ಇಂದಿನ ರಾಶಿ ಭವಿಷ್ಯ 20-04-2026
ಮೇಷ ರಾಶಿಯವರ ಭವಿಷ್ಯ:
ರಾಶಿಯಲ್ಲೇ ರವಿ ಇರುವುದರಿಂದ ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಶುಭವಾಗಿರಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ.
ವೃಷಭ ರಾಶಿಯವರ ಭವಿಷ್ಯ:
ಉದ್ಯೋಗಾವಕಾಶಗಳು ಸಿಗಲಿವೆ. ಹಿರಿಯರೊಟ್ಟಿಗೆ ಕಾಲ ಕಳೆಯುವಿರಿ. ಯಾವುದೇ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಮಿಥುನ ರಾಶಿಯವರ ಭವಿಷ್ಯ:
ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಅಲ್ಪ ನಷ್ಟ ಉಂಟಾಗಬಹುದು. ನೀವಂದುಕೊಂಡ ಕೆಲಸದಲ್ಲಿ ಉತ್ತಮ ಫಲ ಪಡೆಯಲು ಗಣೇಶನ ಪ್ರಾರ್ಥನೆ ಮಾಡಿ.
ಇಂದಿನ ರಾಶಿ ಭವಿಷ್ಯ 09-04-2026
ಮೇಷ ರಾಶಿಯವರ ಭವಿಷ್ಯ:
ಭಾಗ್ಯದಲ್ಲಿ ಚಂದ್ರನಿರುವುದರಿಂದ ಅಪೇಕ್ಷಿತ ವಿಚಾರಗಳಲ್ಲಿ ಶುಭವಾಗಲಿದೆ. ಹಿತೈಷಿಗಳಿಂದ ಶುಭವಾಗಲಿದೆ. ವಿವಾಹ ವಿಚಾರಗಳಿಗೆ ಸಂಬಂಧಿಸಿದಂತೆ ಶುಭ ದಿನ.
ವೃಷಭ ರಾಶಿಯವರ ಭವಿಷ್ಯ:
ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒತ್ತಡಭರಿತವಾದ ದಿನ. ಕುಟುಂಬದವರೊಟ್ಟಿಗೆ ದೂರದ ಪ್ರಯಾಣದ ಸುಯೋಗ ಇರಲಿದೆ. ಗೋಮಾತೆಗೆ ಆಹಾರ ನೀಡುವುದರಿಂದ ಶುಭವಾಗಲಿದೆ.
ಮಿಥುನ ರಾಶಿಯವರ ಭವಿಷ್ಯ:
ಮನೆಯಲ್ಲಿ ಕಿರಿಕಿರಿ ಉಂಟಾಗಬಹುದು. ಈ ಬಗ್ಗೆ ಎಚ್ಚರ. ಬಂಧುಗಳೊಟ್ಟಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ಇರಲಿ.
ಇಂದಿನ ರಾಶಿ ಭವಿಷ್ಯ 08-04-2026
ಮೇಷ ರಾಶಿಯವರ ಭವಿಷ್ಯ:
ಇಂದು ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸುಯೋಗ. ವೃತ್ತಿಯಲ್ಲಿ ಒತ್ತಡ ಇರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಒತ್ತಡ ಇರಲಿದೆ. ಮನಸ್ಥಾಪಗಳು ಬರಬಹುದು.
ವೃಷಭ ರಾಶಿಯವರ ಭವಿಷ್ಯ:
ಸಾಹಿತ್ಯ ಕ್ಷೇತ್ರಗಳಲ್ಲಿ ಇರುವವರಿಗೆ ಶುಭಪ್ರದವಾಗಿರುತ್ತದೆ. ಗೃಹನಿಮಿತ್ತ ಉಪಕರಣಗಳನ್ನು ಖರೀದಿಸಬಹುದು.
ಮಿಥುನ ರಾಶಿಯವರ ಭವಿಷ್ಯ:
ಅನಗತ್ಯವಾದ ಖರ್ಚುಗಳಿಗೆ ಕಡಿವಾಣ ಹಾಕಿ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಖರೀದಿಗೆ ಶುಭಪ್ರದವಾಗಿರುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳನ್ನು ಪ್ರಾರಂಭಿಸಲು ಶುಭ.
