Chicken Biryani Rates: 30 ರೂ. ಗೆ ಚಿಕನ್ ಬಿರಿಯಾನಿ, 32 ರೂ. ಗೆ ಮಟನ್ ಬಿರಿಯಾನಿ

Chicken Biryani Rates: ಪ್ರಪಂಚದಲ್ಲಿ ಆಹಾರದ ಕೊರತೆಯಿದೆ. ಆಹಾರ ಪದಾರ್ಥಗಳ ಬೆಲೆಗಳು ಅನಿರೀಕ್ಷಿತವಾಗಿ ಹೆಚ್ಚಾಗುತ್ತಿವೆ. ಬೆಲೆ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಆಹಾರ ಪ್ರಿಯರು ಮತ್ತು ಜನರು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಹಾಗಾಗಿಯೇ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಕೊರತೆ ಇಲ್ಲ.  

Written by - Chetana Devarmani | Last Updated : Aug 1, 2023, 05:12 PM IST
  • ಪ್ರಪಂಚದಲ್ಲಿ ಆಹಾರದ ಕೊರತೆಯಿದೆ
  • 30 ರೂ. ಗೆ ಚಿಕನ್ ಬಿರಿಯಾನಿ, 32 ರೂ. ಗೆ ಮಟನ್ ಬಿರಿಯಾನಿ
  • ವೈರಲ್‌ ಆದ ಹಳೆಯ ಮೆನು ಕಾರ್ಡ್‌
Chicken Biryani Rates: 30 ರೂ. ಗೆ ಚಿಕನ್ ಬಿರಿಯಾನಿ, 32 ರೂ. ಗೆ ಮಟನ್ ಬಿರಿಯಾನಿ  title=
Chicken Biryani

Chicken Rates in Year 2001: ಪ್ರಪಂಚದಲ್ಲಿ ಆಹಾರದ ಕೊರತೆಯಿದೆ. ಅದಕ್ಕಾಗಿಯೇ ಆಹಾರ ಪದಾರ್ಥಗಳ ಬೆಲೆಗಳು ಕಾಲಾನಂತರದಲ್ಲಿ ಅನಿರೀಕ್ಷಿತವಾಗಿ ಹೆಚ್ಚಾಗುತ್ತಿವೆ. ಬೆಲೆ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಆಹಾರ ಪ್ರಿಯರು ಮತ್ತು ಜನರು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಹಾಗಾಗಿಯೇ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಕೊರತೆ ಇಲ್ಲ. ಹಿಂದಿನ ಕಾಲದ ರೆಸ್ಟೊರೆಂಟ್‌ನಲ್ಲಿನ ಮೆನು ಕಾರ್ಡ್‌ ನೋಡಿದರೆ ನಿಮ್ಮ ಕಣ್ಣನ್ನೇ ನೀವು ನಂಬಲ್ಲ. 

ಇದನ್ನೂ ಓದಿ: ಕಪ್ಪು ಟೊಮೆಟೊ ಕ್ಯಾನ್ಸರ್‌ನಿಂದ ನೀಡುತ್ತೆ ಮುಕ್ತಿ, ನೀವು ಎಂದಾದರೂ ತಿಂದಿದ್ದೀರಾ?

ಇತ್ತೀಚೆಗೆ ಹಳೆಯ ಮೆನು ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಬರೆದಿರುವ ಆಹಾರ ಪದಾರ್ಥಗಳ ಬೆಲೆ ನೋಡಿದರೆ ಬೆಚ್ಚಿ ಬೀಳುತ್ತೀರಿ. ಅದರಲ್ಲೂ ನಾನ್ ವೆಜ್ ಐಟಂಗಳ ಬೆಲೆ ನೋಡಿದ್ರೆ ಶಾಕ್ ಆಗುವಿರಿ. ಆ ದಿನಗಳು ಈಗಿನದಕ್ಕಿಂತ ಸಿಕ್ಕಾಪಟ್ಟೆ ಕಡಿಮೆಯಾಗಿವೆ. 

