ಅಕ್ಷಯ ತೃತೀಯದಂದು ಚಿನ್ನ ಮಾತ್ರವಲ್ಲ ಈ ವಸ್ತುಗಳನ್ನು ಖರೀದಿಸುವುದೂ ತುಂಬಾ ಮಂಗಳಕರ

                               

ಅಕ್ಷಯ ತೃತೀಯ :  ಅಕ್ಷಯ ತೃತೀಯದ ದಿನವನ್ನು ವರ್ಷದ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶುಭ ಮಾಡುವ ಯಾವುದೇ ಕೆಲಸದಲ್ಲಿ ಏಳ್ಗೆ ಆಗಲಿದೆ ಎಂಬುದು ನಂಬಿಕೆ.  ಈ ದಿನವನ್ನು ಶಾಪಿಂಗ್ ಮಾಡಲು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಈ ದಿನ ಚಿನ್ನವನ್ನು ಖರೀದಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ದಿನ ಖರೀದಿಸಿದ ವಸ್ತುಗಳು ದೀರ್ಘಕಾಲ ಬಾಳಿಕೆ ಬರುತ್ತವೆ, ಶುಭ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಸಂತಸ ಇಮ್ಮಡಿಯಾಗುತ್ತದೆ ಎಂಬುದು ನಂಬಿಕೆ. ಈ ಬಾರಿಯ ಅಕ್ಷಯ ತೃತೀಯವನ್ನು ಮೇ 3 ರಂದು ಆಚರಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ, ಆದರೆ ಏರುತ್ತಿರುವ ಚಿನ್ನದ ಬೆಲೆಯಿಂದಾಗಿ, ಈ ದಿನ ಪ್ರತಿಯೊಬ್ಬರೂ ಚಿನ್ನವನ್ನು ಖರೀದಿಸಲು ಸಾಧ್ಯವಾಗದೇ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಅಕ್ಷಯ ತೃತೀಯ ದಿನದಂದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವಂತಹ ಇತರ ವಸ್ತುಗಳನ್ನು ಸಹ ನೀವು ಮನೆಗೆ ತರಬಹುದು. ಇದರಿಂದಲ್ಲೂ ಲಕ್ಷ್ಮಿ ದೇವಿ ಮತ್ತು ಸಂಪತ್ತಿನ ದೇವರಾದ ಕುಬೇರನ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳು ಯಾವುವು ಎಂದು ತಿಳಿಯೋಣ.

2 /6

ಶಾಸ್ತ್ರಗಳ ಪ್ರಕಾರ, ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಈ ದಿನ ನೀವು ಬಾರ್ಲಿಯನ್ನು ಖರೀದಿಸಬಹುದು. ಬಾರ್ಲಿಯನ್ನು ಖರೀದಿಸುವುದು ಚಿನ್ನವನ್ನು ಖರೀದಿಸಿದಂತೆಯೇ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಾರ್ಲಿಯನ್ನು ವಿಷ್ಣುವಿನ ಪಾದಕ್ಕೆ ಅರ್ಪಿಸಿ. ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಸೇಫ್ ಲಾಕರ್ ನಲ್ಲಿ ಇಡಿ. ಇದರಿಂದ  ದಿನದಿಂದ ದಿನಕ್ಕೆ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

3 /6

ತಾಯಿ ಲಕ್ಷ್ಮಿಗೆ ಕವಡೆ ತುಂಬಾ ಪ್ರಿಯ. ಅಕ್ಷಯ ತೃತೀಯ ದಿನದಂದು ಕವಡೆಯನ್ನು ಖರೀದಿಸಿ ಮತ್ತು ಅದನ್ನು ಲಕ್ಷ್ಮಿ ದೇವಿಯ ಪಾದಕ್ಕೆ ಅರ್ಪಿಸಿ. ನೇಮ ನಿಷ್ಠೆಯಿಂದ ತಾಯಿ ಲಕ್ಷ್ಮಿಯನ್ನು ಪೂಜಿಸಿ ಮತ್ತು ಮರುದಿನ, ಈ ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಹಣವನ್ನು ಇರಿಸುವ ಸ್ಥಳದಲ್ಲಿ ಇರಿಸಿ. 

4 /6

ಅಕ್ಷಯ ತೃತೀಯದಂದು ಶ್ರೀ ಯಂತ್ರವನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.  ಈ ದಿನದಂದು ಶ್ರೀ ಯಂತ್ರವನ್ನು ನಿಯಮಾನುಸರ ಸ್ಥಾಪಿಸಿ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ ಎಂದು ಹೇಳಲಾಗುತ್ತದೆ.  

5 /6

ದಕ್ಷಿಣಾವರ್ತಿ ಶಂಖವು ಲಕ್ಷ್ಮಿ ದೇವಿಗೆ ಬಹಳ ಪ್ರಿಯವಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಯಾವಾಗಲೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಕ್ಷಯ ತೃತೀಯ ದಿನದನು ಮನೆಯ ಪೂಜಾ ಸ್ಥಳದಲ್ಲಿ ದಕ್ಷಿಣಾವರ್ತಿ ಶಂಖವನ್ನು ಸ್ಥಾಪಿಸಿ. ಪೂಜೆಯ ಸ್ಥಳದಲ್ಲಿ ಒಂದಕ್ಕಿಂತ ಹೆಚ್ಚು ಶಂಖಗಳನ್ನು ಇಡಬಾರದು ಎಂದು ನೆನಪಿಡಿ. 

6 /6

ಅಕ್ಷಯ ತೃತೀಯದಂದು ಹೂಜಿಯನ್ನು ಖರೀದಿಸುವುದು ಕೂಡ ಬಹಳ ಮಂಗಳಕರ. ಹೂಜಿ ಖರೀದಿಸಿ ಮನೆಯಲ್ಲಿ ಇಡುವುದು ಮತ್ತು ಶರಬತ್ತು ತುಂಬಿದ  ಹೂಜಿ ದಾನ ಮಾಡುವುದು ಎರಡೂ ಮಂಗಳಕರ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.