ಬೆಂಗಳೂರು: ಪ್ರತಿ ಮಹಿಳೆಯೂ ತನ್ನ ಕೂದಲು ನೀಳ, ದಟ್ಟ ಮತ್ತು ಕಪ್ಪಾಗಿರಬೇಕು ಎಂದು ಬಯಸುತ್ತಾರೆ. ಆದರೆ ಹೆಚ್ಚುತ್ತಿರುವ ಮಾಲಿನ್ಯ, ತಪ್ಪು ಆಹಾರ ಪದ್ಧತಿ, ಕೆಟ್ಟ ಜೀವನಶೈಲಿ ಮತ್ತು ತಪ್ಪು ಉತ್ಪನ್ನಗಳ ಬಳಕೆಯಿಂದಾಗಿ, ಒಬ್ಬ ವ್ಯಕ್ತಿಯು ಹಲವಾರು ರೀತಿಯ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೂದಲಿಗೆ ಸರಿಯಾದ ಕಾಳಜಿ ವಹಿಸದ ಕಾರಣ ಕೂದಲು ಉದುರುವುದು, ತುದಿ ಸೀಳುವುದು, ತಲೆಹೊಟ್ಟು ಮತ್ತು ಕೂದಲಿನ ಬೆಳವಣಿಗೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕೂದಲುಗಳು ವಿಪರೀತ ಉದುರಲು ಪ್ರಾರಂಭಿಸುತ್ತದೆ, ನೀವು ನಿಮ್ಮ ತಲೆಯನ್ನು ಮುಟ್ಟಿದ ತಕ್ಷಣ, ನಿಮ್ಮ ಕೈಯಲ್ಲಿ ಕೂದಲು ಬರುತ್ತವೆ. ಜನರು ತಮ್ಮ ಕೂದಲನ್ನು ನೀಳವಾಗಿಸಲು ಮತ್ತು ದಟ್ಟವಾಗಿಸಲು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವುಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ, ಇದು ದೀರ್ಘಾವಧಿಯಲ್ಲಿ ನಿಮ್ಮ ಕೂದಲನ್ನು ಹಾನಿಗೊಳಿಸುತ್ತವೇ. ಅಂತಹ ಪರಿಸ್ಥಿತಿಯಲ್ಲಿ, ನೀವು ಬಯಸಿದರೆ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನೀವು ಕೆಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಇಂದು ಈ ಲೇಖನದಲ್ಲಿ ನಾವು ನಿಮಗೆ ಅಂತಹ ಒಂದು ಮನೆಮದ್ದಿನ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ, ಅದನ್ನು ಬಳಸಿ ನೀವು ಕೆಲವೇ ದಿನಗಳಲ್ಲಿ ಉದ್ದ, ದಟ್ಟ ಮತ್ತು ಕಪ್ಪು ಕೂದಲನ್ನು ಪಡೆಯಬಹುದು. (Lifestyle News In Kannada)
ನಿಮ್ಮ ಕೂದಲು ಬಹಳಷ್ಟು ಉದುರುತ್ತಿದ್ದರೆ ಅಥವಾ ನಿಮ್ಮ ಕೂದಲಿನ ಬೆಳವಣಿಗೆ ಕಡಿಮೆಯಿದ್ದರೆ, ನೀವು ಅಲೋವೆರಾ ಜೆಲ್ನೊಂದಿಗೆ ತೆಂಗಿನ ಎಣ್ಣೆ ಮತ್ತು ಈರುಳ್ಳಿಯನ್ನು ಬಳಸಬಹುದು. ಹೌದು, ಈ ಮನೆಮದ್ದನ್ನು ಬಳಸುವುದರಿಂದ ನಿಮ್ಮ ಕೂದಲಿನ ಬೆಳವಣಿಗೆ ದ್ವಿಗುಣಗೊಳ್ಳುತ್ತದೆ ಮತ್ತು ಕೂದಲು ಉದುರುವುದು ಸಹ ಕಡಿಮೆಯಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ, ಬಲಶಾಲಿ ಮತ್ತು ದಟ್ಟವಾಗಿಸುತ್ತದೆ. ಬನ್ನಿ, ಈ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು
1 ಕಪ್ ತೆಂಗಿನ ಎಣ್ಣೆ
5 ಟೀಚಮಚ ಅಲೋವೆರಾ ಜೆಲ್
1 ಈರುಳ್ಳಿ ರಸ
ಇದನ್ನೂ ಓದಿ-ತೂಕ ಇಳಿಸಿಕೊಳ್ಳಬೇಕೆ? ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ, ಶ್ರಮವಿಲ್ಲದೆ ತೂಕ ಇಳಿಕೆ ಮಾಡಿಕೊಳ್ಳಿ!
ಬಳಸುವ ವಿಧಾನ
ಮೊದಲು ಬಾಣಲೆಗೆ ತೆಂಗಿನೆಣ್ಣೆ ಹಾಕಿ ಸ್ವಲ್ಪ ಬಿಸಿ ಮಾಡಿ. ನಂತರ ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದು ತಣ್ಣಗಾದಾಗ ಅದಕ್ಕೆ ಈರುಳ್ಳಿ ರಸವನ್ನು ಸೇರಿಸಿ ಮಿಕ್ಸ್ ಮಾಡಿ. ಈಗ ಅದನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಸುಮಾರು 30 ನಿಮಿಷಗಳ ಕಾಲ ಬಿಡಿ. ಅದರ ನಂತರ ಮೃದುವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಇದನ್ನು ಬಳಸಿ. ಇದರಿಂದ ನಿಮ್ಮ ಕೂದಲು ಉದ್ದ ಮತ್ತು ದಟ್ಟವಾಗುತ್ತವೆ.
ಇದನ್ನೂ ಓದಿ-ತೂಕ ಇಳಿಕೆಗೆ ಈ ತರಕಾರಿ ಒಂದು ರಾಮಬಾಣ ಉಪಾಯ, ಈ ವಿಧಗಳಲ್ಲಿ ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ!
ಪ್ರಯೋಜನಗಳು
ಅಲೋವೆರಾ ಜೆಲ್ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ ಇದು ಕೂದಲನ್ನು ಒಳಗಿನಿಂದ ಪೋಷಿಸುತ್ತದೆ ಮತ್ತು ಸೀಳುವಿಕೆ ಮತ್ತು ಉದುರುವಿಕೆಯಿಂದ ರಕ್ಷಿಸುತ್ತದೆ. ಇದರಲ್ಲಿರುವ ಗುಣಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದೆ ವೇಳೆ, ತೆಂಗಿನ ಎಣ್ಣೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ಕೂದಲು ಕಿರುಚೀಲಗಳನ್ನು ಉತ್ತೇಜಿಸುತ್ತದೆ. ಕೂದಲನ್ನು ಉದ್ದ, ದಟ್ಟ ಮತ್ತು ಹೊಳೆಯುವಂತೆ ಮಾಡಲು ಇದು ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿ ಸಲ್ಫರ್ ಇದ್ದು, ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಬೇರುಗಳಿಂದ ಬಲಿಷ್ಠವಾಗಿಸುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