ಕೈ ತಪ್ಪಿದ ಕೆಲಸ ಕೂಡಾ ಕೈಗೂಡುವಂತೆ ಮಾಡುತ್ತದೆ ಚಿಟಿಕೆ ಅರಶಿನ

ಅರಿಶಿನವಿಲ್ಲದೆ ವಿಷ್ಣುವಿನ ಆರಾಧನೆಯು ಅಪೂರ್ಣ ಎಂದೇ ನಂಬಲಾಗುತ್ತದೆ. ವಿಷ್ಣು ಮತ್ತು ಲಕ್ಷ್ಮೀ ದೇವಿಯ ಕೃಪೆಗೆ ಅರಿಶಿನವನ್ನು ಬಳಸಬೇಕು. 

Written by - Zee Kannada News Desk | Last Updated : Feb 24, 2022, 12:46 PM IST
  • ಅರಿಶಿನದ ಈ ಪರಿಹಾರಗಳನ್ನು ಪ್ರಯತ್ನಿಸಿ
  • ಈ ಪರಿಹಾರಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ
  • ವಿಷ್ಣು ಮತ್ತು ಲಕ್ಷ್ಮೀಯ ಕೃಪೆ ಲಭಿಸುತ್ತದೆ
ಕೈ ತಪ್ಪಿದ ಕೆಲಸ ಕೂಡಾ ಕೈಗೂಡುವಂತೆ ಮಾಡುತ್ತದೆ ಚಿಟಿಕೆ ಅರಶಿನ  title=
ಅರಿಶಿನದ ಈ ಪರಿಹಾರಗಳನ್ನು ಪ್ರಯತ್ನಿಸಿ (file photo)

ನವದೆಹಲಿ : ಮಸಾಲೆ ಮತ್ತು ಆಯುರ್ವೇದ ಔಷಧವಾಗಿ ಬಳಸಲಾಗುವ ಅರಿಶಿನಕ್ಕೆ ಜ್ಯೋತಿಷ್ಯದಲ್ಲಿಯೂ (turmeric in astrology)ಹೆಚ್ಚಿನ ಪ್ರಾಮುಖ್ಯತೆ ಇದೆ. ಅರಿಶಿನವು ಗುರು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಎಲ್ಲಾ ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ (turmeric benefits). ಅರಿಶಿನವಿಲ್ಲದೆ ವಿಷ್ಣುವಿನ ಆರಾಧನೆಯು ಅಪೂರ್ಣ ಎಂದೇ ನಂಬಲಾಗುತ್ತದೆ. ವಿಷ್ಣು ಮತ್ತು ಲಕ್ಷ್ಮೀ ದೇವಿಯ ಕೃಪೆಗೆ ಅರಿಶಿನವನ್ನು ಬಳಸಬೇಕು.   ಅರಿಶಿನದ ಈ ತಂತ್ರಗಳು ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತವೆ. 

ಯಶಸ್ಸನ್ನು ಪಡೆಯಲು ಪರಿಹಾರ: 
ನೀವು ಯಾವುದೇ ಪ್ರಮುಖ ಕೆಲಸಕ್ಕಾಗಿ ಹೊರಗಡೆ  ಹೋಗುವಾಗ ಗಣೇಶನಿಗೆ  (Lord Ganesha) ಅರಿಶಿನದ ಬೊಟ್ಟು ಇಡುವುದನ್ನು ಮರೆಯಬೇಡಿ. ನಂತರ ನಿಮ್ಮ ಹಣೆಯ ಮೇಲೆ ಕೂಡಾ ಅರಿಶಿನದ ತಿಲಕವನ್ನು (Turmeric tilak for success)ಹಚ್ಚಿ. ಹೀಗೆ ಮಾಡಿದರೆ ನಿಮ್ಮ ಕೆಲಸದಲ್ಲಿ  ಯಶಸ್ಸು ಸಿಗುತ್ತದೆ. ಯಾವುದೇ ಮಂಗಳಕರ ಮತ್ತು ಮಹತ್ವದ ಕೆಲಸವನ್ನು ಮಾಡಲು ಗುರುವಾರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. 

