ಮನೆಯಲ್ಲಿಯೇ ಬಾಳೆಹಣ್ಣಿನ ಚಿಪ್ಸ್‌ನ್ನು ತಯಾರಿಸಬಹುದು..! ಹೇಗೆ ಗೊತ್ತಾ?

Make banana chips at home: ಕುರುಕುಲು ತಿಂಡಿ ಎಂದರೇ ಎಲ್ಲರಿಗೂ ಇಷ್ಟ..ಅದರಲ್ಲೂ ಈ ಹೆಚ್ಚು ಜನರಿಗೆ ಈ ಚಿಪ್ಸ್‌ ಮೇಲೆ ಒಲವು ಜಾಸ್ತಿ. ಹೇಳಿ ಯಾರಾದರೂ ಚಿಪ್ಸ್‌ ತಿನ್ನಲು ನೋ ಎಂದು ಹೇಳಿದ್ದೀರಾ..? ಖಂಡಿತಾ ಇಲ್ಲ. ಆದರೆ ಈ ಚಿಪ್ಸ್‌ಗಳನ್ನು ಮನೆಯಲ್ಲಿಯೂ ತಯಾರಿಸಬಹುದು ಎಂಬುದು ನಿಮಗೂ ಗೊತ್ತು ಆದರೆ ಹೇಗೆ ಅನ್ನೋದು ಮಾತ್ರ ಗೊತ್ತಿಲ್ಲ. ಅದಕ್ಕೆ ಈ ಸ್ಟೋರಿ ಓದಿ..

Written by - Savita M B | Last Updated : Sep 23, 2023, 03:34 PM IST
  • ಕೆಲವು ದಿನಗಳಿಂದ ವಾತಾವರಣ ಸ್ವಲ್ಪ ತಣ್ಣಗಿದೆ.
  • ಇಂತಹ ಕ್ಲೈಮೆಟ್‌ನಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು, ಕುಡಿಯಬೇಕು ಅನ್ನಿಸುತ್ತದೆ
  • ಹೆಚ್ಚಾಗಿ ಜನರು ತಿನ್ನಲು ಬಯಸುವುದು ಕರಿದ ತಿಂಡಿಗಳನ್ನು ಅದರಲ್ಲಿ ಚಿಪ್ಸ್‌ ಕೂಡ ಒಂದು.
ಮನೆಯಲ್ಲಿಯೇ ಬಾಳೆಹಣ್ಣಿನ ಚಿಪ್ಸ್‌ನ್ನು ತಯಾರಿಸಬಹುದು..! ಹೇಗೆ ಗೊತ್ತಾ?  title=

Banana chips: ಕೆಲವು ದಿನಗಳಿಂದ ವಾತಾವರಣ ಸ್ವಲ್ಪ ತಣ್ಣಗಿದೆ. ಇಂತಹ ಕ್ಲೈಮೆಟ್‌ನಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು, ಕುಡಿಯಬೇಕು ಎನ್ನುವುದು ಎಲ್ಲರ ಬಾಯಿಯ ಚಪಲ. ಹೆಚ್ಚಾಗಿ ಜನರು ತಿನ್ನಲು ಬಯಸುವುದು ಕರಿದ ತಿಂಡಿಗಳನ್ನು ಅದರಲ್ಲಿ ಚಿಪ್ಸ್‌ ಕೂಡ ಒಂದು. ಈ ಚಿಪ್ಸ್‌ನ್ನು ಸಾಕಷ್ಟು ವಿಧದಲ್ಲಿ ತಯಾರಿಸಲಾಗುತ್ತದೆ. 

ಬಾಳಿಕಾಯಿ, ಆಲೂಗಡ್ಡೆ, ಹಾಗಲಕಾಯಿ ಹೀಗೆ ವಿವಿಧ ತರಹದ ಚಿಪ್ಸ್‌ಗಳಿವೆ ಅದರಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿರುವುದ ಆಲೂಗಡ್ಡೆ ಹಾಗೂ ಬಾಳಿಕಾಯಿ ಚಿಪ್ಸ್‌.. ಇದೀಗ ಬಾಳಿಕಾಯಿ ಚಿಪ್ಸ್‌ನ್ನು ಮನೆಯಲ್ಲಿಯೇ ತಯಾರು ಮಾಡೋದು ಹೇಗೆ ಎನ್ನೋದನ್ನು ತಿಳಿಯೋಣ..

ಬಾಳೆಕಾಯಿ ಚಿಪ್ಸ್‌ ಮಾಡಲು ಬೇಕಾಗುವ ಸಾಮಗ್ರಿಗಳು
* ಬಾಳೆಕಾಯಿ – 2 ಅಥವಾ 4
* ಅರಿಶಿನ ಪುಡಿ – ಚಿಟಿಕೆ
* ಖಾರದ ಪುಡಿ – ಅರ್ಧ ಚಮಚ
* ಗರಂ ಮಸಾಲ – ಅರ್ಧ ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಕರಿಯಲು

ಇದನ್ನೂ ಓದಿ-ಅಪಧಮನಿಗಳಲ್ಲಿನ ಹಟಮಾರಿ ಜಿಡ್ಡು ತೊಲಗಿಸಲು ನಿಮ್ಮ ಆಹಾರದಲ್ಲಿರಲಿ ಈ ಪದಾರ್ಥಗಳು!

ಬಾಳೆಕಾಯಿ ಚಿಪ್ಸ್‌ ಮಾಡುವ ವಿಧಾನ 
*  ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಡಿ.
*  ಬಾಳೆಕಾಯಿ ಸಿಪ್ಪೆಯನ್ನು ತೆಗೆದು, ಚಿಕ್ಕದಾಗಿ ಗಾಲಿಯ ರೂಪದಲ್ಲಿ ಕಟ್ ಮಾಡಿ.
*  ನಂತರ ಕಾದ ಎಣ್ಣೆಗೆ ಬಾಳೆಕಾಯಿಯ ಸ್ಲೈಸ್ ಗಳನ್ನು ಹಾಕಿ.
*  ಬಾಳೆಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿ, ನಂತರ ಟಿಶ್ಯೂ ಪೇಪರ್ ಮೇಲೆ ಹಾಕಿ.
*  ಆರಿದ ನಂತರ ಅದಕ್ಕೆ ಉಪ್ಪು, ಅರಶಿನ ಪುಡಿ, ಖಾರದ ಪುಡಿ, ಗರಂ ಮಸಾಲ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. 
*  ಇದೀಗ ಗರಿ ಗರಿಯಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧವಾಗಿರುತ್ತವೆ 

ಇದನ್ನೂ ಓದಿ-ಹೈಪೋಥೈರಾಯ್ಡ್‌ನಿಂದ ಹೆಚ್ಚಾದ ತೂಕವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News