೂರು ರೈಲ್ವೆ ಸಂಚಾರ

Bengaluru-Mysore Routeʼs: ಭಾರತೀಯ ರೈಲ್ವೆ ಇಲಾಖೆಯು ಅತ್ಯಂತ ದೊಡ್ಡ ಸಾರಿಗೆಯಾಗಿದೆ. ಪ್ರತಿನಿತ್ಯವೂ ರೈಲುಗಳಲ್ಲಿ ಕೊಟ್ಯಂತರ ಪ್ರಯಾಣಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುತ್ತಾರೆ. ಸುರಕ್ಷತೆ ಮತ್ತು ಟಿಕೆಟ್‌ ದರಗಳು ಕಡಿಮೆ ಇರುವ ಹಿನ್ನೆಲೆ ರೈಲ್ವೆಯಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಾರೆ. ಬೆಂಗಳೂರು-ಮೈಸೂರು ನಡುವೆ ಯಾವ್ಯಾವ ರೈಲುಗಳು ಸಂಚರಿಸುತ್ತವೆ ಹಾಗೂ ಯಾವ ಸಮಯದಲ್ಲಿ ಸಂಚಾರ ನಡೆಸುತ್ತವೆ ಅನ್ನೋದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.  

ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ರೈಲುಗಳ ಸೇವೆ ನೀಡಲಾಗಿದೆ. ಈ ಮಾರ್ಗದಲ್ಲಿ ಒಟ್ಟು 20 ರೈಲುಗಳು ಪ್ರತಿದಿನವೂ ಸಂಚಾರ ನಡೆಸುತ್ತವೆ. ಅಲ್ಲದೆ ಪ್ರಯಾಣಿಕರ ಬೇಡಿಕೆ ಮೇರೆಗೆ ಆಗಾಗ ವಿಶೇಷ ರೈಲುಗಳನ್ನು ಸಹ ಬಿಡಲಾಗುತ್ತದೆ. ಈ ಮಾರ್ಗದ 20 ರೈಲುಗಳ ಪೈಕಿ ಹೆಚ್ಚಿನವು ಎಕ್ಸ್‌ಪ್ರೆಸ್ ರೈಲುಗಳಾಗಿವೆ. ಈ ಮಾರ್ಗದಲ್ಲಿ 10 ರೈಲುಗಳು ವಿಶ್ವಾಸಾರ್ಹ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತವೆ, 5 ಸೂಪರ್‌ಫಾಸ್ಟ್ ರೈಲುಗಳಿದ್ದರೆ, 2 ಮೆಮು ರೈಲುಗಳಿವೆ. ಇವು ಕಡಿಮೆ ದೂರ ಪ್ರಯಾಣಕ್ಕೆ ಸೂಕ್ತವಾಗಿದೆ. ಇನ್ನು 1 ಶತಾಬ್ದಿ ರೈಲು ಸೇವೆ ನೀಡುತ್ತಿದ್ದು, ಇದು ಅತ್ಯಂತ ವೇಗದ ರೈಲಾಗಿದೆ. ಅದೇ ರೀತಿ 2 ವಂದೇ ಭಾರತ್ ಹೈಸ್ಪೀಡ್‌ ರೈಲುಗಳು ಸಂಚರಿಸುತ್ತವೆ.

ಇದನ್ನೂ ಓದಿ: ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು-ಮೈಸೂರು ರೈಲುಗಳ ಸಂಪೂರ್ಣ ವಿವರ ಇಲ್ಲಿದೆ...