ಮಿತ್ರರಲ್ಲಿ ಮನಸ್ಥಾಪ ಬರಬಹುದು. ಉನ್ನತ ಅಧಿಕಾರಿಗಳೊಂದಿಗೆ ಏನಾದರೂ ಕಳವಳ, ಮನಸ್ಥಾಪಗಳು ಬರಬಹುದು. ನಿಮ್ಮ ಕೀರ್ತಿಗೆ ಧಕ್ಕೆ ಬರಬಹುದು. ವೃಷಭ ರಾಶಿಯವರ ಭವಿಷ್ಯ: ವೃತ್ತಿರಂಗದಲ್ಲಿ ಸ್ಥಾನಭ್ರಷ್ಟತೆ ಉಂಟಾಗಬಹುದು. ಸಜ್ಜನರೊಂದಿಗೆ ಸಮಯ ಕಳೆಯುವಿರಿ. ಲಕ್ಷ್ಮಿ ನರಸಿಂಹನ ದರ್ಶನದಿಂದ ಶುಭವಾಗಲಿದೆ. ಮಿಥುನ ರಾಶಿಯವರ ಭವಿಷ್ಯ: ಈ ರಾಶಿಯವರಿಗೆ ಇಂದು ಕಾರ್ಯಹಾನಿ ಉಂಟಾಗಬಹುದು. ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು. ದಾಯಾದಿಗಳಿಂದ ಮನಸ್ಥಾಪಗಳು ಬರಬಹುದು. ಕರ್ಕಾಟಕ ರಾಶಿಯವರ ಭವಿಷ್ಯ: ಸ್ವಲ್ಪ ಸಾಲಭಾದೆ ನಿಮ್ಮನ್ನು ಕಾಡಬಹುದು. ನೀವಂದುಕೊಂಡಂತೆ ಕೆಲಸಗಳು ಆಗದಿರಬಹುದು. ಗುರುಗಳ ದರ್ಶನದಿಂದ ಶುಭವಾಗಲಿದೆ.
ಇಂದಿನ ರಾಶಿ ಭವಿಷ್ಯ 04-04-2026
ಮೇಷ ರಾಶಿಯವರ ಭವಿಷ್ಯ:
ಶುಕ್ರನ ಸಂಯೋಜನೆಯಿಂದ ಇಂದು ಆರೋಗ್ಯದ ಕಡೆ ಕಾಳಜಿವಹಿಸಿ. ಹೂಡಿಕೆಗಳಲ್ಲೂ ನಷ್ಟವಾಗಲಿದೆ.
ವೃಷಭ ರಾಶಿಯವರ ಭವಿಷ್ಯ:
ರಾಶಿಯಾಧಿಪತಿ ವ್ಯಯದಲ್ಲಿರುವುದರಿಂದ ಅನಾಮಿಕ ವ್ಯಕ್ತಿಗಳಿಂದ ಮೋಸ ಹೋಗಬಹುದು. ಮನೆಯಲ್ಲಿ ಅನಾರೋಗ್ಯವು ನಿಮ್ಮ ಮನಸ್ಸನ್ನು ಕುಗ್ಗಿಸಬಹುದು.
ಮಿಥುನ ರಾಶಿಯವರ ಭವಿಷ್ಯ:
ಸಾಂಸಾರಿಕ ವಿಚಾರಗಳಲ್ಲಿ ಮಾನಸಿಕ ಒತ್ತಡಗಳು ಬರಬಹುದು. ಆಭರಣ ಕೊಳ್ಳುವವರಿಗೆ ಶುಭಪ್ರದವಾಗಿದೆ.
ಕರ್ಕಾಟಕ ರಾಶಿಯವರ ಭವಿಷ್ಯ:
ಇಂದು ಸ್ವಲ್ಪ ಮನಸ್ಥಾಪಗಳು ಬರಬಹುದು. ಮಕ್ಕಳ ವಿಚಾರದಲ್ಲಿ ಕಾಳಜಿ ವಹಿಸಿ. ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಸುಯೋಗವಿದೆ.
ಇಂದಿನ ರಾಶಿ ಭವಿಷ್ಯ 03-04-2026
ಮೇಷ ರಾಶಿಯವರ ಭವಿಷ್ಯ:
ಮೇಷ ರಾಶಿಯವರಿಗೆ ಇಂದು ಹಣಕಾಸಿನ ವಿಚಾರದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಕಾಡಬಹುದು. ಮಕ್ಕಳ ಬಗ್ಗೆ ಕಾಳಜಿ ಅಗತ್ಯವಾಗಿದೆ.
ವೃಷಭ ರಾಶಿಯವರ ಭವಿಷ್ಯ:
ವೃಷಭ ರಾಶಿಯ ಜನರಿಗೆ ಇಂದು ಮಾನಸಿಕ ಚಿಂತನೆಗಳು ಹೆಚ್ಚಾಗಬಹುದು. ಅಪೇಕ್ಷೆಗಳು ನೆರವೇರದೆ ಇರಬಹುದು. ಆದಾಗ್ಯೂ, ಪ್ರಯತ್ನ ಕಾರ್ಯಾಧಿಗಳಲ್ಲಿ ಶುಭವಾಗಲಿದೆ. ಇಂದು ನಿಮಗೆ ಮಿಶ್ರಫಲಗಳಿಂದ ಕೂಡಿದ ದಿನ.
ಮಿಥುನ ರಾಶಿಯವರ ಭವಿಷ್ಯ:
ಮಿಥುನ ರಾಶಿಯವರಿಗೆ ಲಾಭ ಭಾವದಲ್ಲಿ ಶುಕ್ರ ಇರುವುದರಿಂದ ನಿಮ್ಮ ಅಪೇಕ್ಷೆಗಳು ನೆರವೇರುವಲ್ಲಿ ಅಡೆತಡೆಗಳು ಇರಬಹುದು. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.
ಇಂದಿನ ರಾಶಿ ಭವಿಷ್ಯ 02-04-2026
ಮೇಷ ರಾಶಿಯವರ ಭವಿಷ್ಯ:
ಲಾಭದಲ್ಲಿ ರಾಹು ಇದ್ದರೂ ಸಹ ಇಂದು ಮಾನಸಿಕ ಅಂತಃಕಲಹಗಳು ನಿಮ್ಮನ್ನು ಬಾಧಿಸಬಹುದು. ಕೃಷಿ ವ್ಯವಹಾರಗಳಲ್ಲಿ ಲಾಭವಾಗಲಿದೆ.
ವೃಷಭ ರಾಶಿಯವರ ಭವಿಷ್ಯ:
ಇಂದು ಕೋರ್ಟು-ಕಚೇರಿ ಸಂಬಂಧಿತ ವಿಚಾರಗಳಲ್ಲಿ ತೊಂದರೆ ಉಂಟಾಗಬಹುದು. ಆಂಜನೇಯನ ಪ್ರಾರ್ಥನೆ ಮಾಡುವುದರಿಂದ ಒಳಿತಾಗಲಿದೆ. ಹಣಕಾಸಿನ ಮುಗ್ಗಟ್ಟು ಕಾಡಬಹುದು.
ಮಿಥುನ ರಾಶಿಯವರ ಭವಿಷ್ಯ:
ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರವಾಗಿರಿ. ಕಾರ್ಯಾಧಿಗಳಲ್ಲಿ ವಿಘ್ನ ಬರಬಹುದು. ವಿದೇಶ ವ್ಯವಹಾರಗಳಲ್ಲಿ ಕೆಲಸಗಳನ್ನು ಮುಂದೂಡಬೇಕಾಗಬಹುದು.
ಇಂದಿನ ರಾಶಿ ಭವಿಷ್ಯ 01-04-2026
ಮೇಷ ರಾಶಿಯವರ ಭವಿಷ್ಯ:
ಮೇಷ ರಾಶಿಯವರಿಗೆ ಇಂದು ತೇಜೋವಧೆ ಆಗುವ ಸಂಭವವಿರುವುದರಿಂದ ಎಲ್ಲಾ ರೀತಿಯಲ್ಲೂ ಸಮಚಿತ್ತತೆಯನ್ನು ಕಾಪಾಡಿಕೊಳ್ಳಿ. ಬಂಧುಗಳೊಂದಿಗೆ ಮನಃಸ್ಥಾಪಗಳು, ವೈರತ್ವ ಬರುವ ಸಾಧ್ಯತೆ ಇರುತ್ತದೆ.
