ಶುಕ್ರ ಸಂಚಾರ ಪರಿಣಾಮ: ಇಂದಿನಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

ಶುಕ್ರ ರಾಶಿ ಪರಿವರ್ತನೆಯ ಪರಿಣಾಮ: ಮೀನ ರಾಶಿಯಲ್ಲಿ ಶುಕ್ರನ ಸಂಚಾರವು ಎಲ್ಲಾ ಜನರ ಸಂಪತ್ತು, ಸಂತೋಷ, ಪ್ರಣಯ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಏಪ್ರಿಲ್ 27 ರಂದು ಶುಕ್ರನ ರಾಶಿ ಬದಲಾವಣೆಯ ಪರಿಣಾಮ 12 ರಾಶಿಗಳ ಮೇಲೆ ಹೇಗೆ ಇರುತ್ತದೆ ಎಂದು ತಿಳಿಯೋಣ.

Written by - Yashaswini V | Last Updated : Apr 27, 2022, 08:49 AM IST
  • ಇಂದು ಅಂದರೆ 27ನೇ ಏಪ್ರಿಲ್ 2022 ರಂದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಶುಕ್ರ ಗ್ರಹವು ಶುಭ ಸ್ಥಾನದಲ್ಲಿದ್ದಾಗ ಆರ್ಥಿಕ ಸಮೃದ್ಧಿಯಾಗುತ್ತದೆ.
  • ಐಷಾರಾಮಿ ಜೀವನ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ.
ಶುಕ್ರ ಸಂಚಾರ ಪರಿಣಾಮ: ಇಂದಿನಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ  title=
Venus transit effects

ಶುಕ್ರ ರಾಶಿ ಪರಿವರ್ತನೆಯ ಪರಿಣಾಮ:  ಪ್ರೀತಿ, ಪ್ರಣಯ, ಸಂತೋಷ, ಸೌಂದರ್ಯದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನು  ಇಂದು ಅಂದರೆ 27ನೇ ಏಪ್ರಿಲ್ 2022 ರಂದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರ ಗ್ರಹವು ಶುಭ ಸ್ಥಾನದಲ್ಲಿದ್ದಾಗ ಆರ್ಥಿಕ ಸಮೃದ್ಧಿಯಾಗುತ್ತದೆ. ಐಷಾರಾಮಿ ಜೀವನ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ. ಮೀನ ರಾಶಿಯಲ್ಲಿ ಶುಕ್ರನ ಪ್ರವೇಶವು ಕೆಲವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಬಹುದು ಮತ್ತು ಕೆಲವರಿಗೆ ಕೆಟ್ಟ ಫಲಿತಾಂಶಗಳನ್ನು ನೀಡಬಹುದು. 

ದ್ವಾದಶ ರಾಶಿಗಳ ಮೇಲೆ ಶುಕ್ರ ರಾಶಿ ಪರಿವರ್ತನೆಯ ಪರಿಣಾಮ:
ಮೇಷ ರಾಶಿ -
ಶುಕ್ರ ಸಂಕ್ರಮವು ಮೇಷ ರಾಶಿಯವರಿಗೆ ಶುಭಕರವಾಗಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು. ಮನೆ-ಕಾರು ಖರೀದಿಗೆ ಅವಕಾಶವಿದೆ. 

ವೃಷಭ ರಾಶಿ - ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವ ವೃಷಭ ರಾಶಿಯ ಜನರಿಗೆ ಶುಕ್ರನ ರಾಶಿ ಪರಿವರ್ತನೆಯು ಲಾಭವನ್ನು ತರಲಿದೆ.  ಉದ್ಯೋಗಾಕಾಂಕ್ಷಿಗಳಿಗೆ ಶುಭ ಸಮಯ. ಆದರೆ ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಈ ಬಗ್ಗೆ ಎಚ್ಚರವಿರಲಿ.

ಮಿಥುನ ರಾಶಿ - ಮಿಥುನ ರಾಶಿಯವರಿಗೆ ಸಮಯ ಉತ್ತಮವಾಗಿರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ ಸಾಧ್ಯ. ಗುರಿಯನ್ನು ಬೆನ್ನಟ್ಟಿದರೆ ಯಶಸ್ಸು ಸಿಗುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. 

