Migraine: ದೀರ್ಘಕಾಲದ ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಹಸಿರು ಎಲೆಗಳ ತರಕಾರಿಗಳಲ್ಲಿ ಸಮೃದ್ಧವಾಗಿರುವ ಆಹಾರವು ಮೈಗ್ರೇನ್‌ಗೆ ಅತ್ಯುತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಇತರ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Written by - Puttaraj K Alur | Last Updated : Nov 21, 2021, 07:26 AM IST
  • ನಿಮಗೆ ಕಾಡುವ ದೀರ್ಘಕಾಲದ ಮಾರಕ ಮೈಗ್ರೇನ್ ಸಮಸ್ಯೆಗೆ ಪರಿಹಾರ ಇಲ್ಲಿದೆ
  • ಹಸಿರು ಎಲೆಗಳ ತರಕಾರಿ ಸೇನೆಯಿಂದ ಮೈಗ್ರೇನ್‌ಗೆ ಅತ್ಯುತ್ತಮ ಚಿಕಿತ್ಸೆ ಸಿಗಲಿದೆ
  • ಸಸ್ಯಾಧಾರಿತ ಆಹಾರವು ಮೈಗ್ರೇನ್ ಸಮಸ್ಯೆ ನಿಯಂತ್ರಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ
Migraine: ದೀರ್ಘಕಾಲದ ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ title=
ಮಾರಕ ಮೈಗ್ರೇನ್ ಸಮಸ್ಯೆಗೆ ಪರಿಹಾರ ಇಲ್ಲಿದೆ

ನವದೆಹಲಿ: ದೀರ್ಘಕಾಲದ ಮೈಗ್ರೇನ್(Migraine) ಸಮಸ್ಯೆಯಿಂದ ಬಳಲುತ್ತಿರುವ ಜನರ ರೋಗಲಕ್ಷಣಗಳನ್ನು ಸಸ್ಯಾಧಾರಿತ ಆಹಾರ(Plant Based Diet)ವು ನಿಯಂತ್ರಿಸುತ್ತದೆ ಎಂದು ಇತ್ತೀಚೆಗೆ ವೈದ್ಯರು ಬಹಿರಂಗಪಡಿಸಿದ್ದಾರೆ. ಹಸಿರು ಎಲೆಗಳ ತರಕಾರಿಗಳಲ್ಲಿ ಸಮೃದ್ಧವಾಗಿರುವ ಆಹಾರವು ಮೈಗ್ರೇನ್‌ಗೆ ಅತ್ಯುತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಇತರ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮೈಗ್ರೇನ್‌ನ ಕುರಿತ ಸಂಶೋಧನೆ ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಸಂಶೋಧನೆ ಏನು ಹೇಳುತ್ತದೆ?

ಈ ಸಂಶೋಧನೆಯನ್ನು ಆನ್‌ಲೈನ್‌ ‘BMJ Case Reports Journal’ನಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆಯಲ್ಲಿ 12 ವರ್ಷಗಳಿಗೂ ಹೆಚ್ಚು ಕಾಲ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಸಮಯದಲ್ಲಿ ಮೈಗ್ರೇನ್ (Zolmitriptan and Topiramate)ಗೆ ಸೂಚಿಸಲಾದ ಔಷಧಿಗಳನ್ನು ನೀಡುವ ಮೂಲಕ ಈ ವ್ಯಕ್ತಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಇದಲ್ಲದೆ ರೋಗಿಗೆ ಚಾಕೊಲೇಟ್, ಚೀಸ್, Nuts, ಕೆಫೀನ್ ಮತ್ತು ಮೈಗ್ರೇನ್ ಅನ್ನು ಪ್ರಚೋದಿಸುವ ಒಣ ಹಣ್ಣುಗಳ ಆಹಾರಗಳಿಂದ ದೂರವಿಡಲಾಗಿತ್ತು.

ಇದನ್ನೂ ಓದಿ: Yoga For Sleep: ಉತ್ತಮ ನಿದ್ರೆಗಾಗಿ ಮಲಗುವ ಮುನ್ನ ಈ 5 ಯೋಗಾಸನಗಳನ್ನು ಮಾಡಿ

ರೋಗಿಗೆ ಯೋಗ ಮತ್ತು ಧ್ಯಾನ ಕೂಡ ಮಾಡಿಸಲಾಯಿತು. ಆದರೆ ಮೈಗ್ರೇನ್ ಸಮಸ್ಯೆ(Migraine Symptoms) ಮಾತ್ರ ಸಂಪೂರ್ಣವಾಗಿ ಗುಣವಾಗಲಿಲ್ಲ. ಇದರ ನಂತರ ವ್ಯಕ್ತಿಗೆ ಹಸಿರು ತರಕಾರಿಗಳು ಮತ್ತು ಸಸ್ಯ ಆಧಾರಿತ ಆಹಾರ ನೀಡಿದಾಗ ಆತನ ಮೈಗ್ರೇನ್ ಸಮಸ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿತು.