ವೃಷಭ ರಾಶಿಯವರ ಭವಿಷ್ಯ:
ವೃಷಭ ರಾಶಿಯ ಜನರಿಗೆ ಇಂದು ಮನೆಯಲ್ಲಿ ಸುಖಪ್ರದವಾಗಿರುತ್ತದೆ. ಸಂತಾನಕ್ಕೆ ಸಂಬಂಧಿಸಿದಂತೆ ಯೋಚಿಸುತ್ತಿರುವವರಿಗೆ ಸಿಹಿ ಸುದ್ದಿ ಸಿಗಬಹುದು. ಆರೋಗ್ಯದ ಕಡೆ ಸ್ವಲ್ಪ ಗಮನಕೊಡಿ.
ಮಿಥುನ ರಾಶಿಯವರ ಭವಿಷ್ಯ:
ಮಿಥುನ ರಾಶಿಯವರಿಗೆ ಪ್ರವಾಸದಲ್ಲಿ ಅಡಚಣೆ ಉಂಟಾಗಬಹುದು. ಸಂಗೀತಗಾರರಿಗೆ ಶುಭವಾಗಲಿದೆ. ಇಂದು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರವಾದ ದಿನ.
ಇಂದಿನ ರಾಶಿ ಭವಿಷ್ಯ 19-03-2026
ಮೇಷ ರಾಶಿಯವರ ಭವಿಷ್ಯ:
ಭಾಗ್ಯಾಧಿಪತಿಯ ಸಂಯೋಜನೆಯಿಂದ ಸ್ವಂತ ಪರಿಶ್ರಮಕ್ಕೆ ಖಂಡಿತ ಶುಭ ಫಲ ದೊರೆಯಲಿದೆ. ಪ್ರಯತ್ನ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. ಆಸ್ತಿ ವ್ಯವಹಾರಗಳಲ್ಲಿ ಶುಭ ಸುದ್ದಿ ಸಿಗಲಿದೆ.
ವೃಷಭ ರಾಶಿಯವರ ಭವಿಷ್ಯ:
ಧನಾಭಿವೃದ್ಧಿಯಾಗಲಿದೆ. ತಂದೆ ಆರೋಗ್ಯದಲ್ಲಿ ಏರುಪೇರಾಗಬಹುದು. ಕುಟುಂಬದವರು, ಆಪ್ತ ಬಂಧುಗಳ ಸಹಕಾರ ಸಿಗಲಿದೆ.
ಮಿಥುನ ರಾಶಿಯವರ ಭವಿಷ್ಯ:
ಸಾಂಸಾರಿಕ ವಿಚಾರಗಳಲ್ಲಿ ಗೊಂದಲಗಳಾಗಲಿದೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಮೇಲಾಧಿಕಾರಿಗಳ ಸಹಕಾರ ಸಿಗಲಿದೆ.
daily horoscope :ಇಂದಿನಿಂದ ಚೈತ್ರ ನವರಾತ್ರಿ ಮತ್ತು ಹಿಂದೂ ಹೊಸ ವರ್ಷ ‘ವಿಕ್ರಮ ಸಂವತ್ಸರ 2083’ ಪ್ರಾರಂಭವಾಗುತ್ತಿದೆ. ಹೊಸ ವರುಷ ಬಂತು ಅಂದರೆ ಈ ವರ್ಷವಾದರೂ ನನ್ನ ಕಷ್ಟಗಳೆಲ್ಲಾ ದೂರಾಗಿ ಒಳ್ಳೇದಾಗುತ್ತಾ?’ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತೆ ಅಲ್ವಾ? ಯುಗಾದಿ ಹಬ್ಬದ ಸಂಭ್ರಮದ ಜನತೆಗೆ ಹೊಸ ವರ್ಷದ ಮೊದಲ ದಿನ ನಿಮ್ಮ ರಾಶಿಗೆ ಏನೆಲ್ಲಾ ಲಾಭ ಕಾದಿದೆ ಅನ್ನೋದರ ಸಂಪೂರ್ಣ ಮಾಹಿತಿಯನ್ನು ಪಂಚಾಂಗದ ಆಧಾರದ ಮೇಲೆ ಮಾಹಿತಿ ನೀಡಲಾಗಿದೆ.
