Matches Made In Heaven: ಸ್ವರ್ಗದಲ್ಲಿ ನಿರ್ಮಾಣಗೊಳ್ಳುತ್ತವೆ ಈ ರಾಶಿಗಳ ಜೋಡಿಗಳು, ನಿಮ್ಮ ರಾಶಿ ಇದೆಯಾ ಪರಿಶೀಲಿಸಿ!

Lucky Zodiac Signs Couples: ವ್ಯಕ್ತಿತ್ವಗಳ ಲಕ್ಷಣಗಳು ಹಾಗೂ ಸಂಬಂಧಗಳ ಪೂರ್ವಾನುಮಾನವನ್ನು ಪತ್ತೆ ಹಚ್ಚಲು ಅನಾದಿಕಾಲದಿಂದಲೂ ರಾಶಿಗಳನ್ನು ಬಳಸಲಾಗುತ್ತದೆ. ಆದರೆ, ಕೆಲವರಿಗೆ ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ವಿಶ್ವಾಸವೇ ಇರುವುದಿಲ್ಲ. 

Written by - Nitin Tabib | Last Updated : Apr 28, 2023, 09:33 PM IST
  • ಮಿಥುನ ಮತ್ತು ತುಲಾ ಎರಡೂ ರಾಶಿಯವರು ಸಾಮಾಜಿಕ ಮತ್ತು ಬೌದ್ಧಿಕ ಜೀವಿಗಳು.
  • ಇತರರೊಂದಿಗೆ ಸಂವಹನ ಮಾಡಲು ಮತ್ತು ಸಂಪರ್ಕಿಸಲು ಹೆಚ್ಚು ಇಷ್ಟಪಡುತ್ತಾರೆ.
  • ಇವರು ತಮ್ಮ ಸುತ್ತಮುತ್ತಲಿನ ಸೌಂದರ್ಯ ಮತ್ತು ಸಾಮರಸ್ಯವನ್ನು ಸಹ ಗೌರವಿಸುತ್ತಾರೆ.
Matches Made In Heaven: ಸ್ವರ್ಗದಲ್ಲಿ ನಿರ್ಮಾಣಗೊಳ್ಳುತ್ತವೆ ಈ ರಾಶಿಗಳ ಜೋಡಿಗಳು, ನಿಮ್ಮ ರಾಶಿ ಇದೆಯಾ ಪರಿಶೀಲಿಸಿ! title=
ಸ್ವರ್ಗದಲ್ಲಿ ನಿರ್ಮಾಣಗೊಳ್ಳುವ ರಾಶಿ ಜೋಡಿಗಳು!

Lucky Zodiac Signs Couples: ವ್ಯಕ್ತಿತ್ವಗಳ ಲಕ್ಷಣಗಳು ಹಾಗೂ ಸಂಬಂಧಗಳ ಪೂರ್ವಾನುಮಾನವನ್ನು ಪತ್ತೆ ಹಚ್ಚಲು ಅನಾದಿಕಾಲದಿಂದಲೂ ರಾಶಿಗಳನ್ನು ಬಳಸಲಾಗುತ್ತದೆ. ಆದರೆ, ಕೆಲವರಿಗೆ ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ವಿಶ್ವಾಸವೇ ಇರುವುದಿಲ್ಲ. ಆದರೂ ಕೂಡ ಬಹುತೇಕ ಜನರು ರಾಶಿಗಳ ಸ್ವಭಾವ ಹಾಗೂ ಇತರರ ಜೊತೆಗಿನ ತಮ್ಮ ಹೊಂದಾಣಿಕೆಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ. 

ಮೇಷ ಮತ್ತು ಕುಂಭ
ಮೇಷ ಹಾಗೂ ಕುಂಭ ಎರಡೂ ಸ್ವತಂತ್ರ ಮತ್ತು ಸಾಹಸಪ್ರಿಯ ರಾಶಿಗಳಾಗಿದ್ದು, ಎರಡೂ ರಾಶಿಯ ಜನರು ಅಪಾಯಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅವರು ಸ್ವತಂತ್ರವಾಗಿ ಪ್ರೀತಿಯನ್ನು ಸಹ ಹಂಚಿಕೊಳ್ಳುತ್ತಾರೆ ಮತ್ತು ಪರಸ್ಪರರನ್ನು ಕಟ್ಟಿಹಾಕಲು ಇಷ್ಟಪಡುವುದಿಲ್ಲ. ಇದು ಇವರನ್ನು ಸಂಬಂಧದಲ್ಲಿ ಉಸಿರುಗಟ್ಟಿಸುವ ರೀತಿಯಲ್ಲಿ ಮಾಡುವುದಿಲ್ಲ ಮತ್ತು ಉತ್ತಮ ಹೊಂದಾಣಿಕೆಯನ್ನು ನಿರ್ಮಿಸುತ್ತದೆ. ಮೇಷ ರಾಶಿಯ ಉಗ್ರ ಶಕ್ತಿ ಮತ್ತು ಕುಂಭ ರಾಶಿಯ ನಾವೀನ್ಯಭರಿತ ಆಲೋಚನೆಗಳು ಇಬ್ಬರನ್ನು ಅತ್ಯಾಕರ್ಷಕ ಮತ್ತು ಕ್ರಿಯಾತ್ಮಕ ಸಂಗಾತಿಗಳಾಗಿ ಮಾಡುತ್ತದೆ.

