ಸಕಲ ವಿಘ್ನ ನಿವಾರಣೆಗಾಗಿ ಬುಧವಾರ ಗಣಪತಿಯನ್ನು ಈ ರೀತಿ ಪೂಜಿಸಿ

ನಿತ್ಯ  ಗಣಪತಿಯನ್ನು  ಪೂಜಿಸುವುದರಿಂದ ಮನೆಯಲ್ಲಿ ರಿದ್ಧಿ-ಸಿದ್ಧಿ ನೆಲೆಸುತ್ತದೆ. ಬುಧವಾರದಂದು ಮಾಡಿದ ಗಣಪತಿಯ ಆರಾಧನೆಯು ಜೀವನದ ಎಲ್ಲಾ ಅಡೆತಡೆಗಳನ್ನು ನಾಶಪಡಿಸುತ್ತದೆ. ಅದಕ್ಕಾಗಿ, ಬುಧವಾರದಂದು ಗಣಪತಿಯನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ.

Written by - Yashaswini V | Last Updated : Apr 27, 2022, 07:13 AM IST
  • ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ.

    ಈ ದಿನದಂದು ವಿಧಿ ವಿಧಾನಗಳೊಂದಿಗೆ ಗಣಪತಿಯನ್ನು ಪೂಜಿಸುವುದರಿಂದ ಭಕ್ತರ ಜೀವನದಲ್ಲಿ ಸಕಲ ಅಡೆತಡೆಗಳು ದೂರವಾಗಿ ಇಷ್ಟಾರ್ಥ ಸಿದ್ಧಿಯಾಗಲಿದೆ
  • ನೇಮ ನಿಷ್ಠೆಯಿಂದ ಗಣಪತಿಯನ್ನು ಆರಾಧಿಸುವ ಮನೆಯಲ್ಲಿ ಯಾವುದೇ ಕೆಲಸದಲ್ಲಿ ವಿಘ್ನಗಳು ಎದುರಾಗುವುದಿಲ್ಲ ಎಂಬುದು ನಂಬಿಕೆ
ಸಕಲ ವಿಘ್ನ ನಿವಾರಣೆಗಾಗಿ ಬುಧವಾರ ಗಣಪತಿಯನ್ನು ಈ ರೀತಿ ಪೂಜಿಸಿ  title=
Wednesday ganesh puja

ಗಣೇಶ ಪೂಜೆ ಸಲಹೆಗಳು: ಯಾವುದೇ ಕೆಲಸ ಆರಂಭಿಸುವ ಮೊದಲು ವಿಘ್ನ ವಿನಾಶಕ ಗಣೇಶನನ್ನು ಪೂಜಿಸಲಾಗುವುದು.   ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನದಂದು ವಿಧಿ ವಿಧಾನಗಳೊಂದಿಗೆ ಗಣಪತಿಯನ್ನು ಪೂಜಿಸುವುದರಿಂದ ