Hanuman Jayanti 2023 Horoscope: ಹನುಮ ಜಯಂತಿ ದಿನ ಈ ರಾಶಿಗಳ ಜನರ ಮೇಲೆ ಆಂಜನೆಯನ ವಿಶೇಷ ಕೃಪಾವೃಷ್ಟಿ, ಅಪಾರ ಸುಖ-ಸಂಪತ್ತು ಪ್ರಾಪ್ತಿ!

 ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹ ಇರುತ್ತದೆ ಹಾಗೂ ಆ ಗ್ರಹಕ್ಕೆ ಸಂಬಂಧಿಸಿದ ದೇವರ ವಿಶೇಷ ಕೃಪೆ ಆ ರಾಶಿಯ ಜನರ ಮೇಲೇರುತ್ತದೆ. ಚೈತ್ರ ಮಾಸದ ಹುಣ್ಣಿಮೆ ತಿಥಿಯ ದಿನ ಈ ಬಾರಿ ಹನುಮ ಜಯಂತಿಯ ಮಹಾಪರ್ವ ಆಚರಿಸಲಾಗುತ್ತಿದೆ. ಈ ಬಾರಿ ಹನುಮಾನ್ ಜಯಂತಿ ಏಪ್ರಿಲ್ 6, 2023 ರಂದು ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಕೆಲ ರಾಶಿಗಳ ಸ್ಥಳೀಯರ ಮೇಲೆ ಶ್ರೀ ಆಂಜನೇಯನ ವಿಶೇಷ ಕೃಪೆ ಇರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

Hunuman Jayanti Horoscope: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹ ಇರುತ್ತದೆ ಹಾಗೂ ಆ ಗ್ರಹಕ್ಕೆ ಸಂಬಂಧಿಸಿದ ದೇವರ ವಿಶೇಷ ಕೃಪೆ ಆ ರಾಶಿಯ ಜನರ ಮೇಲೇರುತ್ತದೆ. ಚೈತ್ರ ಮಾಸದ ಹುಣ್ಣಿಮೆ ತಿಥಿಯ ದಿನ ಈ ಬಾರಿ ಹನುಮ ಜಯಂತಿಯ ಮಹಾಪರ್ವ ಆಚರಿಸಲಾಗುತ್ತಿದೆ. ಈ ಬಾರಿ ಹನುಮಾನ್ ಜಯಂತಿ ಏಪ್ರಿಲ್ 6, 2023 ರಂದು ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಕೆಲ ರಾಶಿಗಳ ಸ್ಥಳೀಯರ ಮೇಲೆ ಶ್ರೀ ಆಂಜನೇಯನ ವಿಶೇಷ ಕೃಪೆ ಇರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Chaturgrahi Yog: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ಜನರ ಮೇಲೆ ಭಾರಿ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

ಮೀನ ರಾಶಿ: ಶ್ರೀ ಆಂಜನೇಯನ ಕೃಪೆಯಿಂದ, ಹಣ ಸಂಪಾದಿಸುವ ಬಯಕೆ ಶೀಘ್ರದಲ್ಲೇ ಈಡೇರಲಿದೆ. ವೈವಾಹಿಕ ಜೀವನದಲ್ಲಿ ದುಃಖಗಳು ಅಂತ್ಯವಾಗಿ. ನಿಕಟತೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಪ್ರಯಾಣವು ಸುಖಕರ ಸಾಬೀತಾಗಲಿದೆ. ನಿಕಟವರ್ತಿಗಳು ಜೀವನದಲ್ಲಿ ಸಾಕಷ್ಟು  ಸಮಸ್ಯೆಗಳನ್ನು ಸೃಷ್ಟಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಎಚ್ಚರಿಕೆಯ ಅವಶ್ಯಕತೆಯಿದೆ. ಮಕ್ಕಳಿಂದ ಕೆಲವು ಶುಭ ಸಮಾಚಾರಗಳು ಪ್ರಾಪ್ತಿಯಾಗಬಹುದು.  

