Health Tips: ನೀವೂ ಈ ರೀತಿ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಇಂದೇ ಎಚ್ಚರಿಕೆ ವಹಿಸಿರಿ

ನಿಮ್ಮ ತೊಡೆಯ ಮೇಲೆ ದೀರ್ಘಕಾಲ ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದರಿಂದ ಬಂಜೆತನದ ಸಮಸ್ಯೆ ಹೆಚ್ಚಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿರಿ.

Written by - Puttaraj K Alur | Last Updated : Jan 23, 2022, 07:46 AM IST
  • ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು
  • ನಿರಂತರವಾಗಿ ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡಿದರೆ ಬಂಜೆತನ ಸಮಸ್ಯೆ ಹೆಚ್ಚಾಗುತ್ತದೆ
  • ಲ್ಯಾಪ್‌ಟಾಪ್ ನಲ್ಲಿ ಕೆಲಸ ಮಾಡಲು ಅಥವಾ ಬಳಸುವ ಸರಿಯಾದ ಮಾರ್ಗ ಯಾವುದು ಎಂದು ತಿಳಿದುಕೊಳ್ಳಿರಿ
Health Tips: ನೀವೂ ಈ ರೀತಿ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಇಂದೇ ಎಚ್ಚರಿಕೆ ವಹಿಸಿರಿ title=
ಲ್ಯಾಪ್‌ಟಾಪ್ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅಪಾಯಕಾರಿ

ನವದೆಹಲಿ: ದೇಶಾದ್ಯಂತ ಕೊರೊನಾ(COVID-19) ಪ್ರಕರಣಗಳು ಹೆಚ್ಚಾಗತೊಡಗಿವೆ. ಇದರೊಂದಿಗೆ ಮನೆಯಿಂದಲೇ ಕೆಲಸ ಮಾಡುವ ಪರಿಪಾಠ ಮತ್ತೆ ಹೆಚ್ಚಿದೆ. ಮನೆಯಿಂದ ಕೆಲಸ ಮಾಡುವಾಗ ಅನೇಕ ಜನರು ಸೋಮಾರಿತನದಿಂದ ಲ್ಯಾಪ್‌ಟಾಪ್ ಅನ್ನು ತಮ್ಮ ತೊಡೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಏಕೆಂದರೆ ಲ್ಯಾಪ್‌ಟಾಪ್‌(Laptop)ನಿಂದ ಹೊರಸೂಸುವ ಶಾಖವು ನಿಮ್ಮ ಚರ್ಮ ಮತ್ತು ಆಂತರಿಕ ಅಂಗಾಂಶಗಳಿಗೆ ಹಾನಿಗೊಳಿಸುತ್ತದೆ. ನಿಮ್ಮ ತೊಡೆಯ ಮೇಲೆ ದೀರ್ಘಕಾಲ ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದರಿಂದ ಬಂಜೆತನ(Infertility)ದ ಸಮಸ್ಯೆ ಹೆಚ್ಚಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿರಿ.

ಪುರುಷರಲ್ಲಿ ಬಂಜೆತನದ ಸಮಸ್ಯೆಯುಂಟಾಗಬಹುದು

ಲ್ಯಾಪ್‌ಟಾಪ್(Laptop)ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವ ಅಭ್ಯಾಸವು ಪುರುಷರಲ್ಲಿ ಬಂಜೆತನದ ಸಮಸ್ಯೆ(Infertility Problem)ಯನ್ನು ಉಂಟುಮಾಡುತ್ತದೆ ಎಂದು ತಜ್ಞರು ನಂಬಿದ್ದಾರೆ. ಇದು ಪುರುಷರ ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಅವರ ವೀರ್ಯದ ಉತ್ಪತ್ತಿ ಕ್ಷಿಣಿಸಬಹುದು. ಇದಲ್ಲದೆ ಲ್ಯಾಪ್‌ಟಾಪ್ ಅನ್ನು ದೀರ್ಘಕಾಲ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದರಿಂದ ಪಾದದ ಚರ್ಮವು ಬೇರೆ ಬಣ್ಣಕ್ಕೆ ತಿರುಗುತ್ತದೆ, ಜೊತೆಗೆ ಚರ್ಮದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಕೆಲವು ಅಧ್ಯಯನಗಳಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: Weight Loss Tips : ವೇಗವಾಗಿ Belly Fat ಮತ್ತು ತೂಕ ಇಳಿಸಿಕೊಳ್ಳಲು ತಪ್ಪದೆ ಸೇವಿಸಿ ಈ ತರಕಾರಿಗಳನ್ನು!  

ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅಪಾಯಕಾರಿ

ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವುದು ಮಹಿಳೆಯರಿಗಿಂತ ಪುರುಷರಿಗೆ(Infertility In Men) ಹೆಚ್ಚು ಅಪಾಯಕಾರಿ. ಪುರುಷರ ದೈಹಿಕ ನೋಟದಿಂದ ಅವರು ಮಹಿಳೆಯರಿಗಿಂತ ಲ್ಯಾಪ್‌ಟಾಪ್ ಶಾಖದಿಂದ ಹೆಚ್ಚು ಬಳಲುತ್ತಾರಂತೆ. ಇದಕ್ಕೆ ಕಾರಣ ಮಹಿಳೆಯರಲ್ಲಿ ಗರ್ಭಾಶಯವು ದೇಹದ ಒಳಗಿದ್ದರೆ, ಪುರುಷರಲ್ಲಿ ವೃಷಣಗಳು ದೇಹದ ಹೊರಭಾಗದಲ್ಲಿರುತ್ತವೆ. ಈ ಕಾರಣದಿಂದ ಶಾಖದ ವಿಕಿರಣವು ಪುರುಷರ ಅಂಗಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಫಲವತ್ತತೆಯ ಸಮಸ್ಯೆಗಳಿಗೆ ಕಾರಣವಾಗಬಹುದು

ತಜ್ಞರ ಪ್ರಕಾರ ಲ್ಯಾಪ್‌ಟಾಪ್(Laptop) ಅನ್ನು ತೊಡೆಯ ಮೇಲಿಟ್ಟುಕೊಂಡು ದೀರ್ಘಕಾಲ ಕುಳಿತುಕೊಳ್ಳುವುದರಿಂದ ವೃಷಣಗಳ ಉಷ್ಣತೆ ಹೆಚ್ಚುತ್ತದೆ. ಲ್ಯಾಪ್‌ಟಾಪ್ ಸೌಮ್ಯವಾದ ಕಂಪನಗಳನ್ನು ಸೃಷ್ಟಿಸುವುದರಿಂದ ಇದು ಫಲವತ್ತತೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಲ್ಯಾಪ್‌ಟಾಪ್ ಅನ್ನು ಮೇಜಿನ ಮೇಲಿಟ್ಟು ಕೆಲಸ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.  

ವೈಫೈ ಇದ್ದರೂ ದೊಡ್ಡ ನಷ್ಟ..!

ವೈದ್ಯರ ಪ್ರಕಾರ ಲ್ಯಾಪ್‌ಟಾಪ್ ಬಳಕೆ ಅಪಾಯಕಾರಿ ಅಲ್ಲ, ಆದರೆ ಅದಕ್ಕೆ ಸಂಪರ್ಕಗೊಂಡಿರುವ ವೈಫೈ ಸಂಪರ್ಕವು ಹಾನಿಕಾರಕ. ಎಲ್ಲಾ ಇಂಟರ್ನೆಟ್ ಸಾಧನಗಳು ರೇಡಿಯೊಫ್ರೀಕ್ವೆನ್ಸಿಯನ್ನು ಬಳಸುತ್ತವೆ ಇದು ನಮ್ಮ ದೇಹದ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾರ್ಡ್ ಡ್ರೈವ್‌ಗಳು ಕಡಿಮೆ ಆವರ್ತನ ವಿಕಿರಣವನ್ನು ಹೊರಸೂಸುತ್ತವೆ, ಆದರೆ ಬ್ಲೂಟೂತ್(Bluetooth) ಸಂಪರ್ಕಗಳು ಹೆಚ್ಚಿನ ವಿಕಿರಣವನ್ನು ಹೊರಸೂಸುತ್ತವೆ. ಲ್ಯಾಪ್‌ಟಾಪ್ ಅನ್ನು ಶಾಖದಿಂದ ರಕ್ಷಿಸಲು ಇದು ತಂಪಾಗಿಸುವ ವ್ಯವಸ್ಥೆ ಹೊಂದಿದೆ, ಆದರೆ ಇದು ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