ಇಂದಿನ ರಾಶಿ ಭವಿಷ್ಯ 18-03-2026
ಮೇಷ ರಾಶಿಯವರ ಭವಿಷ್ಯ:
ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ಇರಿ. ಸಂಪತ್ತು ವೃದ್ಧಿಯಾದರೂ ಸಹ ಅಪೇಕ್ಷಿತ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ. ಸಂಶಯಾಸ್ಪದ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ.
ವೃಷಭ ರಾಶಿಯವರ ಭವಿಷ್ಯ:
ಪಿತ್ರಾರ್ಜಿತ ಆಸ್ತಿಗಳಲ್ಲಿ ಜಾಗರೂಕರಾಗಿರಿ. ಸಾಮಾಜಿಕ ವಲಯದಲ್ಲಿ ಕೆಲಸ ಮಾಡುವವರಿಗೆ ಶುಭ ದಿನ. ಮನೆಯಲ್ಲಿ ಕುಟುಂಬದವರೊಂದಿಗೆ ಸಾಮರಸ್ಯದ ಕೊರತೆ ಕಂಡು ಬರಲಿದೆ.
ಮಿಥುನ ರಾಶಿಯವರ ಭವಿಷ್ಯ:
ಆಸ್ತಿಗಳಿಗೆ ಸಂಬಂಧಿಸಿದಂತೆ ಹಾಗೂ ವೃತ್ತಿ ರಂಗದಲ್ಲಿ ವೈಮಸ್ಯ ಬರಬಹುದು. ಒಂದೆರಡು ವಾರಗಳ ಬಳಿಕ ನಿಮ್ಮ ಕೆಲಸಗಳಲ್ಲಿ ಜಯ ದೊರೆಯಲಿದೆ.
ಇಂದಿನ ರಾಶಿ ಭವಿಷ್ಯ 17-03-2026
ಮೇಷ ರಾಶಿಯವರ ಭವಿಷ್ಯ:
ಆರ್ಥಿಕ ವಿಚಾರಗಳಲ್ಲಿ ಶುಭಪ್ರದವಾಗಲಿದೆ. ವೃತ್ತಿ, ಸರ್ಕಾರಿ ಕೆಲಸಗಳಲ್ಲಿ ಒತ್ತಡ ಇರಲಿದೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭವಾಗಲಿದೆ.
ವೃಷಭ ರಾಶಿಯವರ ಭವಿಷ್ಯ:
ಇಂದು ಕುಟುಂದವರೊಟ್ಟಿಗೆ ದೂರದ ಪ್ರಯಾಣ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಮಾರ್ಗ ಮಧ್ಯೆ ಕಿರಿಕಿರಿ ಉಂಟಾಗಬಹುದು. ವಿದೇಶ ವ್ಯವಹಾರಗಳಲ್ಲಿ ಒತ್ತಡಗಳು ಹೆಚ್ಚಾಗಬಹುದು.
ಮಿಥುನ ರಾಶಿಯವರ ಭವಿಷ್ಯ:
ಇಂದು ನಕಾರಾತ್ಮಕ ಚಿಂತೆಗಳು ನಿಮ್ಮನ್ನು ಬಾಧಿಸಬಹುದು. ಹಣಕಾಸಿನ ವಿಚಾರದಲ್ಲಿ ಜಾಗೃತೆಯಿಂದ ಇರಿ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒತ್ತಡ ಇರಲಿದೆ.
ಇಂದಿನ ರಾಶಿ ಭವಿಷ್ಯ 16-03-2026
ಮೇಷ ರಾಶಿಯವರ ಭವಿಷ್ಯ:
ಮೇಷ ರಾಶಿಯವರಿಗೆ ವೃತ್ತಿ ರಂಗದಲ್ಲಿ ಒತ್ತಡಗಳಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ತೊಂದರೆಗಳು ಕಾಡಬಹುದು.
