ಆಂಧ್ರ ಸ್ಟೈಲ್‌ ʼಚಿಕನ್ ಉಪ್ಪಿನಕಾಯಿʼ ಮಾಡುವುದು ಹೇಗೆ ಗೊತ್ತೆ..? ಇಲ್ಲಿದೆ ಸರಳ ವಿಧಾನ

Andra style Chicken Pickle : ಉಪ್ಪಿನಕಾಯಿ ಭಾರತೀಯರ ದಿನ ನಿತ್ಯದ ಊಟ ಒಂದು ಭಾಗ. ನಿಂಬೆ ಹಣ್ಣು, ಟೊಮೆಟೊ, ಮಾವಿನ ಕಾಯಿ, ನಲ್ಲಿ ಕಾಯಿ ಹೀಗೆ ಹಲವಾರು ತರಕಾರಿಗಳಿಂದ ಉಪ್ಪಿನಕಾಯಿಯನ್ನು ಮಾಡುವುದು ನಿಮಗೆ ಗೊತ್ತಿದೆ. ಆದರೆ, ಚಿಕನ್ ಉಪ್ಪಿನಕಾಯಿ ಬಗ್ಗೆ ನಿಮ್ಗೆ ಗೊತ್ತೆ..? ಬನ್ನಿ ತಿಳಿದುಕೊಳ್ಳೋಣ.. .

Written by - Krishna N K | Last Updated : Feb 21, 2024, 07:16 PM IST
  • ಉಪ್ಪಿನಕಾಯಿಯನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟಪಡುತ್ತಾರೆ.
  • ಉಪ್ಪಿನ ಕಾಯಿ ಪಾಕಪದ್ಧತಿಯಲ್ಲಿ ಜನಪ್ರಿಯ ಆಹಾರ ಪದಾರ್ಥ.
  • ಚಿಕನ್ ಪಿಕಲ್ಸ್‌ ಅನ್ನು ಹೆಚ್ಚಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಬಳಸಲಾಗುತ್ತದೆ.
ಆಂಧ್ರ ಸ್ಟೈಲ್‌ ʼಚಿಕನ್ ಉಪ್ಪಿನಕಾಯಿʼ ಮಾಡುವುದು ಹೇಗೆ ಗೊತ್ತೆ..? ಇಲ್ಲಿದೆ ಸರಳ ವಿಧಾನ title=

Chicken Pickle recepe : ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿಯನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟಪಡುತ್ತಾರೆ. ಉಪ್ಪಿನ ಕಾಯಿ ಪಾಕಪದ್ಧತಿಯಲ್ಲಿ ಜನಪ್ರಿಯ ಆಹಾರ ಪದಾರ್ಥ. ಉಪ್ಪಿನ ಕಾಯಿ ಇದ್ದರೇ ಮಾತ್ರ ಊಟ ಪೂರ್ಣ ಎನ್ನುವುದ ಮಾತಿದೆ. ಅದರಂತೆ ನಮ್ಮಲ್ಲಿ ವಿವಿದ ತರಹೇವಾರಿ ಉಪ್ಪಿನ ಕಾಯಿಗಳು ಲಭ್ಯವಿವೆ. ಈ ಪೈಕಿ ಚಿಕನ್‌ ಉಪ್ಪಿನ ಕಾಯಿಯೂ ಒಂದು

ಹೌದು.. ಚಿಕನ್ ಪಿಕಲ್ಸ್‌ ಅನ್ನು ಹೆಚ್ಚಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಬಳಸಲಾಗುತ್ತದೆ. ಇದನ್ನು ಮನೆಯಲ್ಲಿ ಮಾಡುವುದು ತುಂಬಾ ಸುಲಭ. ಚಿಕನ್ ಪ್ರಿಯರಿಗೆ ಇದೊಂದು ಉತ್ತಮ ಖಾದ್ಯ. ಅನ್ನದಲ್ಲಿ ಕಲಸಿ ತಿಂದರೆ ಸ್ವರ್ಗಕ್ಕೆ ಎರಡೇ ಗೇಣು ಎನ್ನುವಂತೆ ಭಾಸವಾಗುತ್ತದೆ. ಅಲ್ಲದೆ, ಇದನ್ನು ಮಾಡಲು ಹೆಚ್ಚು ಹಣ ಸಹ ಖರ್ಚಾಗಲ್ಲ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿದರೆ ಸಾಕು.  