ವೃಷಭ ಮತ್ತು ಕರ್ಕ
ವೃಷಭ ರಾಶಿ ಮತ್ತು ಕರ್ಕ ಎರಡೂ ರಾಶಿಗಳು ಡೌನ್ ಟು ಅರ್ಥ್ ಆಗಿರುತ್ತಾರೆ ಹಾಗೂ ಪೋಷಣೆಯನ್ನು ನೀಡುವವರಾಗಿರುತ್ತಾರೆ. ಇವರು ಸ್ತರತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಇಬ್ಬರು ಕೂಡ ಮನೆ ಮತ್ತು ಕುಟುಂಬದ ಸೌಕರ್ಯಗಳ ಆಳವಾದ ಮೆಚ್ಚುಗೆಯನ್ನು ಹೊಂದಿರುತ್ತಾರೆ. ಇಬ್ಬರು ಒಂದೇ ರೀತಿಯ ಮೌಲ್ಯಗಳನ್ನು ಹಂಚಿಕೊಳ್ಳುವುದರಿಂದ ಮತ್ತು ಅವರಿಗೆ ಅಗತ್ಯವಿರುವ ಭಾವನಾತ್ಮಕ ಬೆಂಬಲವನ್ನು ಪರಸ್ಪರ ಒದಗಿಸುವವರಾಗಿರುವ ಕಾರಣ ಪರ್ಫೆಕ್ಟ್ ಕಪಲ್ ಆಗಿ ಹೊರಹೊಮ್ಮುತ್ತಾರೆ.  ವೃಷಭ ರಾಶಿಯ ಪ್ರಾಯೋಗಿಕತೆ ಮತ್ತು ಕರ್ಕ ರಾಶಿಯ ಸೂಕ್ಷ್ಮತೆಯು ಇಬ್ಬರ ಮಧ್ಯೆ ಪ್ರೀತಿಯ ಮತ್ತು ಸಾಮರಸ್ಯದ ಜೋಡಿಯನ್ನು ರೂಪಿಸುತ್ತದೆ.

ಮಿಥುನ ಮತ್ತು ತುಲಾ 
ಮಿಥುನ ಮತ್ತು ತುಲಾ ಎರಡೂ ರಾಶಿಯವರು ಸಾಮಾಜಿಕ ಮತ್ತು ಬೌದ್ಧಿಕ ಜೀವಿಗಳು. ಇತರರೊಂದಿಗೆ ಸಂವಹನ ಮಾಡಲು ಮತ್ತು ಸಂಪರ್ಕಿಸಲು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ಸೌಂದರ್ಯ ಮತ್ತು ಸಾಮರಸ್ಯವನ್ನು ಸಹ ಗೌರವಿಸುತ್ತಾರೆ. ಇವರೂ ಕೂಡ  ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುವುದರಿಂದ ಮತ್ತು ಉತ್ತೇಜಕ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಇದೊಂದು ಪರ್ಫೆಕ್ಟ್ ಜೋಡಿ ಎಂದು ಹೇಳಬಹುದು. ಮಿಥುನ ರಾಶಿಯ ಚಾಣಾಕ್ಷತೆ ಮತ್ತು ಮೋಡಿ ಹಾಗೂ  ತುಲಾ ರಾಶಿಯ ರಾಜತಾಂತ್ರಿಕತೆಯು ಉಭಯರ ನಡುವೆ ವಿನೋದ ಮತ್ತು ಸಮತೋಲಿತ ಪಾರ್ಟ್ನರ್ಶಿಪ್ ಗೆ ಕಾರಣವಾಗುತ್ತದೆ.

