Astrology: ಮುಂದಿನ 4 ತಿಂಗಳು ಈ ರಾಶಿಯವರ ಮೇಲೆ ಲಕ್ಷ್ಮಿಯ ಕೃಪಾಕಟಾಕ್ಷ

ಮುಂದಿನ 4 ತಿಂಗಳುಗಳವರೆಗೆ ಕೆಲವು ರಾಶಿ ಚಕ್ರಗಳ ಗ್ರಹಗತಿಗಳು ತುಂಬಾ ಚೆನ್ನಾಗಿವೆ. ಈ ಸಮಯದಲ್ಲಿ ಈ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ.  

Written by - Yashaswini V | Last Updated : Aug 23, 2021, 07:35 AM IST
  • ಈ ರಾಶಿಯವರಿಗೆ ಮುಂದಿನ 4 ತಿಂಗಳು ಉತ್ತಮವಾಗಿರುತ್ತದೆ
  • ಈ 5 ರಾಶಿಯವರು ಶೀಘ್ರದಲ್ಲೇ ಶ್ರೀಮಂತರಾಗುತ್ತಾರೆ
  • ಈ ರಾಶಿಯವರಿಗೆ ಸಂಪತ್ತಿನ ದೇವತೆ, ಲಕ್ಷ್ಮಿ ದೇವಿಯು ವಿಶೇಷ ಅನುಗ್ರಹವನ್ನು ನೀಡುತ್ತಾಳೆ
Astrology: ಮುಂದಿನ 4 ತಿಂಗಳು ಈ ರಾಶಿಯವರ ಮೇಲೆ ಲಕ್ಷ್ಮಿಯ ಕೃಪಾಕಟಾಕ್ಷ title=
Know the 5 lucky zodiac signs

ಬೆಂಗಳೂರು: ಗ್ರಹಗಳ ಸ್ಥಾನ ಬದಲಾದಂತೆ ದ್ವಾದಶ ರಾಶಿಗಳ ಅದೃಷ್ಟವೂ ಬದಲಾಗುತ್ತದೆ. ಗ್ರಹಗಳ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ (Zodiac Signs) ಮಂಗಳಕರವಾಗಿದ್ದರೆ, ಕೆಲವು ರಾಶಿಯವರಿಗೆ ಅಶುಭ ಸಂಕೇತವಾಗಿರುತ್ತವೆ. ಇತ್ತೀಚಿನ ಗ್ರಹ ಬದಲಾವಣೆಗಳು (Grah Parivartan) ಮತ್ತು ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಮುಂದಿನ 4 ತಿಂಗಳುಗಳು 5 ರಾಶಿಗಳಿಗೆ ಬಹಳ ಅದ್ಭುತವಾಗಿರುತ್ತದೆ. ಈ ವರ್ಷದ ಕೊನೆಯ ತಿಂಗಳುಗಳಲ್ಲಿ, ಈ ರಾಶಿಚಕ್ರದ ಜನರ ಮೇಲೆ ಹಣದ ಮಳೆ ಸುರಿಯುತ್ತದೆ ಎಂದು ಹೇಳಲಾಗುತ್ತಿದೆ. ದೀರ್ಘಕಾಲದಿಂದ ಹಣದ ಕೊರತೆಯಿಂದ ತೊಂದರೆಗೀಡಾದವರು, ಈಗ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುವ ದಿನಗಳು ಸನಿಹದಲ್ಲಿದೆ. ಆ ರಾಶಿಗಳು ಯಾವುವು, ಯಾವ ರಾಶಿಯ ಮೇಲೆ ಲಕ್ಷ್ಮಿಯು ವಿಶೇಷ ಅನುಗ್ರಹವನ್ನು ನೀಡುತ್ತಾಳೆ ಎಂದು ತಿಳಿಯೋಣ.

ಈ ರಾಶಿಯವರ ಮೇಲೆ ಲಕ್ಷ್ಮಿಯ ಕೃಪಾಕಟಾಕ್ಷ:
ಮೇಷ ರಾಶಿ:
ಈ ರಾಶಿಯ ಜನರಿಗೆ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಹೊಸ ಆದಾಯದ ಮೂಲಗಳು ಉಳಿತಾಯವನ್ನು ತರುತ್ತವೆ ಮತ್ತು ನಿಮ್ಮ ಜೀವನದಲ್ಲಿ ಸೌಕರ್ಯಗಳನ್ನು ಹೆಚ್ಚಿಸುತ್ತದೆ. ಕಾರು ಖರೀದಿ ಯೋಜನೆಗಳು ಯಶಸ್ವಿಯಾಗಬಹುದು.