ಕರ್ಕ ರಾಶಿ- ಶುಕ್ರನ ಸಂಚಾರವು ನಿಮಗೆ ಬಡ್ತಿ ಯೋಗವನ್ನು ತರಲಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ನಿಮ್ಮ ಕೆಲಸಗಳು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದೆ.  ವ್ಯಾಪಾರಿಗಳಿಗೆ ಲಾಭವಾಗಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಕುಟುಂಬದೊಂದಿಗೆ ರಜಾದಿನಗಳನ್ನು ಕಳೆಯಲು ಹೊರಹೋಗುವ ಸಾಧ್ಯತೆಗಳಿವೆ.  

ಇದನ್ನೂ ಓದಿ: ಸಕಲ ವಿಘ್ನ ನಿವಾರಣೆಗಾಗಿ ಬುಧವಾರ ಗಣಪತಿಯನ್ನು ಈ ರೀತಿ ಪೂಜಿಸಿ

ಸಿಂಹ ರಾಶಿ - ವೃತ್ತಿಗೆ ಸೂಕ್ತ ಸಮಯ, ಆದರೆ ತಾಳ್ಮೆಯಿಂದ ಕೆಲಸ ಮಾಡಿದರಷ್ಟೇ ಉತ್ತಮ ಫಲಿತಾಂಶ ಲಭ್ಯ. ಅನಾವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಬೇಡಿ, ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಪಾಲುದಾರಿಕೆ ಲಾಭದಾಯಕವಾಗಬಹುದು. 

ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಪ್ರಶಂಸೆಯನ್ನು ಪಡೆಯುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಂಕಣ ಭಾಗ್ಯ ಕೂಡಿ ಬರಲಿದೆ.

ತುಲಾ  ರಾಶಿ- ಆದಾಯವು ಹೆಚ್ಚಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ನೀವು ಕಾರ್ಯೋನ್ಮುಖರಾದರೆ ಮಾತ್ರ ನೀವು ಬಯಸಿದ್ದನ್ನು ಪಡೆಯಲು ಸಾಧ್ಯವಾಗುತ್ತದೆ. 

ವೃಶ್ಚಿಕ ರಾಶಿ - ಈ ಸಮಯವು ವೃಶ್ಚಿಕ ರಾಶಿಯವರಿಗೆ ಗೌರವ- ಹಣ ಎಲ್ಲವನ್ನೂ ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. 

ಇದನ್ನೂ ಓದಿ:  ಶನಿ ರಾಶಿ ಪರಿವರ್ತನೆ: ಇನ್ನು 3 ದಿನಗಳಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ

ಧನು ರಾಶಿ - ವೃತ್ತಿ-ವ್ಯವಹಾರದಲ್ಲಿ ಸುಧಾರಣೆ ಕಂಡುಬರುವುದು. ಆದಾಯ ಹೆಚ್ಚಲಿದೆ. ನೀವು ನಿಮ್ಮ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಒಳ್ಳೆಯ ಸಮಯ. ಉದ್ಯೋಗಗಳನ್ನು ಬದಲಾಯಿಸುವ ಸಾಧ್ಯತೆಗಳೂ ಇವೆ. 

ಮಕರ ರಾಶಿ- ಆದಾಯ ಹೆಚ್ಚಾಗಲಿದೆ. ಹಣದ ಲಾಭವು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಸಾಲದಿಂದ ಮುಕ್ತರಾಗುತ್ತೀರಿ. ಬಡ್ತಿ ಪಡೆಯಬಹುದು. ಜೀವನ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. 

ಕುಂಭ ರಾಶಿ- ಕುಂಭ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಪ್ರಶಂಸೆಯನ್ನು ಪಡೆಯುತ್ತಾರೆ. ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರೇಮ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ಯಾವುದೇ ಸಾಧನೆಯನ್ನು ಸಾಧಿಸಬಹುದು. 

ಮೀನ ರಾಶಿ- ಮೀನ ರಾಶಿಯ ಜನರು ಅದ್ಭುತವಾದ ಕೆಲಸವನ್ನು ಮಾಡುತ್ತಾರೆ ಮತ್ತು ಅದರ ಫಲವನ್ನು ಸಹ ಪಡೆಯುತ್ತಾರೆ. ಹೊಸ ಉದ್ಯೋಗ ಸಿಗಬಹುದು. ವಿಶೇಷವಾಗಿ ಸರ್ಕಾರಿ ಕೆಲಸ ಮಾಡುವವರಿಗೆ ದೊಡ್ಡ ಲಾಭ ಸಿಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News