Ganesh Chaturthi 2022 Date: ಈ ಬಾರಿಯ ಗಣೇಶ ಚತುರ್ಥಿಯಂದು ನಿರ್ಮಾಣಗೊಳ್ಳುತ್ತಿರುವ ಅಪರೂಪದ ಶುಭಯೋಗದಲ್ಲಿ ಗಣಪತಿ ಆಗಮನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹಲವೆಡೆ ವಿಗ್ರಹಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ, ಭವ್ಯವಾದ ಮಂಡಪಗಳನ್ನು ಅಲಂಕರಿಸಲಾಗಿದೆ. ಆಗಸ್ಟ್ 31 ರಂದು ಸಾರ್ವಜನಿಕ ಕಾರ್ಯಕ್ರಮಗಳ ಜೊತೆಗೆ ಗಣೇಶ ಭಕ್ತರ ಮನೆ-ಮನೆಗಳಲ್ಲಿ ಶ್ರೀಗಣೇಶ ವಿರಾಜಮಾನನಾಗಲಿದ್ದಾನೆ. ಕೆಲವೆಡೆ 5 ದಿನ, ಕೆಲವೆಡೆ 7 ಹಾಗೂ ಕೆಲವೆಡೆ 11 ದಿನಗಳ ಕಾಲ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತದೆ. ಶಾಲೆ-ಕಚೇರಿ ಗಳಲ್ಲಿಯೂ ಗಣೇಶ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿವೆ.
ಈ ವರ್ಷ ಗಣೇಶ ಚತುರ್ಥಿಯಂದು ಅಪರೂಪದ ಕಾಕತಾಳೀಯ ಸಂಭವಿಸಲಿದೆ ಎಂಬುದು ಜೋತಿಷ್ಯ ಪಂಡಿತರ ಅಭಿಪ್ರಾಯವಾಗಿದೆ, ಇಂತಹ ಕಾಕತಾಳೀಯ 10 ವರ್ಷಗಳ ಹಿಂದೆ ಸಂಭವಿಸಿದೆ. ಶಾಸ್ತ್ರಗಳ ಪ್ರಕಾರ, ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ಶ್ರೀ ಗಣೇಶ ಜನಿಸಿದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆ ದಿನ ಬುಧವಾರದ ದಿನವಾಗಿತ್ತು. ಈ ವರ್ಷವೂ ಕೂಡ ಬುಧವಾರದ ದಿನ. ಗಣೇಶ ಉತ್ಸವವನ್ನು ಆಗಸ್ಟ್ 31 ರಿಂದ ಸೆಪ್ಟೆಂಬರ್ 9, 2022 ರವರೆಗೆ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಪ್ರಕಾರ, ಗಣಪತಿಯು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಮತ್ತು ಮಧ್ಯಾಹ್ನ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಎನ್ನಲಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಗಣೇಶ ಜನ್ಮೋತ್ಸವವನ್ನು ಸಂಭ್ರಮ ಸಂಭ್ರಮದಿಂದ ಆಚರಿಸಲಾಗುತ್ತದೆ.
ಇದನ್ನೂ ಓದಿ-Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್-ಚಲ್ ಸೃಷ್ಟಿಸಿದ 'ಪುಷ್ಪಾ' ಗಣಪತಿ
ಮಾರುಕಟ್ಟೆಗಳಲ್ಲಿ ಗಣಪತಿಯ ವಿಗ್ರಹಗಳಬುಕ್ ಮಾಡಲು ನಿರಂತರವಾಗಿ ಭಕ್ತಾದಿಗಳ ದಂಡೆ ಹರಿದುಬರುತ್ತಿದೆ. ಕುಶಲಕರ್ಮಿಗಳೂ ಕೂಡ ಹಗಲಿರುಳು ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಇದನ್ನೂ ಓದಿ-Ganesh Chaturthi 2022 : ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬೇಡಿ.. ದೊಡ್ಡ ನಷ್ಟ ಎದುರಿಸಬೇಕಾದೀತು
ಈ ಬಾರಿ ಗಣಪತಿಯ ಆಗಮನ ದಿನ ಬುಧವಾರ
ಈ ಬಾರಿ ಗಣಪತಿಯ ಆಗಮನ ಬುಧವಾರ ನಡೆಯುತ್ತಿದೆ. ಕರೋನಾ ಸಂಕ್ರಮಣ ಕಾಲದ ಕಾರಣ ಎರಡು ವರ್ಷಗಳಿಂದ ಗಣಪತಿ ಉತ್ಸವದ ಪಂಡಾಲ್ ಗಳು ನಿರ್ಜನವಾಗಿದ್ದವು, ಆದರೆ ಈ ಬಾರಿ ಭಕ್ತರಲ್ಲಿ ಭಾರಿ ಉತ್ಸಾಹ ಕಂಡುಬಂದಿದೆ. ಮಾರುಕಟ್ಟೆಗಳಲ್ಲಿ ಅಲಂಕಾರ ಮಳಿಗೆಗಳಲ್ಲಿನ ಜನದಟ್ಟನೆಯನ್ನು ನೋಡಿ ನೀವು ಅದನ್ನು ಅಂದಾಜಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.