ವೃಷಭ ರಾಶಿಯವರ ಭವಿಷ್ಯ:
ಯತ್ನ ಕಾರ್ಯಾಧಿಗಳಲ್ಲಿ ಸಫಲತೆ ಕಂಡು ಬರಲಿದೆ. ಭೂ ವ್ಯವಹಾರದಲ್ಲಿ ಲಾಭವಾಗಲಿದೆ. ಅಧಿಕ ಖರ್ಚು, ದುಂದು ವೆಚ್ಚಗಳು ನಿಮ್ಮನ್ನು ಬಾಧಿಸಬಹುದು.
ಮಿಥುನ ರಾಶಿಯವರ ಭವಿಷ್ಯ:
ವಿಶ್ವಾಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅನಾನುಕೂಲವಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರವಾಗಿರಿ. ಶತ್ರುಗಳ ಬಗ್ಗೆ ಜಾಗರೂಕರಾಗಿರಿ.
ಇಂದಿನ ರಾಶಿ ಭವಿಷ್ಯ 13-03-2026
ಮೇಷ ರಾಶಿಯವರ ಭವಿಷ್ಯ:
ಪಿತ್ರಾರ್ಜಿತ ಆಸ್ತಿಗಳಲ್ಲಿ ಲಾಭವಾಗಲಿದೆ. ಹೂಡಿಕೆಗಳಿಂದ ಶುಭವಾಗಲಿದೆ. ಪ್ರಯಾಣದಲ್ಲಿ ಎಚ್ಚರವಾಗಿರಿ. ಹಣಕಾಸಿನ ವಿಚಾರದಲ್ಲೂ ಏನಾದರೂ ನಷ್ಟವಾಗಬಹುದು.
ವೃಷಭ ರಾಶಿಯವರ ಭವಿಷ್ಯ:
ವೈವಾಹಿಕ ಜೀವನದಲ್ಲಿ ಶುಭಪ್ರದವಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಾಭವಾಗಲಿದೆ. ಬಂಧುಗಳೊಟ್ಟಿಗೆ ಸಮಾಗಮವಾಗುವ ಸುಯೋಗ. ಇಂದು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಶುಭಪ್ರದವಾಗಿರುತ್ತದೆ.
ಮಿಥುನ ರಾಶಿಯವರ ಭವಿಷ್ಯ:
ಮಿಥುನ ರಾಶಿಯವರಿಗೆ ಇಂದು ಸಂಪಾದನೆಯಲ್ಲಿ ವೃದ್ಧಿಯಾಗಲಿದೆ. ಪತ್ನಿಯಿಂದ ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ.
ಇಂದಿನ ರಾಶಿ ಭವಿಷ್ಯ 12-03-2026
ಮೇಷ ರಾಶಿಯವರ ಭವಿಷ್ಯ:
ಭಾಗ್ಯದಲ್ಲಿ ಚಂದ್ರ ಅಪೇಕ್ಷಿತ ವಿಚಾರಗಳಲ್ಲಿ ಸಫಲತೆ, ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ಹೂಡಿಕೆಗಳಿಂದ ಅಲ್ಪ ಲಾಭವಾಗಲಿದೆ.
ವೃಷಭ ರಾಶಿಯವರ ಭವಿಷ್ಯ:
ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡ ಇರುತ್ತದೆ. ಕುಟುಂಬದೊಂದಿಗೆ ದೂರದ ಪ್ರಯಾಣ ಸಾಧ್ಯತೆ ಇದೆ.
ಮಿಥುನ ರಾಶಿಯವರ ಭವಿಷ್ಯ:
ಮನೆಯಲ್ಲಿ ಏನಾದರೂ ಕಿರಿಕಿರಿ ಉಂಟಾಗಬಹುದು. ಬಂಧುಗಳೊಟ್ಟಿಗೆ ಸಮಯ ಕಳೆಯುವ ಸುಯೋಗ. ವೃತ್ತಿ ರಂಗದಲ್ಲಿ ಶುಭವಾಗಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ:
ಸಾಹಸ ಕಾರ್ಯಾಧಿಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಕುಟುಂಬದವರೊಂದಿಗೆ ಸಹಕಾರ ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಶುಭವಾಗಲಿದೆ.
ಇಂದಿನ ರಾಶಿ ಭವಿಷ್ಯ 11-03-2026
ಮೇಷ ರಾಶಿಯವರ ಭವಿಷ್ಯ:
ಭೂ ವಿಚಾರಗಳಲ್ಲಿ ನಷ್ಟ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳೊಂದಿಗೆ ಸಮಾಗಮವಾಗಲಿದೆ. ಮಿತ್ರರೊಟ್ಟಿಗೆ ಕಲಹಗಳಾಗಬಹುದು. ಸಮಾಧಾನದಿಂದ ಕೆಲಸ ಮಾಡುವುದರಿಂದ ಸಫಲತೆ ಕಾಣುವಿರಿ.
ವೃಷಭ ರಾಶಿಯವರ ಭವಿಷ್ಯ:
ಖರ್ಚಿನ ಮೇಲೆ ಹಿಡಿತವಿರಲಿ. ದುಂದುವೆಚ್ಚ ಮಾಡುವ ಯೋಗವಿದೆ. ನೀವು ಅತಿಯಾಗಿ ನಂಬಿದವರಿಂದಲೇ ನೋವುಂಟಾಗಬಹುದು. ವಾಹನ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಶುಭ.
ಮಿಥುನ ರಾಶಿಯವರ ಭವಿಷ್ಯ:
ಕುಟುಂಬದಲ್ಲಿ ವೈರತ್ವ ಬರಬಹುದು. ಕೋರ್ಟು-ಕಚೇರಿ ವಿಚಾರಗಳಲ್ಲಿ ಬೇಸರ ಉಂಟಾಗಬಹುದು. ಶಾಂತ ಚಿತ್ತರಾಗಿ ಮುಂದುವರೆಯುವುದು ಒಳ್ಳೆಯದು.
ಇಂದಿನ ರಾಶಿ ಭವಿಷ್ಯ 10-03-2026
ಮೇಷ ರಾಶಿಯವರ ಭವಿಷ್ಯ:
ಗುತ್ತಿಗೆದಾರರಿಗೆ ಶುಭಪ್ರದವಾಗಿದೆ. ಪ್ರಯಾಣದಲ್ಲಿ ಅಷ್ಟು ಉತ್ತಮವಾಗಿಲ್ಲ. ಸುಬ್ರಹ್ಮಣ್ಯನ ಪ್ರಾರ್ಥನೆಯಿಂದ ಶುಭವಾಗಲಿದೆ.
ವೃಷಭ ರಾಶಿಯವರ ಭವಿಷ್ಯ:
ಈ ರಾಶಿಯ ವಿನ್ಯಾಸಕಾರರಿಗೆ ಶುಭ. ಆದರೆ, ನರ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ವಿದೇಶ ಪ್ರಯಾಣಕ್ಕೆ ಸಂಬಂಧಿಸಿದಂತೆ ಅಡೆತಡೆಗಳುಂಟಾಗಬಹುದು.
ಮಿಥುನ ರಾಶಿಯವರ ಭವಿಷ್ಯ:
ಆರಕ್ಷಕರು, ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವ ಈ ರಾಶಿಯವರಿಗೆ ಒತ್ತಡ ಇರಲಿದೆ. ಕುಸರಿ ಕೆಲಸ ಮಾಡುವವರಿಗೆ ಲಾಭ. ಕಾನೂನು ವಿಚಾರಗಳಲ್ಲಿ ಅಡೆತಡೆಗಳುಂಟಾಗಬಹುದು.
ಇಂದಿನ ರಾಶಿ ಭವಿಷ್ಯ 09-03-2026
ಮೇಷ ರಾಶಿಯವರ ಭವಿಷ್ಯ:
ಮಾನಸಿಕ ಒತ್ತಡಗಳು ಇರಬಹುದು. ಹಠಾತ್ ಪ್ರಯಾಣ ಕೈಗೊಳ್ಳಬೇಕಾಗಬಹುದು. ಹೃದಯ ಸಂಬಂಧಿತ ತೊಂದರೆಗಳು ನಿಮ್ಮನ್ನು ಬಾಧಿಸಬಹುದು.
