ಪ್ರಾಣಕ್ಕೆ ಕುತ್ತಾಗಬಹುದು ಗ್ಯಾಸ್ ಗೀಸರ್ , ಅಳವಡಿಸುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಗ್ಯಾಸ್ ಗೀಸರ್ ಮೂಲಕ ನೀರನ್ನು ಬಿಸಿಮಾಡಲಾಗುತ್ತದೆ. ಸಾಮಾನ್ಯವಾಗಿ ಮನೆಗಳು ಮತ್ತು ಹೋಟೆಲ್‌ಗಳ ಕೊಠಡಿಗಳ ಸ್ನಾನಗೃಹಗಳಲ್ಲಿ ಗ್ಯಾಸ್ ಗೀಸರ್‌ಗಳನ್ನು ಹಾಕಲಾಗುತ್ತದೆ.

Written by - Ranjitha R K | Last Updated : Feb 23, 2022, 04:54 PM IST
  • ಪ್ರತಿ ಗ್ಯಾಸ್ ಗೀಸರ್ ವ್ಯಕ್ತಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಲಾಗುವುದಿಲ್ಲ.
  • ಗ್ಯಾಸ್ ಗೀಸರ್ ಬಳಸುವಾಗ ಎಚ್ಚರಿಕೆ ವಹಿಸಿದರೆ ಒಳ್ಳೆಯದು
  • ಗ್ಯಾಸ್ ಗೀಸರ್ ಅನ್ನು ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿರಲಿ
 ಪ್ರಾಣಕ್ಕೆ ಕುತ್ತಾಗಬಹುದು ಗ್ಯಾಸ್ ಗೀಸರ್ , ಅಳವಡಿಸುವ ಮುನ್ನ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ  title=
ಗ್ಯಾಸ್ ಗೀಸರ್ ಬಳಸುವಾಗ ಎಚ್ಚರಿಕೆ ವಹಿಸಿದರೆ ಒಳ್ಳೆಯದು (file photo)

ನವದೆಹಲಿ : ಗುರುಗ್ರಾಮ್‌ನ ಹೋಟೆಲ್‌ನ ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್‌ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಗ್ಯಾಸ್ ಗೀಸರ್‌ನಲ್ಲಿದ್ದ (gas-geyser) ವಿಷಕಾರಿ ಅನಿಲದಿಂದ ಸತ್ಯದೇವ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯ ದ್ವಾರಕಾದಲ್ಲಿ ಗ್ಯಾಸ್ ಗೀಸರ್‌ನಿಂದ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಸಾವಿಗೆ ಕಾರ್ಬನ್ ಮಾನಾಕ್ಸೈಡ್ ಅನಿಲ ಕಾರಣ ಎಂದು ಹೇಳಲಾಗಿದೆ. ಗ್ಯಾಸ್ ಗೀಸರ್‌ಗಳು ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಹೊಂದಿರುತ್ತವೆ (Side effects og gas-geyser). ಅನೇಕ ಬಾರಿ ಸೋರಿಕೆಯಿಂದ ಇಂತಹ ಅವಘಡಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದರು ಪ್ರತಿ ಗ್ಯಾಸ್ ಗೀಸರ್ ವ್ಯಕ್ತಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಗ್ಯಾಸ್ ಗೀಸರ್ ಬಳಸುವಾಗ ಎಚ್ಚರಿಕೆ ವಹಿಸಿದರೆ ಇಂತಹ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಬಹುದು. 

ಗ್ಯಾಸ್ ಗೀಸರ್ ಎಂದರೇನು ?
ಗ್ಯಾಸ್ ಗೀಸರ್ ಮೂಲಕ ನೀರನ್ನು ಬಿಸಿಮಾಡಲಾಗುತ್ತದೆ. ಸಾಮಾನ್ಯವಾಗಿ ಮನೆಗಳು ಮತ್ತು ಹೋಟೆಲ್‌ಗಳ ಕೊಠಡಿಗಳ ಸ್ನಾನಗೃಹಗಳಲ್ಲಿ (Bath room) ಗ್ಯಾಸ್ ಗೀಸರ್‌ಗಳನ್ನು ಹಾಕಲಾಗುತ್ತದೆ. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ಬಿಸಿನೀರು ಬೇಕಾಗುತ್ತದೆ. ಮನೆಗಳಲ್ಲಿ LPG ಅನಿಲದ ಮೂಲಕ ನೀರನ್ನು ಬಿಸಿಮಾಡುವಲ್ಲಿ ಅನಿಲದ ಬಳಕೆ ಮತ್ತು ವೆಚ್ಚವು ಹೆಚ್ಚಾಗುತ್ತದೆ, ಈ ಕಾರಣದಿಂದಾಗಿ ಜನರು ಸಾಮಾನ್ಯವಾಗಿ ಸ್ನಾನಗೃಹಗಳಲ್ಲಿ ಗ್ಯಾಸ್ ಗೀಸರ್ ಗಳನ್ನು ಹಾಕಿಸುತ್ತಾರೆ (gas-geyser). 

