Fat Burning Tips: ಸ್ಲಿಮ್ ಆದ, ಫಿಟ್ ಆಗಿರುವ ಫಿಗರ್ ಎಲ್ಲರೂ ಅಚ್ಚುಮೆಚ್ಚು. ಆದರೆ, ಕೆಲವರಿಗೆ ನಿತ್ಯ ವ್ಯಾಯಾಮ ಮಾಡುವುದು, ಜಿಮ್‌ಗೆ ಹೋಗುವುದು ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸುವುದು ಎಂದರೆ ಅಲರ್ಜಿ. ಹಾಗಾಗಿ, ಸಣ್ಣಗಾಗಬೇಕು ಎಂಬ ಬಯಕೆ ಇದ್ದರೂ ಅದು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಕಟ್ಟುನಿಟ್ಟಿನ ಡಯಟ್, ನಿತ್ಯ ಯೋಗ, ವ್ಯಾಯಾಮದಂತಹ ಹಲವು ಕಸರತ್ತು ಮಾಡಿದರೂ ಸಣ್ಣಗಾಗುವುದಿಲ್ಲ. ಆದರೆ, ಕೆಲವು ಮನೆಮದ್ದುಗಳನ್ನು ನಿಮ್ಮ ದಿನಚರಿಯ ಭಾಗವಾಗಿಸುವ ಮೂಲಕ ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?
ಹೌದು, ನೀವು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಬಹುದು. ಇದು ನಿಮ್ಮ ಬೆಲ್ಲಿ ಫ್ಯಾಟ್ ಅನ್ನು ಸುಲಭವಾಗಿ ಕರಗಿಸುವುದರ ಜೊತೆಗೆ ನಿಮ್ಮನ್ನು ಫಿಟ್ ಆಗಿಡಲು ಕೂಡ ಸಹಾಯ ಮಾಡುತ್ತದೆ. ನಿತ್ಯ ನಿಮ್ಮ ಡಯಟ್ನಲ್ಲಿ ಕೆಲವು ಆರೋಗ್ಯಕರ ಪಾನೀಯಗಳನ್ನು ಸೇರಿಸುವುದರಿಂದ ನೈಸರ್ಗಿಕವಾಗಿ ನಿಮ್ಮ ಬೆಲ್ಲಿ ಫ್ಯಾಟ್ ಕರಗಿಸಬಹುದು.
ಸುಲಭವಾಗಿ ಹೊಟ್ಟೆ ಕರಗಿಸಲು ಈ ಪಾನೀಯಗಳನ್ನು ಟ್ರೈ ಮಾಡಿ ನೋಡಿ:
ಗ್ರೀನ್ ಜ್ಯೂಸ್:
ಹಸಿರು ಸೊಪ್ಪು, ತರಕಾರಿ ಮತ್ತು ಹಣ್ಣುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಅನೇಕ ರೀತಿಯ ಹಣ್ಣು-ತರಕಾರಿಗಳು ತೂಕ ನಷ್ಟಕ್ಕೂ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಕೆಲವು ಹಸಿರು ಹಣ್ಣು-ತರಕಾರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವುಗಳ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿ. ಉದಾಹರಣೆಗೆ ನಿಮ್ಮ ಡಯಟ್ನಲ್ಲಿ ಸೌತೆಕಾಯಿ, ಇಸೋರೆಕಾಯಿ ಮಾತು ಹಾಗಲಕಾಯಿ ಜ್ಯೂಸ್ ಸೇರಿಸುವುದರಿಂದ ಸುಲಭವಾಗಿ ತೂಕ ಇಳಿಸಬಹುದು.
ಇದನ್ನೂ ಓದಿ- Hot Water Shower : ನೀವು ಚಳಿಗಾಲದಲ್ಲಿ ಬಿಸಿನೀರು ಸ್ನಾನ ಮಾಡುತ್ತೀರಾ? ಹಾಗಿದ್ರೆ, ಜಾಗೃತ!
