Birth Astrology: ಕೆಲಸದಲ್ಲಿ ಸೋಮಾರಿ, ಪ್ರೀತಿಯ ಜೀವನದಲ್ಲಿ ಆಕ್ಟಿವ್ ಆಗಿರ್ತಾರೆ ಈ ತಿಂಗಳಲ್ಲಿ ಜನಿಸಿದ ಜನ

Birth Astrology: ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರು ತುಂಬಾ ಸೃಜನಶೀಲರು ಮತ್ತು ಬುದ್ಧಿವಂತರು. ಆದರೆ ಕೆಲವು ಕೆಲಸಗಳಲ್ಲಿ ಅವರು ತುಂಬಾ ಸೋಮಾರಿಗಳು.

Written by - Yashaswini V | Last Updated : Dec 6, 2021, 09:37 AM IST
  • ಈ ರಾಶಿಯವರು ವೃತ್ತಿ ಜೀವನದಲ್ಲಿ ಅದೃಷ್ಟವಂತರು
  • ಈ ತಿಂಗಳಲ್ಲಿ ಜನಿಸಿದವರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಅತ್ಯುತ್ತಮರು
  • ಇವರು ಕಲಾ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಗಳಿಸುತ್ತಾರೆ
Birth Astrology: ಕೆಲಸದಲ್ಲಿ ಸೋಮಾರಿ, ಪ್ರೀತಿಯ ಜೀವನದಲ್ಲಿ ಆಕ್ಟಿವ್ ಆಗಿರ್ತಾರೆ ಈ ತಿಂಗಳಲ್ಲಿ ಜನಿಸಿದ ಜನ  title=
Birth Astrology: ಕೆಲಸದಲ್ಲಿ ಸೋಮಾರಿ, ಪ್ರೀತಿಯ ಜೀವನದಲ್ಲಿ ಆಕ್ಟಿವ್ ಆಗಿರ್ತಾರೆ ಈ ತಿಂಗಳಲ್ಲಿ ಜನಿಸಿದ ಜನ

Birth Astrology:  ಪ್ರತಿ ತಿಂಗಳೂ ಜನಿಸುವವರು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿರುತ್ತಾರೆ. ಕೆಲವರು ಹಣ ಸಂಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮತ್ತೆ ಕೆಲವರು ಸಂಬಂಧಗಳನ್ನು ಬೆಳೆಸುವುದರಲ್ಲಿ ಉತ್ತಮರಾಗಿರುತ್ತಾರೆ. 2021 ರ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ನಾವಿದ್ದೇವೆ. ಈ ಮಾಸದಲ್ಲಿ ಹುಟ್ಟಿದವರಿಗೂ ಅವರದ್ದೇ ಆದ ವಿಶೇಷತೆಗಳಿರುತ್ತವೆ. ಈ ತಿಂಗಳಲ್ಲಿ ಹುಟ್ಟಿದವರು ತುಂಬಾ ಬುದ್ಧಿವಂತರು. ದಿನನಿತ್ಯದ ಕೆಲಸದಲ್ಲಿ ಕೊಂಚ ಸೋಮಾರಿಯಾಗಿದ್ದರೂ ತನ್ನ ಕ್ರಿಯಾಶೀಲತೆಯಿಂದ ಬೇಗನೇ ಜನರ ಅಚ್ಚುಮೆಚ್ಚಿನ ವ್ಯಕ್ತಿಯಾಗುತ್ತಾರೆ. 

ಈ ತಿಂಗಳಲ್ಲಿ ಹುಟ್ಟಿದವರು ನಾಯಕರಾಗಿರುತ್ತಾರೆ:
ಈ ತಿಂಗಳಲ್ಲಿ ಜನಿಸಿದವರು ನಾಯಕರಾಗಿ (Birth Astrology) ಹುಟ್ಟುತ್ತಾರೆ. ಸಾಮಾನ್ಯವಾಗಿ ಅವರು ತುಂಬಾ ಸೃಜನಶೀಲರು ಮತ್ತು ಇದರಿಂದಾಗಿ ಅವರು ಕಲಾ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಅವರು ತಮ್ಮ ಸ್ವಂತ ಅರ್ಹತೆಯ ಮೇಲೆ ಸ್ವಯಂ-ತಪ್ಪೊಪ್ಪಿಗೆಯ ಮೂಲಕ ದುರಹಂಕಾರಕ್ಕೆ ಬಲಿಯಾಗುತ್ತಾರೆ. ಕೆಲವೊಮ್ಮೆ ಇತರ ಜನರೊಂದಿಗೆ ಹೆಜ್ಜೆ ಹಾಕಲು ಅವರಿಗೆ ಕಷ್ಟವಾಗುತ್ತದೆ, ಆದರೆ ಅವರ ಸಾಮರ್ಥ್ಯವು ಜನರನ್ನು ಅವರೊಂದಿಗೆ ಸಂಪರ್ಕಿಸುತ್ತದೆ. 