ಇದನ್ನೂ ಓದಿ-  Swapna Shastra: ಅದೃಷ್ಟವಂತರ ಕನಸಿನಲ್ಲಷ್ಟೇ ಕಾಣುತ್ತದೆಯಂತೆ ಈ ಜೀವಿಗಳು..! ನೀವು ಆ ಭಾಗ್ಯಶಾಲಿಗಳೇ?

ಸಿಂಹ ರಾಶಿ: ಈ ಸಮಯ ಸಿಂಹ ರಾಶಿಯವರಿಗೆ ಎರಡು ರೀತಿಯಲ್ಲಿ ಲಾಭದಾಯಕವಾಗಿದೆ. ಒಂದು, ಅವರ ಆದಾಯ ಹೆಚ್ಚಾಗುತ್ತದೆ. ಎರಡನೆಯದಾಗಿ, ಹಣವನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಭವಿಷ್ಯದಲ್ಲಿ ಅವರಿಗೆ ಪ್ರಯೋಜನಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ, ಹಣದ ವಿಷಯದಲ್ಲಿ ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರವು ನಷ್ಟವನ್ನು ಉಂಟುಮಾಡಬಹುದು. ಈ ಜನರು ಡಿಸೆಂಬರ್ ತಿಂಗಳಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭವನ್ನು (Lucky Zodiac Signs) ಪಡೆಯುತ್ತಾರೆ.

ಕನ್ಯಾ ರಾಶಿ: ಈ ರಾಶಿಯ ಜನರು ಈ ಸಮಯದಲ್ಲಿ ಸಾಕಷ್ಟು ಹಣವನ್ನು ಪಡೆಯುತ್ತಾರೆ, ಆದರೆ ಖರ್ಚುಗಳು ಕೂಡ ಇರುತ್ತದೆ. ಬಡ್ತಿ ಇತ್ಯಾದಿಗಳಿಂದಾಗಿ ಪಡೆದ ಆರ್ಥಿಕ ಲಾಭಗಳು ದೀರ್ಘಕಾಲದವರೆಗೆ ಇರುತ್ತದೆ. ಅದೇ ಸಮಯದಲ್ಲಿ, ಉದ್ಯಮಿಗಳು ಸಹ ದೊಡ್ಡ ಲಾಭಗಳನ್ನು ಗಳಿಸಬಹುದು, ಅದು ಅವರ ವರ್ಷವನ್ನು ಅತ್ಯುತ್ತಮವಾಗಿಸಬಹುದು.

ತುಲಾ ರಾಶಿ: ಈಗ ಈ ರಾಶಿಚಕ್ರದ ಜನರ ಜೀವನದಲ್ಲಿ ಪರಿಹಾರದ ದಿನಗಳು ಬಂದಿವೆ. ದೀರ್ಘಕಾಲದ ಸಮಸ್ಯೆಗಳು, ಹಣದ ಸಮಸ್ಯೆಗಳು (Financial Problems) ಈಗ ದೂರವಾಗುತ್ತವೆ. ಹಣ ಗಳಿಸುವ ಹೊಸ ಅವಕಾಶಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಆ ಹಣವನ್ನು ಸರಿಯಾಗಿ ಬಳಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ.

ಇದನ್ನೂ ಓದಿ- Raksha Bandhan 2021:500 ವರ್ಷಗಳ ನಂತರ ರೂಪುಗೊಂಡಿದೆ ಮಹಾಯೋಗ – 6 ರಾಶಿಗಳಿಗೆ ಬಂಪರ್ ಅದೃಷ್ಟ.!

ಕುಂಭ ರಾಶಿ: ಮುಂದಿನ 4 ತಿಂಗಳುಗಳು ಈ ರಾಶಿಯ ಜನರಿಗೆ ತುಂಬಾ ಒಳ್ಳೆಯದು. ಅವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ನೀವು ಉತ್ತಮ ಸ್ಥಾನವನ್ನು ಪಡೆಯಬಹುದು. ಅಧಿಕ ಆರ್ಥಿಕ ಲಾಭವನ್ನೂ ಪಡೆಯುತ್ತೀರಿ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News