Tulsi Tea: ತುಳಸಿ ಚಹಾದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು

Tulsi Tea Benefits and Side Effects : ಆಯುರ್ವೇದದ ಪ್ರಕಾರ,  ತುಳಸಿಯಲ್ಲಿ ಆಂಟಿವೈರಸ್, ವಿಟಮಿನ್ ಸಿ, ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಇತ್ಯಾದಿ ಅಂಶಗಳು ಕಂಡು ಬರುತ್ತವೆ.

Written by - Yashaswini V | Last Updated : Nov 20, 2021, 08:56 AM IST
  • ತುಳಸಿ ಕೇವಲ ಪವಿತ್ರ ಸಸ್ಯವಲ್ಲ
  • ನೀವು ಅದರಲ್ಲಿ ಶಕ್ತಿಯುತವಾದ ಔಷಧೀಯ ಗುಣಗಳನ್ನು ಪಡೆಯುತ್ತೀರಿ
  • ತುಳಸಿ ಚಹಾವು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ
Tulsi Tea: ತುಳಸಿ ಚಹಾದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು title=
Tulsi Tea Benefits and Side Effects,

Tulsi Tea Benefits and Side Effects : ತುಳಸಿ ಗಿಡವನ್ನು ಹೆಚ್ಚಾಗಿ ಮನೆಗಳಲ್ಲಿ ನೆಡಲಾಗುತ್ತದೆ ಮತ್ತು ಅದನ್ನು ಪೂಜಿಸಲಾಗುತ್ತದೆ. ಆದರೆ ತುಳಸಿ ಕೇವಲ ಪವಿತ್ರ ಸಸ್ಯವಲ್ಲ, ನೀವು ಅದರಲ್ಲಿ ಶಕ್ತಿಯುತವಾದ (ತುಳಸಿ ಟೀ ಪ್ರಯೋಜನಗಳು ಮತ್ತು ಅಡ್ಡ ಪರಿಣಾಮಗಳು) ಔಷಧೀಯ ಗುಣಗಳನ್ನು ಪಡೆಯುತ್ತೀರಿ. ಆಂಟಿವೈರಸ್, ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್, ಉರಿಯೂತ ನಿವಾರಕ, ವಿಟಮಿನ್ ಎ, ವಿಟಮಿನ್ ಸಿ, ರಂಜಕ, ಕ್ಯಾಲ್ಸಿಯಂ ಮುಂತಾದ ಹಲವು ಪ್ರಮುಖ ಅಂಶಗಳು ತುಳಸಿಯಲ್ಲಿ ಕಂಡುಬರುತ್ತವೆ. ಹಾಗಾಗಿಯೇ ತುಳಸಿ ಚಹಾವನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಹೆಚ್ಚಿನ ಜನರು ತುಳಸಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. 

ತುಳಸಿ ಚಹಾವು ಅನೇಕ ರೋಗಗಳಿಂದ (Tulsi Tea Benefits) ನಿಮ್ಮನ್ನು ರಕ್ಷಿಸುತ್ತದೆ. ತುಳಸಿಯ ಸೇವನೆಯು ಸಹ  ಪ್ರಯೋಜನಕಾರಿಯಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಇದನ್ನು ಸರಿಯಾಗಿ ಬಳಸದಿದ್ದರೆ ಇದರಿಂದ ಹಾನಿಯೂ ಉಂಟಾಗುತ್ತದೆ. ತುಳಸಿ ಚಹಾದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ವಿವರವಾಗಿ ತಿಳಿಯೋಣ. 

ಅಧಿಕ ರಕ್ತದೊತ್ತಡದಿಂದ ಪರಿಹಾರ: ಕೆಲವು ವರದಿಗಳ ಪ್ರಕಾರ, ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ತುಳಸಿಯನ್ನು ಸೇವಿಸಬೇಕು. ಏಕೆಂದರೆ ತುಳಸಿಯಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ- Twitching: ದೇಹದ ಈ ಭಾಗಗಳ ಸೆಳೆತವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ

ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ: ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಲು ತುಳಸಿ ತುಂಬಾ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ಹೊರಗಿನ ಆಹಾರವನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ಹಾಳುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಳಸಿ ಚಹಾವನ್ನು (Tulsi Tea) ಸೇವಿಸಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಗ್ಯಾಸ್ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.

ನಿದ್ರಾಹೀನತೆಯ ಸಮಸ್ಯೆ ದೂರವಾಗಲಿದೆ: ಸಾಮಾನ್ಯವಾಗಿ ಕೆಲಸದ ಒತ್ತಡದಿಂದ ಜನರು ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತುಳಸಿ ಚಹಾವು ಒತ್ತಡವನ್ನು ಕಡಿಮೆ ಮಾಡಲು ಉತ್ತಮ ಆಯ್ಕೆಯಾಗಿದೆ. ಖಿನ್ನತೆಯನ್ನು ನಿವಾರಿಸುವ ಮತ್ತು ಒತ್ತಡವನ್ನು ನಿವಾರಿಸುವ ಗುಣಗಳು ತುಳಸಿಯಲ್ಲಿ ಕಂಡುಬರುತ್ತವೆ ಮತ್ತು ತುಳಸಿ ಚಹಾವನ್ನು ಕುಡಿಯುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿ : ತುಳಸಿ ಚಹಾವನ್ನು ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಸಂಶೋಧನೆಯೊಂದರ ಪ್ರಕಾರ ತುಳಸಿ ಸೇವನೆಯಿಂದ ತೂಕವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದರ ಜೊತೆಗೆ ವ್ಯಾಯಾಮವೂ ಅಗತ್ಯವಾಗಿದೆ. 

ಇದನ್ನೂ ಓದಿ- Skin: ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ

ತ್ವಚೆಗೆ ಉಪಯುಕ್ತ: ತುಳಸಿ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು ಫ್ರೀ ರ್ಯಾಡಿಕಲ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದ್ದರಿಂದ, ತುಳಸಿಯಿಂದ ಮಾಡಿದ ಚಹಾವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ತುಳಸಿ ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ತುಳಸಿ ಚಹಾದ ಅನಾನುಕೂಲಗಳು ತುಳಸಿ ಚಹಾದಲ್ಲಿ ಕಂಡುಬರುವ ಪದಾರ್ಥಗಳು ತುಂಬಾ ಪ್ರಯೋಜನಕಾರಿ. ಆದರೆ ತುಳಸಿ ಚಹಾದ ಕೆಲವು ಅನಾನುಕೂಲತೆಗಳೂ ಇವೆ. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
>> ತುಳಸಿ ಚಹಾವನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆ ಆಗುವ ಸಮಸ್ಯೆ ಉಂಟಾಗುತ್ತದೆ.
>> ತುಳಸಿ ಚಹಾದ ಅತಿಯಾದ ಸೇವನೆಯು ಪುರುಷರಲ್ಲಿ ಕಡಿಮೆ ವೀರ್ಯದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಪುರುಷರು ನೆನಪಿನಲ್ಲಿಟ್ಟುಕೊಳ್ಳಬೇಕು.
>> ತುಳಸಿ ಚಹಾವನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಅತಿಯಾದ ತೆಳ್ಳಗಿನ ರಕ್ತವನ್ನು ಕಾರಣವಾಗಬಹುದು, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News