ಈ ಅಕ್ಷರದಿಂದ ಹೆಸರು ಆರಂಭವಾಗುವವರ ಮೇಲೆ ಜೀವನ ಪೂರ್ತಿ ಇರುತ್ತದೆ ಕುಬೇರನ ಆಶೀರ್ವಾದ

ಜ್ಯೋತಿಷ್ಯದ ಪ್ರಕಾರ,  ಕೆಲವೊಂದು ಅಕ್ಷರಗಳಿಂದ ಹೆಸರು ಆರಂಭವಾದರೆ  ಅಂಥವರು ಜೀವನ ಪೂರ್ತಿ ಶ್ರೀಮಂತರಾಗಿರುತ್ತಾರೆಯಂತೆ. ಅಪಾರ ಸಂಪತ್ತಿನ ಒಡೆಯರಾಗಿದ್ದು,  ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. 

Written by - Ranjitha R K | Last Updated : Jul 25, 2022, 11:15 AM IST
  • ನಾಮ ಜ್ಯೋತಿಷ ಜ್ಯೋತಿಷ್ಯದ ಒಂದು ಭಾಗವಾಗಿದೆ
  • ಹೆಸರಿನ ಮೊದಲ ಅಕ್ಷರವು ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಹೇಳುತ್ತದೆ.
  • ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹೆಸರಿನವರು ಅದೃಷ್ಟವಂತರು
ಈ ಅಕ್ಷರದಿಂದ ಹೆಸರು ಆರಂಭವಾಗುವವರ ಮೇಲೆ ಜೀವನ ಪೂರ್ತಿ ಇರುತ್ತದೆ ಕುಬೇರನ ಆಶೀರ್ವಾದ title=
Name Astrology for Money (file photo)

ಬೆಂಗಳೂರು : Name Astrology for Money: ನಾಮ ಜ್ಯೋತಿಷ್ಯ,  ಜ್ಯೋತಿಷ್ಯದ ಒಂದು ಭಾಗವಾಗಿದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಅವನ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಹೇಳುತ್ತದೆ.  ಹೆಸರಿನ ಮೊದಲ ಅಕ್ಷರವು ವ್ಯಕ್ತಿಯು ಶ್ರೀಮಂತನಾಗುತ್ತಾನೋ ಇಲ್ಲವೋ ಅಥವಾ ಅವನ ಜೀವನ ಹೇಗಿರಲಿದೆ ಎನ್ನುವುದನ್ನು ಹೇಳುತ್ತದೆ. ಜ್ಯೋತಿಷ್ಯದ ಪ್ರಕಾರ,  ಕೆಲವೊಂದು ಅಕ್ಷರಗಳಿಂದ ಹೆಸರು ಆರಂಭವಾದರೆ  ಅಂಥವರು ಜೀವನ ಪೂರ್ತಿ ಶ್ರೀಮಂತರಾಗಿರುತ್ತಾರೆಯಂತೆ. ಅಪಾರ ಸಂಪತ್ತಿನ ಒಡೆಯರಾಗಿದ್ದು,  ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. 

ಈ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಹೆಸರಿನವರು ಅದೃಷ್ಟವಂತರು :
A ಅಕ್ಷರದಿಂದ ಹೆಸರು ಪ್ರಾರಂಭವಾಗುವವರು : ಇಂಗ್ಲಿಷ್‌ನ A ಅಕ್ಷರದಿಂದ  ಯಾರ ಹೆಸರು ಪ್ರಾರಂಭವಾಗುತ್ತದೆಯೋ ಆ ಜನರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಈ ಜನರು ತಮ್ಮ ಜೀವನದಲ್ಲಿ ಬಹಳಷ್ಟು ಸಂಪತ್ತನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮ ಮತ್ತು ಅದೃಷ್ಟದ ಆಧಾರದ ಮೇಲೆ, ಅವರು ವೇಗವಾಗಿ ಯಶಸ್ವಿ ಹೊಂದುತ್ತಾರೆ.  ಈ ಜನರು ತಮ್ಮ ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.

ಇದನ್ನೂ ಓದಿ : ಕನಸಿನಲ್ಲಿ ಈ ಆರು ವಸ್ತುಗಳು ಕಂಡರೆ ಅದೃಷ್ಟ ಬದಲಾಗುವ ಸಂಕೇ ತವಂತೆ ..!

R ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು: ಇಂಗ್ಲಿಷ್‌ನಲ್ಲಿ R ಅಕ್ಷರದಿಂದ  ಯಾರ ಹೆಸರು ಆರಂಭವಾಗುತ್ತದೆಯೋ ಅವರ ಅದೃಷ್ಟ ಕೂಡಾ ಚೆನ್ನಾಗಿರುತ್ತದೆ. ಈ ಅಕ್ಷರದಿಂದ ಹೆಸರು ಆರಂಭವಾಗುವವರು, ಯಾವಾಗಲೂ ಬಹಳಷ್ಟು ಹಣವನ್ನು ಹೊಂದಿರುತ್ತಾರೆ. ಇವರು ಯಾವ ಕ್ಷೇತ್ರಕ್ಕೆ ಹೋದರೂ ಕಷ್ಟಪಟ್ಟು ದುಡಿದು ಉನ್ನತ ಸ್ಥಾನಕ್ಕೆ ಏರುತ್ತಾರೆ.  

S ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು: ಇಂಗ್ಲಿಷ್‌ನಲ್ಲಿ S  ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತಮ್ಮ ಜೀವನದ ಪ್ರತಿಯೊಂದು ಸವಾಲನ್ನು ಧೈರ್ಯದಿಂದ ಎದುರಿಸುತ್ತಾರೆ.  ಇವರ ಜೀವನದಲ್ಲಿಯೂ ಹಣದ ಕೊರತೆಯಿರುವುದೇ ಇಲ್ಲ. ಜೀವನದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯುತ್ತಾರೆ. ಅವರ ಕೀರ್ತಿ ದೂರದೂರಕ್ಕೂ ಹರಡುತ್ತದೆ.

ಇದನ್ನೂ ಓದಿ : Zodiac Sign: ಮಾತಿನಿಂದಲೇ ಹುಡುಗಿಯರ ಹೃದಯ ಗೆಲ್ಲುತ್ತಾರೆ ಈ ರಾಶಿಯ ಹುಡುಗರು

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News