ಸಿಂಹ ಮತ್ತು ಧನು
ಸಿಂಹ ಮತ್ತು ಧನು ರಾಶಿಯವರು ಭಾವೋದ್ರಿಕ್ತ ಮತ್ತು ಆಶಾವಾದಿಗಳಾಗಿದ್ದು, ಇವರು ಮೋಜು ಮಾಡಲು ಮತ್ತು ಜಗತ್ತನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಇವರು  ಬಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ತಮ್ಮ  ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುತ್ತಾರೆ. ಇದು ಅವರ ಅವರ ಮಧ್ಯದ  ಪರಿಪೂರ್ಣ ಹೊಂದಾಣಿಕೆಗೆ ಕಾರಣವಾಗುತ್ತದೆ, ಏಕೆಂದರೆ ಇವರು ತಮ್ಮ ಗುರಿಗಳಲ್ಲಿ ಪರಸ್ಪರನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಬೆಂಬಲವನ್ನು ನೀಡುತ್ತಾರೆ. ಸಿಂಹದ ಸೃಜನಶೀಲತೆ ಮತ್ತು ಧನು ರಾಶಿಯ ಸಾಹಸ ಮನೋಭಾವ ಇಬ್ಬರ ನಡುವೆ ಉತ್ತೇಜಕ ಮತ್ತು ರೋಮಾಂಚಕ ಪಾರ್ಟ್ನರ್ಶಿಪ್ ರಚಿಸುತ್ತದೆ.

ಕನ್ಯಾ ಮತ್ತು ಮಕರ
ಕನ್ಯಾರಾಶಿ ಮತ್ತು ಮಕರ ರಾಶಿಯವರು ಪ್ರಾಯೋಗಿಕ ಮತ್ತು ಶ್ರಮಶೀಲರು ಆಗಿರುತ್ತಾರೆ, ಇವರು ರಚನೆ ಮತ್ತು ಸಂಘಟನೆಯನ್ನು ಗೌರವಿಸುತ್ತಾರೆ. ಇವರು  ಜವಾಬ್ದಾರಿಯ ಬಲವಾದ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಅದರ ಬದ್ಧತೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಇದು ಅವರನ್ನು ಒಂದು ಪರಿಪೂರ್ಣ ಜೋಡಿಯನ್ನಾಗಿಸುತ್ತದೆ. ಏಕೆಂದರೆ ಇವರು ತಮ್ಮ ಗುರಿಗಳ ಕಡೆಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಮತ್ತು ಅದು ಇವರ ಸಂಬಂಧಕ್ಕೆ ಭದ್ರ ಬುನಾದಿಯನ್ನು ನೀಡುತ್ತದೆ. ವಿಸ್ತಾರದ ಮೇಲೆ ಕನ್ಯಾರಾಶಿಯ ಗಮನ ಮತ್ತು ಮಕರ ರಾಶಿಯ ಮಹತ್ವಾಕಾಂಕ್ಷೆ ಸ್ವಭಾವ ಇಬ್ಬರ ನಡುವೆ ಪರ್ಫೆಕ್ಟ್ ಮತ್ತು ಯಶಸ್ವಿ ಪಾಲುದಾರಿಕೆಯನ್ನು ರೂಪಿಸುತ್ತದೆ. 

ಇದನ್ನೂ ಓದಿ-Zodiac Signs: ಈ ರಾಶಿಗಳ ಹುಡುಗಿಯರನ್ನು ತಾಯಿ ಲಕ್ಷ್ಮಿಯ ರೂಪ ಎಂದು ಭಾವಿಸಲಾಗುತ್ತದೆ!

ವೃಶ್ಚಿಕ ಹಾಗೂ ಮೀನ
ವೃಶ್ಚಿಕ ಮತ್ತು ಮೀನ ರಾಶಿಗಳು ಅರ್ಥಗರ್ಭಿತ ಮತ್ತು ಭಾವನಾತ್ಮಕ ರಾಶಿಗಳಾಗಿವೆ, ಇವರು ತಮ್ಮ ಸಂಬಂಧಗಳಲ್ಲಿನ ಆಳ ಮತ್ತು ಅನ್ಯೋನ್ಯತೆಯನ್ನು ಗೌರವಿಸುತ್ತಾರೆ. ಇವರು ಜೀವನದ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಅಂಶಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುತ್ತಾರೆ. ಪರಸ್ಪರರ ಭಾವನಾತ್ಮಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಂಬಲಿಸಲು ಇದು ಅವರನ್ನು ಒಂದು ಪರ್ಫೆಕ್ಟ್ ಜೋಡಿಯನ್ನಾಗಿಸುತ್ತದೆ.  ವೃಶ್ಚಿಕ ರಾಶಿಯ ತೀವ್ರತೆ ಮತ್ತು ಮೀನ ರಾಶಿಯ ಪರಾನುಭೂತಿಯು ಇವರ ಮಧ್ಯೆ ಒಂದು ಉತ್ತಮ ಪಾಲುದಾರಿಕೆಯನ್ನು ರೂಪಿಸುತ್ತದೆ. 

ಇದನ್ನೂ ಓದಿ-Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News