How To Get Rid Of Blackheads: ಚಳಿಗಾಲ ಅಥವಾ ಬೇಸಿಗೆಯಲ್ಲಿ, ನಮ್ಮಲ್ಲಿ ಹೆಚ್ಚಿನವರಿಗೆ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಕಾಡಲು ಆರಂಭಿಸುತ್ತದೆ. ಬ್ಲ್ಯಾಕ್ ಹೆಡ್ಸ್ ಮುಖದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬ್ಲ್ಯಾಕ್ ಹೆಡ್ಸ್ ನಿಂದಾಗಿ ಮುಖ ಸೌಂದರ್ಯವೇ ಹಾಳಾಗುತ್ತದೆ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಸ್ಕ್ರಬ್ ಲಭ್ಯವಿರುತ್ತದೆ. ಆದರೂ ಕೆಲವೊಮ್ಮೆ ಈ ಸ್ಕ್ರಬ್ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸುವಲ್ಲಿ ವಿಫಲವಾಗುತ್ತದೆ. ಸಾಮಾನ್ಯವಾಗಿ ಮನೆಮದ್ದುಗಳು ತ್ವಚೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಾವು ಮನೆಯಲ್ಲಿಯೇ ಸಕ್ಕರೆಯನ್ನು ಬಳಸಿ ತಯಾರಿಸಿದ ಫೇಸ್ ಸ್ಕ್ರಬ್ ನಿಂದ ಬ್ಲ್ಯಾಕ್ ಹೆಡ್ಸ್ ಅನ್ನು ಬುಡದಿಂದಲೇ ನಿರ್ಮೂಲನೆ ಮಾಡಬಹುದು. ಇದನ್ನು ಮನೆಯಲ್ಲಿಯೇ ತಯಾರಿಸುವುದರಿಂದ ಬಳಸುವ ಸಾಮಗ್ರಿಗಳ ಬಗ್ಗೆಯೂ ನಮಗೆ ಮಾಹಿತಿ ಇರುತ್ತದೆ. ಹಾಗಾಗಿ ರಾಸಾಯನಿಕ ಬಳಕೆಯಾಗಿದೆ ಎನ್ನುವ ಭಯ ಇರುವುದಿಲ್ಲ. ಮನೆಯಲ್ಲಿಯೇ ಇರುವ ಕೆಲವೊಂದು ವಸ್ತುಗಳನ್ನು ಬಳಸುವ ಮೂಲಕ ಸಿಂಪಲ್ ಆಗಿ ಫೇಸ್ ಸ್ಕ್ರಬ್ ತಯಾರಿಸಬಹುದು.
ಇದನ್ನೂ ಓದಿ : ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಯನ್ನು ಬಹುತೇಕ ನಿವಾರಿಸುತ್ತವೆ ಈ ಎಣ್ಣೆಗಳು!
ಸಕ್ಕರೆ ಮತ್ತು ಕೆನೆ ಬಳಸಿ ಸ್ಕ್ರಬ್ ತಯಾರಿಸಿ :
ನೀವು ಶುಷ್ಕ ಚರ್ಮವನ್ನು ಹೊಂದಿದ್ದು, ಯಾವುದೇ ಸ್ಕ್ರಬ್ ಸರಿಯಾಗಿ ನಿಮ್ಮ ತ್ವಚೆಗೆ ಹೊಂದಿಕೆಯಾಗದೆ, ಪರಿಣಾಮಕಾರಿ ಸ್ಕ್ರಬ್ ಅನ್ನು ಹುಡುಕುತ್ತಿದ್ದರೆ,ಮನೆಯಲ್ಲಿಯೇ ತಯಾರಿಸುವ ಈ ಸ್ಕ್ರಬ್ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸುವುದು ಕೂಡಾ ಸುಲಭ. ಈ ಸ್ಕ್ರಬ್ ಅನ್ನು ಬಳಸಿದ ನಂತರ ಚರ್ಮವು ಮೃದುವಾಗುತ್ತದೆ ಮತ್ತು ಕಾಂತಿಯುಕ್ತವಾಗಿ ಹೊಳೆಯುತ್ತದೆ.
ಸ್ಕ್ರಬ್ ತಯಾರಿಸಲು ಬೇಕಾಗುವ ವಸ್ತುಗಳು :
1 ಚಮಚ ಕೆನೆ ಮತ್ತು 1 ಚಮಚ ಸಕ್ಕರೆ.
ಸ್ಕ್ರಬ್ ತಯಾರಿಸುವ ವಿಧಾನ :
- ಎರಡೂ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿ.
- ಹಾಲಿನ ಕೆನೆಯನ್ನು ಮಾರುಕಟ್ಟೆಯಿಂದಲಾದರೂ ಖರೀದಿಸಬಹುದು ಅಥವಾ ಮನೆಯಲ್ಲಿಯೇ ಹಾಲಿನಿಂದ ಕೆನೆ ತೆಗೆದಿಟ್ಟುಕೊಂಡು ಬಳಸಬಹುದು.
- ಸುಮಾರು 5 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಚೆನ್ನಾಗಿ ಸ್ಕ್ರಬ್ ಮಾಡಿ 5 ನಿಮಿಷಗಳ ಕಾಲ ಈ ಮಿಶ್ರಣವನ್ನು ಮುಖದ ಮೇಲೆ ಹಾಗೆಯೇ ಬಿಡಿ.
- 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಇದನ್ನೂ ಓದಿ : ಹೊಸ ವರ್ಷದಂದು ನಿಮಗಾಗಿ ಸಂಗಾತಿಯನ್ನು ಹುಡುಕಲು ಬಯಸುತ್ತಿದ್ದೀರಾ? ಇಲ್ಲಿದೆ ಮಾರ್ಗಗಳು..
ಸ್ಕ್ರಬ್ ಮಾಡುವ ಇನ್ನೊಂದು ವಿಧಾನ :
ನಿಮ್ಮ ಮನೆಯಲ್ಲಿ ಕೆನೆ ಲಭ್ಯ ಇಲ್ಲದಿದ್ದರೆ ಸಕ್ಕರೆ ಪುಡಿಯನ್ನು ಮಾತ್ರ ಸ್ಕ್ರಬ್ ಆಗಿ ಬಳಸಬಹುದು. ಪುಡಿಮಾಡಿದ ಸಕ್ಕರೆ ನಮ್ಮ ಬ್ಲ್ಯಾಕ್ ಹೆಡ್ಸ್ ಅನ್ನು ತೆರವುಗೊಳಿಸುತ್ತದೆ ಮತ್ತು ಅದನ್ನು ಸ್ವಲ್ಪ ಸಮಯದವರೆಗೆ ಮುಖದ ಮೇಲೆ ಹಾಗೆಯೇ ಬಿಟ್ಟರೆ, ಅದು ಮುಖಕ್ಕೆ ಹೊಳಪನ್ನು ನೀಡುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