ಇದನ್ನೂ ಓದಿ : Vastu Tips: ನಿಮ್ಮ ಮನೆಯಲ್ಲೂ ಈ ವಸ್ತುಗಳು ಇದೆಯಾ? ಜೀವನವೇ ನಾಶವಾಗಬಹುದು ಎಚ್ಚರ!

ಹಣದ ಬಿಕ್ಕಟ್ಟು ನಿವಾರಣೆಗೆ ಪರಿಹಾರ: 
ಕೈಯಲ್ಲಿ ಅರಿಶಿನ ಮತ್ತು ಅಕ್ಷತೆಯನ್ನು ತೆಗೆದುಕೊಂಡು, ವಿಷ್ಣು ಸಹಸ್ರನಾಮವನ್ನು ಪಠಿಸಿ (Lord Vishnu). ಪೂರ್ಣ ಭಕ್ತಿಯಿಂದ ಮಾಡಿದ ಪಾರಾಯಣವು ನಿಮಗೆ ವಿಷ್ಣುವಿನ ಆಶೀರ್ವಾದವನ್ನು ನೀಡುತ್ತದೆ. ಕೆಲವೇ ದಿನಗಳಲ್ಲಿ ಹಣದ ಕೊರತೆಯು ನಿವಾರಣೆಯಾಗುತ್ತದೆ. 

ಕೈ ತಪ್ಪಿದ ಕೆಲಸ ಕೈಗೂಡಲು: 
ಕೆಲಸವು ಮತ್ತೆ ಮತ್ತೆ ಕೆಡುತ್ತಿದ್ದರೆ, ಬ್ರಾಹ್ಮಣನಿಗೆ ಬೇಳೆ, ಅರಿಶಿನ, ಹಳದಿ ಬಟ್ಟೆ, ರವೆ ಲಡ್ಡುಗಳನ್ನು ದಾನ ಮಾಡಿ. ಬಾಳೆಹಣ್ಣಿನ ಗಿಡದ  ಬೇರಿಗೆ ಅರಿಶಿನವನ್ನು (turmeric)ಹಾಕಿ.  ಇದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ. 

ಇದನ್ನೂ ಓದಿ: ಮಹಾಶಿವರಾತ್ರಿ ದಿನ ಮಾಡುವ ಈ ಕೆಲಸದಿಂದ ಸಿಗಲಿದೆ ಅಪೇಕ್ಷೆಯ ನೌಕರಿ, ಧನ ಸಂಪತ್ತು

ಬಹಳಷ್ಟು ಹಣ ಪಡೆಯಲು ಪರಿಹಾರ: 
ಕೆಂಪು ಬಟ್ಟೆಯಲ್ಲಿ 5 ಅರಿಶಿನಡ ತುಂಡನ್ನು ಕಟ್ಟಿ ಹಣವನ್ನು ಇಡುವ ಸ್ಥಳದಲ್ಲಿ ಅದನ್ನು ಇರಿಸಿ. ಈ ಸಮಯದಲ್ಲಿ,  ಸಂತೋಷ ಮತ್ತು ಸಮೃದ್ಧಿಯನ್ನು ನೀಡುವಂತೆ ಮಹಾ ಲಕ್ಷ್ಮೀ ಯನ್ನು (godess lakshmi)ಪ್ರಾರ್ಥಿಸಿ.  ಪತ್ರಿ ತಿಂಗಳು ಈ ಅರಶಿನವನ್ನು ಬದಲಾಯಿಸಿ. ಹಳೆಯ ಗಂಟುಗಳನ್ನು ದೇವಾಲಯದಂತಹ ಪವಿತ್ರ ಸ್ಥಳದ ಬಳಿ ಹೂತುಹಾಕಿ. ಕೆಲವೇ ದಿನಗಳಲ್ಲಿ ಆದಾಯ ಹೆಚ್ಚಾಗುತ್ತದೆ. 

ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರಲು ಪರಿಹಾರ: 
 ಸ್ನಾನದ ನೀರಿನಲ್ಲಿ ಅರಿಶಿನವನ್ನು ಬೆರೆಸುವುದು ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News