ಇದನ್ನೂ ಓದಿ: ತೆಂಗೆನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ, ಮರಳಿ ಬರೋದಿಲ್ಲ.!

ಚಿಕನ್ ಪಚಡಿಗೆ ಬೇಕಾಗುವ ಸಾಮಾಗ್ರಿಗಳು:

ಕೋಳಿ ಮಾಂಸ: 500 ಗ್ರಾಂ (ಕತ್ತರಿಸಿ ತೊಳೆದ)
ಕರಿಮೆಣಸು: 50 ಗ್ರಾಂ ಕೊತ್ತಂಬರಿ
ಸೊಪ್ಪು: 25 ಗ್ರಾಂ ಜೀರಿಗೆ
10 ಗ್ರಾಂ ಸೋಂಪು
5 ಗ್ರಾಂ
ಲವಂಗ: 5
ಏಲಕ್ಕಿ: 2
ಮೆಣಸು: 5 
ಅರಿಶಿನ : 1 ಟೀಸ್ಪೂನ್
ಮೆಣಸಿನ ಪುಡಿ: 3 ಟೀಸ್ಪೂನ್ 
ಉಪ್ಪು: ರುಚಿಗೆ
ಎಣ್ಣೆ: 100 ಮಿಲಿ
ನಿಂಬೆ ರಸ: 2 ನಿಂಬೆಹಣ್ಣು

ಚಿಕನ್ ಪಿಕಲ್‌ ಮಾಡುವ ವಿಧಾನ: ಮೊದಲು ಕರಿಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ, ಸೋಂಪು, ಲವಂಗ, ಏಲಕ್ಕಿ ಮತ್ತು ಕಾಳುಮೆಣಸನ್ನು ರುಬ್ಬಿಕೊಳ್ಳಿ. ನಂತರ ಚಿಕನ್ ತುಂಡುಗಳನ್ನು ತೊಳೆದು ನೀರನ್ನು ಹೀರಿಕೊಳ್ಳಲು ಬಿಡಿ. ಇದಕ್ಕೆ ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ. 

ತದನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಚಿಕನ್ ತುಂಡುಗಳನ್ನು ಕೆಂಪಗಾಗುವ ವರೆಗೆ ಹುರಿಯಿರಿ. ಈ ತುಣುಕುಗಳನ್ನು ಪಕ್ಕಕ್ಕೆ ಇರಿಸಿ. ಅದೇ ಕಾದ ಎಣ್ಣೆಯಲ್ಲಿ ಇಂಗು ಹಾಕಿ ಕರಿಯಿರಿ. ನಂತರ ಸಿದ್ಧಪಡಿಸಿದ ಮಸಾಲಾ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.

ಇದನ್ನೂ ಓದಿ:ಮಲಗುವ ಮುನ್ನ ಹೀಗೆ ಮಾಡಿದರೆ ಕೂದಲು ಉದುರುವುದು ನಿಲ್ಲುವುದು, ಸುಂದರ ಕೇಶ ಕಾಂತಿ ನಿಮ್ಮದಾಗುವುದು !

ಚಿಕನ್ ತುಂಡುಗಳನ್ನು ಮತ್ತೆ ಎಣ್ಣೆಯಲ್ಲಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ನಿಂಬೆ ರಸದ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ ಮತ್ತು ಅದು ಒಣಗುವವರೆಗೆ ಬೇಯಿಸಿ. ತಣ್ಣಗಾದ ನಂತರ ಇದನ್ನು ಗಾಜಿನ ಜಾಡಿಗಳಲ್ಲಿ ಸಂಗ್ರಹಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News