ಇದನ್ನೂ ಓದಿ- Jupiter Transit: ಮುಂದಿನ 3 ತಿಂಗಳು ಈ 5 ರಾಶಿಯವರಿಗೆ ಗುರುವಿನ ಆಶೀರ್ವಾದ, ಅಪಾರ ಯಶಸ್ಸು

ಕುಟುಂಬದ ಪ್ರೀತಿ :
ಸಂಬಂಧವನ್ನು ಕಾಪಾಡಿಕೊಳ್ಳುವ ಬಗ್ಗೆ ಹೇಳುವುದಾದರೆ, ಡಿಸೆಂಬರ್ನಲ್ಲಿ ಜನಿಸಿದ ಜನರು (December Born People) ಈ ವಿಷಯದಲ್ಲಿ ಬಹಳ ಅದ್ಭುತರಾಗಿದ್ದಾರೆ. ಅದು ಪ್ರೇಮ ಜೀವನ, ವೈವಾಹಿಕ ಜೀವನ, ಸ್ನೇಹ ಅಥವಾ ದೂರದ ಸಂಬಂಧಿಕರು ಸಹ ಇವರ ಪ್ರತಿ ಸಂತೋಷ ಮತ್ತು ದುಃಖದಲ್ಲಿ ಅವರೊಂದಿಗೆ ನಿಲ್ಲುತ್ತಾರೆ. ಅವರು ತಮ್ಮ ಸಂಗಾತಿಯನ್ನು ಬೇಷರತ್ತಾಗಿ ಪ್ರೀತಿಸುತ್ತಾರೆ ಮತ್ತು ತುಂಬಾ ಕಾಳಜಿ ವಹಿಸುತ್ತಾರೆ. ಗೆಳೆಯರ ಗೆಳೆಯ ಎಂದು ಕರೆದರೂ ತಪ್ಪಾಗುವುದಿಲ್ಲ. ಮತ್ತೊಂದೆಡೆ, ತಮ್ಮ ಜೊತೆಗಿರುವವರು ಏನನ್ನೂ ಹೇಳದೇ ಇದ್ದರೂ ಸಹ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು, ಅವರ ಭಾವನೆಗಳನ್ನೂ ಇವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. 

ಇದನ್ನೂ ಓದಿ- ಗ್ರಹಣ 2022: ಯಾವಾಗ ಗೋಚರಿಸುತ್ತದೆ ಮುಂದಿನ ಗ್ರಹಣ?, ಯಾವ ರಾಶಿಗಳಿಗೆ ಹೆಚ್ಚು ಪರಿಣಾಮ!

ಪ್ರಾಮಾಣಿಕ ಮತ್ತು ಅದೃಷ್ಟ :
ಈ ತಿಂಗಳಲ್ಲಿ ಜನಿಸಿದವರು ತಮ್ಮ ತತ್ವಗಳನ್ನು ಅನುಸರಿಸಬೇಕು. ಅವರು ಯಾವಾಗಲೂ ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಅದರ ಪ್ರಯೋಜನವನ್ನು ಸಹ ಪಡೆಯುತ್ತಾರೆ. ವೃತ್ತಿ ಬದುಕಿನಂತೆ ವೈಯಕ್ತಿಕ ಬದುಕಿನಲ್ಲೂ ಯಶಸ್ವಿಯಾಗಿದ್ದಾರೆ ಎನ್ನಬಹುದು. ಆದರೆ ಕೆಲವೊಮ್ಮೆ ದೊಡ್ಡ ಸಾಧನೆ ಮಾಡಿದ ನಂತರ ಅದಕ್ಕೆ ಅಂಟಿಕೊಳ್ಳುತ್ತಾರೆ. ಹಾಗೆ ಮಾಡುವುದರಿಂದ ಮುಂದೆ ಸಾಗದಂತೆ ತಡೆಯುತ್ತದೆ. ಈ ಜನರ ದೊಡ್ಡ ಸಮಸ್ಯೆಯೆಂದರೆ ಅವರು ಕೆಲವು ಕೆಲಸವನ್ನು ಕೊನೆಯ ಹಂತದವರೆಗೂ ಮುಂದೂಡುತ್ತಾರೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಊಹೆಗಳು ಮತ್ತು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News