1. ರೈಲು ನಂಬರ್ 16218: ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 12:55ಕ್ಕೆ ಹೊರಟು ಬೆಳಗ್ಗೆ 3:20ಕ್ಕೆ ಮೈಸೂರನ್ನು ತಲುಪುತ್ತದೆ.
2. ರೈಲು ನಂಬರ್ 16021: ಕಾವೇರಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 4 ಗಂಟೆಗೆ ಹೊರಟು 6:55ಕ್ಕೆ ಮೈಸೂರನ್ನು ತಲುಪಲಿದೆ.
3. ರೈಲು ನಂಬರ್ 16220: ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 4:30ಕ್ಕೆ ಹೊರಟು 7:25ಕ್ಕೆ ಮೈಸೂರನ್ನು ತಲುಪಲಿದೆ.
4. ರೈಲು ನಂಬರ್ 16228: ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 5:05ಕ್ಕೆ ಹೊರಟು 8:20ಕ್ಕೆ ಮೈಸೂರನ್ನು ತಲುಪಲಿದೆ.
4. ರೈಲು ನಂಬರ್ 16228: ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 5:05ಕ್ಕೆ ಹೊರಟು 8:20ಕ್ಕೆ ಮೈಸೂರನ್ನು ತಲುಪಲಿದೆ.
5. ರೈಲು ನಂಬರ್ 22682: ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ವಾರಕ್ಕೆ ಒಮ್ಮೆ ಅಂದರೆ ಶುಕ್ರವಾರ ಬೆಂಗಳೂರಿನಿಂದ ಬೆಳಗ್ಗೆ 5:25ಕ್ಕೆ ಹೊರಟು 8:35ಕ್ಕೆ ಮೈಸೂರನ್ನು ತಲುಪುತ್ತದೆ.
6. ರೈಲು ನಂಬರ್ 16231: ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 4:45ಕ್ಕೆ ಹೊರಟು 8 ಗಂಟೆಗೆ ಮೈಸೂರನ್ನು ತಲುಪುತ್ತದೆ.
7. ರೈಲು ನಂಬರ್ 16591: ಹಂಪಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 6ಕ್ಕೆ ಹೊರಟು 9 ಗಂಟೆಗೆ ಮೈಸೂರನ್ನು ತಲುಪುತ್ತದೆ.
8. ರೈಲು ನಂಬರ್ 12785: ಕಾಚಿಗುಡ-ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 6:35ಕ್ಕೆ ಹೊರಟು 9:55ಕ್ಕೆ ಮೈಸೂರನ್ನು ತಲುಪುತ್ತದೆ.
9. ರೈಲು ನಂಬರ್ 16235: ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 7:15ಕ್ಕೆ ಹೊರಟು 10:45ಕ್ಕೆ ಮೈಸೂರನ್ನು ತಲುಪುತ್ತದೆ.
10. ರೈಲು ನಂಬರ್ 16536: ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 8ಕ್ಕೆ ಹೊರಟು 11:15ಕ್ಕೆ ಮೈಸೂರನ್ನು ತಲುಪುತ್ತದೆ.
11. ರೈಲು ನಂಬರ್ 17308: ಬಸವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 8:20ಕ್ಕೆ ಹೊರಟು 11:40ಕ್ಕೆ ಮೈಸೂರನ್ನು ತಲುಪುತ್ತದೆ.
12. ರೈಲು ನಂಬರ್ 16316: ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 8:35ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಮೈಸೂರನ್ನು ತಲುಪುತ್ತದೆ.
13. ರೈಲು ನಂಬರ್ 20607: MGR ಚೆನ್ನೈ ಸೆಂಟ್ರಲ್-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಬೆಂಗಳೂರಿನಿಂದ ಬೆಳಗ್ಗೆ 10:15ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 12:20 ಗಂಟೆಗೆ ತಲುಪುತ್ತದೆ.
14. ರೈಲು ನಂಬರ್ 12007: ಶತಾಬ್ದಿ ಎಕ್ಸ್‌ಪ್ರೆಸ್ ಬುಧವಾರ ಹೊರತುಪಡಿಸಿ ಪ್ರತಿದಿನವೂ ಬೆಂಗಳೂರಿನಿಂದ ಬೆಳಗ್ಗೆ 10:45ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ.
15. ರೈಲು ನಂಬರ್ 20660: ರಾಜ-ರಾಣಿ ಎಸ್ಎಫ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 11:30ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ.
16. ರೈಲು ನಂಬರ್ 12976: ಜೈಪುರ-ಮೈಸೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಬುಧವಾರ ಹಾಗೂ ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನ 1:15ಕ್ಕೆ ಹೊರಟು ಮೈಸೂರನ್ನು ಸಂಜೆ 4 ಗಂಟೆಗೆ ತಲುಪುತ್ತದೆ.
17. ರೈಲು ನಂಬರ್ 20624: ಮಾಲ್ಗುಡಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 1:50ಕ್ಕೆ ಹೊರಟು ಮೈಸೂರನ್ನು ಸಂಜೆ 4:20ಕ್ಕೆ ತಲುಪುತ್ತದೆ.
18. ರೈಲು ನಂಬರ್ 12614: ಒಡೆಯರ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ ಹೊರಟು ಮೈಸೂರನ್ನು ಸಂಜೆ 5:45ಕ್ಕೆ ತಲುಪುತ್ತದೆ.
19. ರೈಲು ನಂಬರ್ 17325: ವಿಶ್ವಮಾನವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಟು ಮೈಸೂರನ್ನು ರಾತ್ರಿ 8:40ಕ್ಕೆ ತಲುಪುತ್ತದೆ.
20. ರೈಲು ನಂಬರ್ 16216: ಚಾಮುಂಡಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು ಮೈಸೂರನ್ನು ರಾತ್ರಿ 9 ಗಂಟೆಗೆ ತಲುಪುತ್ತದೆ.
21. ರೈಲು ನಂಬರ್ 01662: RKMP-ಮೈಸೂರು ವಿಶೇಷ ರೈಲು ಶುಕ್ರವಾರ ಬೆಂಗಳೂರಿನಿಂದ ಸಂಜೆ 6:35ಕ್ಕೆ ಹೊರಟು ಮೈಸೂರನ್ನು ರಾತ್ರಿ 9:40ಕ್ಕೆ ತಲುಪುತ್ತದೆ.
22. ರೈಲು ನಂಬರ್ 12609: ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ಮೈಸೂರನ್ನು ರಾತ್ರಿ 10.50ಕ್ಕೆ ತಲುಪುತ್ತದೆ.
23. ರೈಲು ನಂಬರ್ 16585: SMVT ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಟು ಮೈಸೂರನ್ನು ರಾತ್ರಿ 12:10ಕ್ಕೆ ತಲುಪುತ್ತದೆ.
24. ರೈಲು ನಂಬರ್ 20664: SMVT ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9:30ಕ್ಕೆ ಹೊರಟು ಮೈಸೂರನ್ನು ರಾತ್ರಿ 11:55ಕ್ಕೆ ತಲುಪುತ್ತದೆ.

ರೈಲುಗಳು ಬೆಂಗಳೂರು-ಮೈಸೂರು ನಡುವೆ ಪ್ರಯಾಣ ಬೆಳೆಸುವ ಸಾಮಾನ್ಯ ಪ್ರಯಾಣಿಕರಿಗೆ ಅಷ್ಟೇ ಅಲ್ಲದೆ, ಈ ಎರಡು ನಗರಗಳಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಹಕಾರಿಯಾಗಲಿವೆ. 

ಇದನ್ನೂ ಓದಿ: Pushpa 2 ಸಿನಿಮಾ ನೋಡಲು ಆಗಲಿಲ್ಲ ಅಂತ 3ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News