ವೃಷಭ ರಾಶಿಯವರ ಭವಿಷ್ಯ:
ಆರ್ಥಿಕ ಪ್ರಗತಿ, ಭೂ-ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣದಲ್ಲಿ ಎಚ್ಚರವಹಿಸಿ.
ಮಿಥುನ ರಾಶಿಯವರ ಭವಿಷ್ಯ:
ಇಂದು ಧನಲಾಭವಾಗಲಿದೆ. ಮಾತಿನ ಮೇಲೆ ಹಿಡಿತವಿರಲಿ. ಇಲ್ಲವೇ ಗೌರವಕ್ಕೆ ಧಕ್ಕೆಯಾಗಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ:
ವಾಹನ ಖರೀದಿಗೆ ಶುಭವಾಗಲಿದೆ. ಆತ್ಮವಿಶ್ವಾಸದಿಂದ ಮಾಡುವ ಪ್ರತಿ ಕೆಲಸದಲ್ಲೂ ಜಯವಾಗಲಿದೆ. ವಿರೋಧಿಗಳೊಟ್ಟಿಗೆ ಜಯ ಸಿಗಲಿದೆ.
Sun-Moon conjunction: ಜ್ಯೋತಿಷ್ಯದ ಪ್ರಕಾರ, ನಮ್ಮ ಜೀವನದ ಫಲಿತಾಂಶಗಳು ನಮ್ಮ ಕರ್ಮವನ್ನ ಅವಲಂಬಿಸಿರುತ್ತದೆ. ಆದರೆ ಶೀಘ್ರದಲ್ಲೇ ಸೂರ್ಯ ಮತ್ತು ಚಂದ್ರರು ಸಂಯೋಗ ಹೊಂದುತ್ತಾರೆ. ಈ ಸಮಯದಲ್ಲಿ ವಿಶೇಷವಾಗಿ ಎರಡು ರಾಶಿಯವರ ಜೀವನವೇ ಸಂಪೂರ್ಣವಾಗಿ ಬದಲಾಗುತ್ತದೆ. ಅದೃಷ್ಟದ ಬೆಂಬಲದಿಂದ ಆ ರಾಶಿಯವರು ಅಪಾರ ಸುಖ-ಸಂಪತ್ತು ಗಳಿಸುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಇಂದಿನ ರಾಶಿ ಭವಿಷ್ಯ 05-03-2026
ಮೇಷ ರಾಶಿಯವರ ಭವಿಷ್ಯ:
ಇಂದು ನಿಮ್ಮ ಸೋದರಿಯರೊಟ್ಟಿಗೆ ಮನಃಸ್ಥಾಪ ಉಂಟಾಗಲಿದೆ. ರಾಜಕೀಯದಲ್ಲಿರುವವರಿಗೆ ಅಪಮಾನಗಳಾಗಬಹುದು. ಶತ್ರುಗಳ ಭೀತಿ ಕಾಡಬಹುದು.
ವೃಷಭ ರಾಶಿಯವರ ಭವಿಷ್ಯ:
ಶತ್ರುಗಳ ವಿರುದ್ಧ ಜಯ, ಸಂಧಾನಗಳು ಯಶಸ್ವಿಯಾಗಲಿವೆ. ದೂರದ ಪ್ರಯಾಣ ಮಾಡುವ ಸುಯೋಗ. ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ದೊರೆಯಲಿದೆ.
ಮಿಥುನ ರಾಶಿಯವರ ಭವಿಷ್ಯ:
ಪ್ರಯಾಣದಲ್ಲಿ ಎಚ್ಚರವಾಗಿರಿ. ದೀರ್ಘಕಾಲದ ವ್ಯಾದಿಗಳು ನಿಮ್ಮನ್ನು ಬಾಧಿಸಬಹುದು. ಕುಲದೇವರ ಪ್ರಾರ್ಥನೆ ಮಾಡುವುದು ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.