2001ರ ಈ ಮೆನು ಕಾರ್ಡ್ ನಲ್ಲಿ ಎಗ್ ರೋಲ್ ರೂ.7ಕ್ಕೆ, ಚಿಕನ್ ರೋಲ್ ರೂ.10ಕ್ಕೆ, ಎಗ್ ಚಿಕನ್ ರೋಲ್ ರೂ.15ಕ್ಕೆ ಹಾಗೂ ಎಗ್ ಮಟನ್ ರೋಲ್ ರೂ.16ಕ್ಕೆ ದೊರೆಯಲಿದೆ ಎಂದು ನಮೂದಿಸಲಾಗಿದೆ. ಮೇಲಾಗಿ.. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರು ಹೆಚ್ಚು ಇಷ್ಟಪಟ್ಟು ತಿನ್ನುವ ಚಿಕನ್ ಬಿರಿಯಾನಿ ಕೇವಲ 30 ರೂ.ಗೆ ಲಭ್ಯವಿದೆ. ಚಿಕನ್ ಚಾಪ್ ರೂ.25, ಚಿಕನ್ ಡೋಪ್ಯಾಜಾ ರೂ.30, ಚಿಕನ್ ಮಸಾಲಾ ರೂ.85, ಚಿಕನ್ ಟಿಕ್ಕಾ ರೂ.45 ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. 

ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ಕಡಿಮೆ ಮಾಡುವ ಅದ್ಭುತ ಆಹಾರಗಳು

ಇಲ್ಲಿಯವರೆಗೆ ನೀವು ಹೆಚ್ಚಾಗಿ ನೋಡಿದ್ದು ಚಿಕನ್ ನಿಂದ ಮಾಡಿದ ವಸ್ತುಗಳನ್ನು ಮಾತ್ರ.. ಮಟನ್ ಬಿರಿಯಾನಿ ಬೆಲೆ ನೋಡಿದ್ರೆ.. ಮತ್ತೊಮ್ಮೆ ಶಾಕ್ ಆಗ್ತೀರಿ. 2001ರಲ್ಲಿ ಮಟನ್ ಬಿರಿಯಾನಿ ಕೇವಲ ರೂ.32ಕ್ಕೆ ದೊರೆಯುತ್ತಿತ್ತು. ಮಟನ್ ಹಂಡಿ ರೂ.50, ಮಟನ್ ಚಾಪ್ ರೂ.25 ಮಾತ್ರ. ಈ ಮೆನು ಕಾರ್ಡ್ ನೋಡಿದರೆ ಮೀನು ಖಾದ್ಯ ಪ್ರಿಯರಿಗೂ ಕಡಿಮೆ ಬೆಲೆಗೆ ಇಷ್ಟವಾದ ಆಹಾರ ಪದಾರ್ಥಗಳು ಸಿಗುತ್ತಿದ್ದವು ಎಂಬುದು ಅರ್ಥವಾಗುತ್ತದೆ. 10 ರೂ.ಗೆ ಫಿಶ್ ಫ್ರೈ, 10 ರೂ.ಗೆ ಫಿಶ್ ಕಟ್ಲೆಟ್, 16 ರೂ.ಗೆ ಫಿಶ್ ಫಿಂಗರ್, 25 ರೂ.ಗೆ ಫಿಶ್ ತಂದೂರಿ ಸಿಗುತ್ತದೆ ಎಂದು ಮೆನು ಕಾರ್ಡ್ ನಲ್ಲಿ ಬರೆಯಲಾಗಿದೆ. ರೋಟಿಗಳ ಬಗ್ಗೆ ಮಾತನಾಡುವುದಾದರೆ, ರುಮಾಲಿ ರೋಟಿ ಬೆಲೆ ಕೇವಲ ರೂ.1.25 ಮತ್ತು ಲಚ್ಚ ಪರಾಠ ಬೆಲೆ ರೂ.5 ಕ್ಕೆ ಲಭ್ಯವಿದೆ. ಆಗಿನ ಬೆಲೆಗೆ ಹೋಲಿಸಿದರೆ ಈಗ ನಾಲ್ಕೈದು ಪಟ್ಟು ಹೆಚ್ಚಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News