ಗ್ಯಾಸ್ ಗೀಸರ್ ಅನ್ನು ಬಳಸುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿರಲಿ : 
 ಸ್ನಾನಗೃಹ ಮತ್ತು ಅಡುಗೆಮನೆಯಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸುವಾಗ  ಸುತ್ತಲೂ ಸ್ಥಳಾವಕಾಶವಿದೆಯೇ ಎನ್ನುವುದನ್ನು ಗಮನಿಸಿಕೊಳ್ಳಿ (geyser precautions). ಅಲ್ಲದೆ, ಗಾಳಿಯ ಸರಿಯಾದ ವ್ಯವಸ್ಥೆ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಮನೆಯ ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಅಳವಡಿಸುತ್ತಿದ್ದರೆ, ವೆಂಟಿಲೇಟರ್‌ಗೆ ಸ್ಥಳವಕಾಶ ಇರಲೇ ಬೇಕು (How to use gas geyser).  

ಇದನ್ನೂ ಓದಿ : ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗಿ ಬಿಡುತ್ತದೆ

ಬಚ್ಚಲು ಮನೆಯಲ್ಲಿ ಗ್ಯಾಸ್ ಗೀಸರ್ ಬಳಸುವಾಗ ಎಕ್ಸಾಸ್ಟ್ ಫ್ಯಾನ್ ಅನ್ನು ರನ್ ಮಾಡಿ.  ಗ್ಯಾಸ್ ಗೀಸರ್‌ನಿಂದ ಯಾವುದೇ ರೀತಿಯ ಸೋರಿಕೆ ಕಂಡುಬಂದರೆ, ಅದನ್ನು ಬಳಸಬೇಡಿ ಮತ್ತು ಕಾಲಕಾಲಕ್ಕೆ ಗ್ಯಾಸ್ ಗೀಸರ್ ಅನ್ನು ಪರಿಶೀಲಿಸುತ್ತಿರಿ. ಇದರಿಂದ ಯಾವುದೇ ರೀತಿಯ ಅಪಘಾತವಾಗುವುದನ್ನು ತಪ್ಪಿಸಬಹುದು. ಗ್ಯಾಸ್ ಗೀಸರ್ ಅನ್ನು ದಿನವಿಡೀ ಬಳಸಬೇಡಿ. ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಬಳಸುತ್ತಿದ್ದರೆ ಗ್ಯಾಸ್ ಗೀಸರ್ ಅನ್ನು ಸರಿಯಾದ ಅಂತರದಲ್ಲಿ ಮಾತ್ರ ಚಲಾಯಿಸಿ. ಗ್ಯಾಸ್ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ನೀವು ಕೆಮ್ಮು ಮತ್ತು ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದರೆ, ತಕ್ಷಣ ಗೀಸರ್ ಅನ್ನು ಆಫ್ ಮಾಡಿ ಮತ್ತು ಗಾಳಿ ಇರುವ ಜಾಗಕ್ಕೆ ತೆರಳಿ.

ಗ್ಯಾಸ್ ಗೀಸರ್‌ನಲ್ಲಿರುವ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಉಸಿರಾಡಿದರೆ, ಅದು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಇಂಗಾಲದ ಮಾನಾಕ್ಸೈಡ್ ಅಧಿಕವಾಗಿರುವ ಪರಿಸರದಲ್ಲಿ  ದೇಹದಲ್ಲಿನ ಆಮ್ಲಜನಕದ ಪ್ರಮಾಣವನ್ನು ಕಡಿಮೆಯಾಗುತ್ತದೆ ಮತ್ತು ವ್ಯಕ್ತಿಯು ಸಾವನ್ನಪಬಹುದು. 

 ಇದನ್ನೂ ಓದಿ : ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಜಿರಳೆ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News