ಬ್ಲಾಕ್ ಕಾಫಿ:
ಸಾಮಾನ್ಯವಾಗಿ ಕೆಲವರಿಗೆ ನಿತ್ಯ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ನೀವು ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿದ್ದರೆ ಬ್ಲಾಕ್ ಕಾಫಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಬ್ಲಾಕ್ ಕಾಫಿಯಲ್ಲಿರುವ ಕೆಫೀನ್ ಚಯಾಪಚಯವನ್ನು ಹೆಚ್ಚಿಸುತ್ತದೆ. ಜೊತೆಗೆ ಇದರಲ್ಲಿರುವ ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ತೂಕ ಇಳಿಸಲು ಸಹಾಯ ಮಾಡುತ್ತದೆ.
ಕೊತ್ತಂಬರಿ ನೀರು:
ಎಲ್ಲರ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೊತ್ತಂಬರಿ ಬೀಜ ಕೂಡ ಬೆಲ್ಲಿ ಫ್ಯಾಟ್ ಕರಗಿಸಲು, ತೂಕ ಇಳಿಸಲು ಬಹಳ ಪ್ರಯೋಜನಕಾರಿ ಆಗಿದೆ. ಕೊತ್ತಂಬರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ನಿತ್ಯ ಬೆಳಿಗ್ಗೆ ಅದನ್ನು ಸೋಸಿ, ಆ ನೀರನ್ನು ಕುಡಿಯಬೇಕು. ಇದು ಚಯಾಪಚಯವನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಾತ್ರವಲ್ಲ, ಅದರಲ್ಲಿರುವ ಪೋಷಕಾಂಶಗಳು ಕ್ಯಾಲೋರಿಗಳನ್ನೂ ಸುಡುವಲ್ಲಿ ಪರಿಣಾಮಕಾರಿ ಆಗಿದ್ದು ತೂಕವನ್ನು ಕಡಿಮೆ ಮಾಡುತ್ತವೆ.
ಆಪಲ್ ಸೈಡರ್ ವಿನೆಗರ್:
ದೇಹದಲ್ಲಿ ದೀರ್ಘಕಾಲದಿಂದ ಶೇಖರಣೆ ಆಗಿರುವ ಕೊಬ್ಬನ್ನು ಕರಗಿಸುವಲ್ಲಿ ಆಪಲ್ ಸೈಡರ್ ವಿನೆಗರ್ ಅತ್ಯುತ್ತಮ. ಅದರಲ್ಲೂ ಇದನ್ನು ಬಿಸಿ ನೀರಿನೊಂದಿಗೆ ಕುಡಿಯುವುದರಿಂದ ಇದರಿಂದ ಹಲವು ಪ್ರಯೋಜನಗಳು ಲಭ್ಯವಿದೆ. ಪ್ರತಿ ದಿನ ಬೆಳಿಗ್ಗೆ ಉಪಹಾರಕ್ಕೂ ಮೊದಲು ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ತೂಕ ನಷ್ಟ ಮಾತ್ರವಲ್ಲ, ಇದು ಡಯಾಬಿಟಿಸ್ ನಿಯಂತ್ರಣಕ್ಕೂ ಸಹಕಾರಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Tea And Coffee Cravings : ಚಳಿಗಾಲದ ಶೀತದ ಸಮಸ್ಯೆಗೆ ಪದೇ ಪದೇ ಕಾಫಿ - ಟೀ ಕುಡಿಯುತ್ತೀರಾ? ಹಾಗಿದ್ರೆ, ಎಚ್ಚರ!
ಗ್ರೀನ್ ಟೀ:
ತೂಕ ಇಳಿಕೆ ಪ್ರಕ್ರಿಯೆಯಲ್ಲಿ ನಮ್ಮಲ್ಲಿ ಸಾಕಷ್ಟು ಮಂದಿ ಮೊದಲು ಗ್ರೀನ್ ಟೀ ಅನ್ನು ಆರಿಸಿಕೊಳ್ಳುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಗ್ರೀನ್ ಟೀಯಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಕಡಿಮೆ ಇದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದರಿಂದ ಸುಲಭವಾಗಿ ತೂಕವನ್ನು ನಿಯಂತ್ರಿಸಬಹುದು ಎನ್ನಲಾಗುವುದು.
ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಮನೆ ಮದ್ದುಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯರನ್ನು ಸಂಪರ್ಕಿಸಿ. Zee ಮೀಡಿಯಾ ಇದನ್ನು ಖಚಿತ ಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.