ವ್ಯಾಕ್ಸಿಂಗ್ ನಂತರ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ.. ಕೂದಲು ಬೇಗ ಬೆಳೆಯುವುದಿಲ್ಲ..!

Precautions after waxing: ವ್ಯಾಕ್ಸ್‌ ಮಾಡಿಕೊಂಡು ಕೆಲವೇ ದಿನಗಳಗಳಲ್ಲಿ ಮತ್ತೆ ತ್ವೆಚೆಯಲ್ಲಿ ಅತೀ ಬೇಗ ಕೂದಲು ಬೆಳೆಯುತ್ತಿದ್ದರೆ ಈ ಸಲಹೆಗಳನ್ನು ಅಳವಡಿಸಿಕೊಳ್ಳಿ.. 

Written by - Savita M B | Last Updated : Oct 31, 2023, 11:57 AM IST
  • ಪ್ರತಿಯೊಬ್ಬ ಹುಡುಗಿಯೂ ತ್ವಚೆಯಿಂದ ಅನಗತ್ಯ ಕೂದಲನ್ನು ತೆಗೆದು ಸುಂದರವಾಗಿ ಕಾಣಲು ಬಯಸುತ್ತಾಳೆ.
  • ತಿಂಗಳಿಗೊಮ್ಮೆ ಬ್ಯೂಟಿ ಪಾರ್ಲರ್ ಗೆ ಹೋಗಿ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ.
  • ಆದರೆ, ವ್ಯಾಕ್ಸಿಂಗ್ ಮಾಡಿದ ಕೆಲವೇ ದಿನಗಳಲ್ಲಿ ಕೂದಲು ಮತ್ತೆ ಬರುತ್ತದೆ.
ವ್ಯಾಕ್ಸಿಂಗ್ ನಂತರ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ.. ಕೂದಲು ಬೇಗ ಬೆಳೆಯುವುದಿಲ್ಲ..! title=

Beauty Tips: ಪ್ರತಿಯೊಬ್ಬ ಹುಡುಗಿಯೂ ತ್ವಚೆಯಿಂದ ಅನಗತ್ಯ ಕೂದಲನ್ನು ತೆಗೆದು ಸುಂದರವಾಗಿ ಕಾಣಲು ಬಯಸುತ್ತಾಳೆ. ತ್ವಚೆಯು ನಯವಾಗಿ ಕಾಣಲು ಮತ್ತು ಬೇಡದ ಕೂದಲಿನಿಂದ ಮುಕ್ತವಾಗಿ ಕಾಣಲು ವ್ಯಾಕ್ಸ್ ಮಾಡಿಸಿಕೊಳ್ಳುವುದು ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ತಿಂಗಳಿಗೊಮ್ಮೆ ಬ್ಯೂಟಿ ಪಾರ್ಲರ್ ಗೆ ಹೋಗಿ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಆದರೆ, ವ್ಯಾಕ್ಸಿಂಗ್ ಮಾಡಿದ ಕೆಲವೇ ದಿನಗಳಲ್ಲಿ ಕೂದಲು ಮತ್ತೆ ಬರುತ್ತದೆ. ಆದರೆ.. ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಕೂದಲು ಬೇಗ ಬರುವುದಿಲ್ಲ. 

ಇದನ್ನೂ ಓದಿ-ಓಪನ್‌ ಪೋರ್ಸ್‌ಗೆ ಹೇಳಿ ಬೈ ಬೈ..! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್‌

ಅತಿಯಾದ ಕೂದಲು ಬೆಳವಣಿಗೆಯನ್ನು ತಡೆಯಲು ಪ್ರತಿ ತಿಂಗಳು ನಿಯಮಿತ ವೇಳಾಪಟ್ಟಿಯಲ್ಲಿ ಪ್ರತಿ ನಾಲ್ಕು ವಾರಗಳಿಗೊಮ್ಮೆ ವ್ಯಾಕ್ಸಿಂಗ್ ಮಾಡಬೇಕು. ಕೂದಲು ಕಡಿಮೆ ಬೆಳೆದಾಗ ಅಥವಾ ಇದ್ದಾಗ ವ್ಯಾಕ್ಸಿಂಗ್ ಮಾಡಲು ಕಷ್ಟವಾಗುತ್ತದೆ ಅಲ್ಲದೇ ಇದರಿಂದ ಕೂದಲು ಹಾಗೆ ಉಳಿಯಬಹುದು. ಅದಕ್ಕಾಗಿಯೇ ವ್ಯಾಕ್ಸಿಂಗ್ ಅನ್ನು ಮಧ್ಯಂತರದಲ್ಲಿ ಮಾತ್ರ ಮಾಡಬೇಕು. 

ವ್ಯಾಕ್ಸಿಂಗ್ ಮಾಡುವ ಒಂದು ವಾರದ ಮೊದಲು ಚರ್ಮವನ್ನು ನಿಧಾನವಾಗಿ ಮಸಾಜ್ ಮಾಡಬೇಕು. ಇದರಿಂದ ತ್ವಚೆಯಲ್ಲಿರುವ ಸತ್ತ ಜೀವಕೋಶಗಳು ಹೋಗುತ್ತವೆ. ಅಲ್ಲದೇ ಕೂದಲುಗಳು ತ್ವಚೆಗೆ ಅಂಟಿಕೊಂಡಿದ್ದರೆ, ಅವು ಸಹ ಹೊರಬರುತ್ತವೆ. 

ಇದನ್ನೂ ಓದಿ-ತಲೆ ಬೋಳಾಗುವಿಕೆಯನ್ನು ತಡೆಯುತ್ತೇ ಬೀಟ್ ರೂಟ್, ಈ ರೀತಿ ಬಳಕೆ ಮಾಡಿ!

ಚರ್ಮವು ಆರೋಗ್ಯಕರವಾಗಿದ್ದರೆ ವ್ಯಾಕ್ಸಿಂಗ್ ಫಲಿತಾಂಶವು ಹೆಚ್ಚು ಕಾಲ ಉಳಿಯುತ್ತದೆ. ವ್ಯಾಕ್ಸಿಂಗ್‌ನಿಂದ ಹೊರಬರುವ ಬೆವರಿನ ಯಾವುದೇ ಸಮಸ್ಯೆಯನ್ನು ತಪ್ಪಿಸಲು ಆರೋಗ್ಯಕರ ಚರ್ಮವು ಅತ್ಯಗತ್ಯವಾಗಿರುತ್ತದೆ. ಅದಕ್ಕಾಗಿಯೇ ನೀವು ಯಾವಾಗಲೂ ಚರ್ಮಕ್ಕೆ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಬೇಕು. ಪ್ರತಿದಿನ ಸಾಕಷ್ಟು ನೀರು ಕುಡಿಯುವುದು, ಹೆಚ್ಚು ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವಿಸುವುದರಿಂದ ಚರ್ಮವು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News