ನವದೆಹಲಿ: ಹಾವುಗಳಂತೆ ಜನರನ್ನು ಹೆದರಿಸುವ ಕೆಲವು ಜೀವಿಗಳಿವೆ. ಕೆಲವು ಜೀವಿಗಳನ್ನು ನೋಡಿದ ತಕ್ಷಣ ಜನರು ಭಯಪಡುತ್ತಾರೆ. ಆದರೆ ಪ್ರತಿಯೊಂದು ಜೀವಿಯು ಪ್ರಕೃತಿಯಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಮತ್ತೊಂದೆಡೆ ಧಾರ್ಮಿಕ ಗ್ರಂಥಗಳು, ಜ್ಯೋತಿಷ್ಯ ಇತ್ಯಾದಿಗಳಲ್ಲಿ ಕೆಲವು ಜೀವಿಗಳನ್ನು ಬಹಳ ಮಂಗಳಕರ(Auspicious Creature)ವೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಕೆಲವನ್ನು ಪೂಜಿಸಲಾಗುತ್ತದೆ. ಉದಾಹರಣೆಗೆ ಸನಾತನ ಧರ್ಮದಲ್ಲಿ ಗೋವನ್ನು ತಾಯಿ ಎಂದು ಪರಿಗಣಿಸಲಾಗುತ್ತದೆ. ಈ ಜೀವಿಗೆ ಪೂಜೆ, ಆರೈಕೆ, ಆಹಾರ ನೀಡುವುದು ಬಹಳಷ್ಟು ಪುಣ್ಯ ನೀಡುತ್ತದೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದ್ದು, ಇವುಗಳನ್ನು ಚೆನ್ನಾಗಿ ನೋಡಿಕೊಂಡರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ(Wealth And Peace) ದೊರೆಯುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಈ ಪ್ರಾಣಿ ಇದ್ದರೆ ಸಂಪತ್ತು ಮತ್ತು ಸಮೃದ್ಧಿ!
ಶುಭಕಾರಿ ಜೀವಿಗಳಲ್ಲಿ ಹಲ್ಲಿಯ ಹೆಸರೂ ಸೇರಿದೆ. ಅಂದಹಾಗೆ ಹೆಚ್ಚಿನ ಜನರು ಈ ಹಲ್ಲಿಯನ್ನು ಕಂಡರೆ ದೂರ ಸರಿಯುತ್ತಾರೆ. ಬಹುತೇಕರು ಹಲ್ಲಿ ಕಂಡರೆ ಹೆದರುತ್ತಾರೆ ಅಥವಾ ಅದಕ್ಕೆ ಅಸಹ್ಯಪಡುತ್ತಾರೆ. ಆದರೆ ಸಂಪತ್ತಿನ ದೃಷ್ಟಿಯಿಂದ(Astro Tips For Wealth) ಹಲ್ಲಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೊಸ ಮನೆಯ ವಾಸ್ತು ಪೂಜೆಯಲ್ಲೂ ಬೆಳ್ಳಿ ಹಲ್ಲಿ ಇಟ್ಟು ಪೂಜಿಸುತ್ತಾರೆ. ಮನೆಯಲ್ಲಿ ಹಲ್ಲಿ ಇದ್ದರೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಕಾರಣದಿಂದಲೇ ಮನೆಯ ಆರ್ಥಿಕ ಸ್ಥಿತಿಯು ಯಾವಾಗಲೂ ಉತ್ತಮವಾಗಿರುತ್ತದೆ. ಮನೆಯವರ ನಡುವೆಯೂ ಪ್ರೀತಿ ಉಳಿಯುತ್ತದೆ.
ಇದನ್ನೂ ಓದಿ: Astrology: ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ ಈ 3 ರಾಶಿಯ ಜನ
ಹಲ್ಲಿಗೆ ಸಂಬಂಧಿಸಿದ ಶುಭ ಚಿಹ್ನೆಗಳು
- ಮನೆಯ ಸುತ್ತಲೂ ಹಲ್ಲಿ(Lizards)ಯನ್ನು ನೋಡುವುದು ತುಂಬಾ ಮಂಗಳಕರ.
- ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮಿದೇವಿಯು ವರ್ಷವಿಡೀ ನಿಮಗೆ ಅಪಾರ ಆಶೀರ್ವಾದವನ್ನು ನೀಡಲಿದ್ದಾಳೆ ಎಂದು ಭಾವಿಸಿ.
- ಹೊಸ ಮನೆಗೆ ಪ್ರವೇಶಿಸುವಾಗ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಶುಭ. ಇದು ನಿಮಗೆ ಪೂರ್ವಜರ ಆಶೀರ್ವಾದವಿದೆ ಎಂಬುದರ ಸಂಕೇತವಾಗಿದೆ.
- ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿ(Lizards In Home)ಗಳನ್ನು ನೋಡುವುದು ಕೂಡ ಮಂಗಳಕರ.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಇದನ್ನೂ ಓದಿ: Ganesh Jayanti: ಇಂದು ಮರೆತೂ ಈ ಕೆಲಸ ಮಾಡಬೇಡಿ, ಜೀವಮಾನವಿಡೀ ಸಂಕಷ್ಟ ಬರುತ್ತದೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.