ಸಂಶೋಧಕರು ಏನು ಹೇಳುತ್ತಾರೆ?

ಸಂಶೋಧಕರ ಪ್ರಕಾರ ಸೂಚಿಸಲಾದ ಔಷಧಿಗಳು ಮೈಗ್ರೇನ್ ಪರಿಸ್ಥಿತಿ(Healthy Diet)ಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆದರೆ ಕೆಲವು ಆಹಾರಗಳು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪರಿಣಾಮಕಾರಿ ಆಯ್ಕೆಯಾಗಬಹುದು. ಇವು ಮೈಗ್ರೇನ್ ಸಮಸ್ಯೆ ಹೊಗಲಾಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದ್ದಾರೆ.

ಚಿಕಿತ್ಸೆ ಹೇಗೆ ಮಾಡಲಾಯಿತು?

ಕಡು ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಕೇಲ್(Kale) ಮತ್ತು ಜಲಸಸ್ಯಗಳ ಬಳಕೆಯು ಮೈಗ್ರೇನ್‌ನಿಂದ ಉಂಟಾಗುವ ವ್ಯವಸ್ಥಿತ ಉರಿಯೂತ, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ವೈದ್ಯರು ಈ ವ್ಯಕ್ತಿಯನ್ನು ಪ್ರತಿದಿನ ಕಡಿಮೆ ಉರಿಯೂತದ ಆಹಾರಗಳನ್ನು (LIFE DIET) ಸೇವಿಸುವಂತೆ ಕೇಳಿಕೊಂಡರು. ಆಹಾರದಲ್ಲಿ ಪ್ರತಿದಿನ ಸುಮಾರು 150 ಗ್ರಾಂ ಹಸಿ ಅಥವಾ ಬೇಯಿಸಿದ ಹಸಿರು ತರಕಾರಿಗಳನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದಲ್ಲದೆ ಪ್ರತಿದಿನ ಸುಮಾರು 800-900 ಗ್ರಾಂ ಕಡಿಮೆ ಉರಿಯೂತದ ಆಹಾರ ಸೇವಿಸಬೇಕು. ಇದಲ್ಲದೆ ಧಾನ್ಯಗಳು(Whole grain), ಪಿಷ್ಟ ತರಕಾರಿಗಳು, ಎಣ್ಣೆಗಳು ವಿಶೇಷವಾಗಿ ಡೈರಿ ಉತ್ಪನ್ನಗಳು ಮತ್ತು ಕೆಂಪು ಮಾಂಸ ಸೇವಿಸುವುದನ್ನು ತಪ್ಪಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.  

ಇದನ್ನೂ ಓದಿ: Peanuts Benefits: ಕಡಲೆಕಾಯಿಯನ್ನು ಸುಮ್ಮನೆ ಬಡವರ ಬಾದಾಮಿ ಎಂದು ಕರೆಯುವುದಿಲ್ಲ, ಇಲ್ಲಿವೆ ಅದರ ಅದ್ಭುತ ಪ್ರಯೋಜನಗಳು

ಸಂಶೋಧನಾ ಫಲಿತಾಂಶಗಳು

ಕಡಿಮೆ ಉರಿಯೂತದ ಆಹಾರ (LIFE DIET) ಆಹಾರವನ್ನು ಸೇವಿಸಿದ 2 ತಿಂಗಳ ನಂತರ ಆಗಾಗ ಕಂಡುಬರುತ್ತಿದ್ದ ಮೈಗ್ರೇನ್ ಸಮಸ್ಯೆ(Migraine Problem)ಯು ಈಗ ತಿಂಗಳಿಗೊಮ್ಮೆ ಮಾತ್ರ ಕಂಡುಬರುತ್ತಿದೆ ಎಂದು ವ್ಯಕ್ತಿಯು ಹೇಳಿದ್ದಾನೆ. ಬಹಳ ದಿನಗಳಿಂದ ಮೈಗ್ರೇನ್ ಇದ್ದ ಕಡೆ ಈಗ ಸ್ವಲ್ಪ ಸಮಯದಲ್ಲೇ ಗುಣವಾಗುತ್ತದೆ ಮತ್ತು ಮೊದಲಿನಷ್ಟು ಗಂಭೀರ ಸ್ಥಿತಿ ಇರುವುದಿಲ್ಲ. ಚಿಕಿತ್ಸೆಯ ರೋಗಿಯು ಎಲ್ಲಾ ಮೈಗ್ರೇನ್ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದನು. 3 ತಿಂಗಳ ನಂತರ ರೋಗಿಯ ಮೈಗ್ರೇನ್ ಸಂಪೂರ್ಣವಾಗಿ ಗುಣವಾಯಿತು ಎಂದು ತಿಳಿದುಬಂದಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News