ಇದನ್ನೂ ಓದಿ: ಕಣ್ಣುಗಳೇ ಹೇಳುತ್ತದೆ ನಿಮ್ಮ ಅದೃಷ್ಟ , ಹೀಗಿದೆಯೇ ನಿಮ್ಮ ಅಕ್ಷಿ ಒಮ್ಮೆ ನೋಡಿಕೊಳ್ಳಿ

ಲ್ಯಾಪ್‌ಟಾಪ್ ಬಳಸಲು ಇದು ಸರಿಯಾದ ಮಾರ್ಗ

1) ನಿರಂತರವಾಗಿ ಕುಳಿತುಕೊಂಡು ಲ್ಯಾಪ್‌ಟಾಪ್‌(How To Use Laptop)ನಲ್ಲಿ ಕೆಲಸ ಮಾಡಬೇಡಿ, ಕೆಲಸದ ಸಮಯದಲ್ಲಿ ಆಗಾಗ ವಿರಾಮ ತೆಗೆದುಕೊಳ್ಳಿರಿ

2) ಲ್ಯಾಪ್‌ಟಾಪ್ ಅನ್ನು ಕಾಲು ಅಥವಾ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವ ಅಭ್ಯಾಸವನ್ನು ಇಂದಿನಿಂದಲೇ ಬಿಟ್ಟುಬಿಡಿ. ಮೇಜಿನ ಮೇಲೆ ಇಟ್ಟು ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿರಿ.   

3) ಲ್ಯಾಪ್‌ಟಾಪ್ ನಲ್ಲಿ ಕೆಲಸ ಮಾಡುವಾಗ ಶೀಲ್ಡ್ ಅನ್ನು ಬಳಸಿ. ಶೀಲ್ಡ್ ನ ಬಳಕೆಯು ಲ್ಯಾಪ್‌ಟಾಪ್ ಶಾಖ ಮತ್ತು ವಿಕಿರಣವನ್ನು ತಡೆಯುತ್ತದೆ.

4) ನಿರಂತರವಾಗಿ ಕೆಲಸ ಮಾಡುತ್ತಿರುವಾಗ ಲ್ಯಾಪ್‌ಟಾಪ್‌ ನಿಂದ ಹೆಚ್ಚು ಶಾಖ ಹೊರಬರುತ್ತಿದ್ದರೆ ಅಥವಾ ಜೋರಾದ ಸೌಂಡ್ ಇದೆ ಎಂದು ಭಾವಿಸಿದರೆ ಸ್ವಲ್ಪ ಸಮಯದವರೆಗೆ ಅದನ್ನು ಬಳಸುವುದನ್ನು ನಿಲ್ಲಿಸಿ.

5) ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ನೀಲಿ ಬೆಳಕಿನ ಫಿಲ್ಟರ್ ಅನ್ನು ಬಳಸಿ. ಫಿಲ್ಟರ್ ಕಣ್ಣುಗಳನ್ನು ವಿಕಿರಣದಿಂದ ರಕ್ಷಿಸುತ್ತದೆ.

6) ನಿಮ್ಮ ಕೆಲಸ ಮುಗಿಸಿದ ನಂತರ ವೈಫೈ ಆಫ್ ಮಾಡಿ. ಇಲ್ಲದ್ದಿದ್ದರೆ ಅದರಿಂದ ಹೊರಹೊಮ್ಮುವ ಶಾಖವು ನಿಮಗೆ ಹಾನಿಕಾರಕವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News