2 /5

ಧನು ರಾಶಿ: ಹನುಮ ಜಯಂತಿಯ ದಿನ ಧನು ರಾಶಿಯವರಿಗೆ ಸಂತಸದಿಂದ ಕೂಡಿರುತ್ತದೆ. ಕುಟುಂಬ ಜನರ ಸುಖ-ದುಃಖಗಳಲ್ಲಿ ಭಾಗಿಯಾಗಿ ಅವರನ್ನು ನೋಡಿಕೊಳ್ಳಿ. ನಿಮ್ಮ ಬಾಳಸಂಗಾತಿ ಬೆಂಬಲ ನಿಮಗೆ ಸಿಗಲಿದೆ. ಪ್ರೇಮ ಸಂಬಂಧಗಳಲ್ಲಿ ಸ್ವತಂತ್ರ ಆಲೋಚನೆಗಳನ್ನು ಬಳಸುವುದರಿಂದ ಆತ್ಮೀಯತೆ ಹೆಚ್ಚಾಗಲಿದೆ. ಸರಸ್ವತಿ ಯೋಗದಿಂದ ಸಂಪತ್ತು ಹೆಚ್ಚಾಗಲಿದೆ. ವಿದ್ಯಾಭ್ಯಾಸದಿಂದ ಹಣ ಸಂಪಾದಿಸಲು ಸಾಧ್ಯವಾಗುತ್ತದೆ. ಮಾತಿನಲ್ಲಿ ಮಾಧುರ್ಯತೆಯಿಂದ ಸಾಕಷ್ಟು ಪ್ರಯೋಜನವಾಗಲಿದೆ. ಹನುಮಾನ ಕೃಪೆ ನಿಮ್ಮ ಮೇಲಿರಲಿದೆ.  

3 /5

ಕರ್ಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯ ಜಾತಕದವರಿಗೆ ಈ ಅವಧಿಯಲ್ಲಿ ಹಠಾತ್ ಧಣಪ್ರಾಪ್ತಿಯಾಗಲಿದೆ. ಬಂಧುಗಳಿಂದ ಒತ್ತಡ ಉಂಟಾಗಬಹುದು. ತರಾತುರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ, ಇಲ್ಲದಿದ್ದರೆ ಹೃದಯಕ್ಕೆ ಹತ್ತಿರವಿರುವ ಜನರು ದೂರ ಹೋಗಬಹುದು. ಈ ಸಮಯದಲ್ಲಿ, ವಯಸ್ಸಾದವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.  

4 /5

ವೃಷಭ ರಾಶಿ: ಹನುಮ ಜಯಂತಿಯಂದು ವೃಷಭರಾಶಿಯ ಜನರ ಮೇಲೆ ಹನುಮಾನ ಅಪಾರ ಕೃಪೆ ಇರಲಿದೆ. ಈ ಸಮಯದಲ್ಲಿ, ಯಾವುದೇ ವ್ಯಕ್ತಿಯನ್ನು ಭೇಟಿಯಾದಾಗ ಭಯಪಡಬೇಡಿ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಈ ಅವಧಿಯಲ್ಲಿ, ತಮಾಷೆಯಾಗಿ ಹೇಳಿದ ವಿಷಯಗಳನ್ನು ಅವಮಾನ ಅಂತ ಭಾವಿಸುವುದನ್ನು ತಪ್ಪಿಸಿ. ಈ ಅವಧಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಹೀಗಿರುವಾಗ  ಸ್ವಲ್ಪ ಎಚ್ಚರಿಕೆಯಿಂದ ಮುಂದಕ್ಕೆ ಸಾಗಿ. ಸಣ್ಣ ಪ್ರಯಾಣದ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಈ ಸಮಯ ಉತ್ತಮವಾಗಿರುತ್ತದೆ.  

5 /5

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನುಮ ಜಯಂತಿಯ ವಿಶೇಷ ಸಂದರ್ಭದಲ್ಲಿ ಈ ರಾಶಿಯವರು ಮಾನಸಿಕ ನೆಮ್ಮದಿಗಾಗಿ ಕೆಲವು ಪರಿಹಾರಗಳನ್ನು ಮಾಡಬೇಕು. ಈ ಸಮಯದಲ್ಲಿ, ನಿಮ್ಮ ಪೋಷಕರಿಂದ ನೀವು ಆರ್ಥಿಕ ಸಹಾಯವನ್ನು ಪಡೆಯುತ್ತೀರಿ, ಇದರಿಂದಾಗಿ ನೀವು ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಮಕ್ಕಳ ಯೋಜನೆಗೆ ಶುಭ ದಿನ. ಇದೇ ವೇಳೆ ಈ ದಿನವನ್ನು ಹಣ ಸಂಪಾದಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಒಪ್ಪಂದ ಮಾಡಿಕೊಳ್ಳಲು ಬಯಸಿದರೆ, ಅದಕ್ಕಾಗಿ ಇದು ಸಕಾಲ, ಹನುಮಾನ ವಿಶೇಷ ಕೃಪೆ ನಿಮ್ಮ ಮೇಲಿರಲಿದೆ. ಇದೇ ವೇಳೆ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉದ್ಯೋಗಾವಕಾಶಗಳು ಒದಗಿ ಬರಲಿವೆ.. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)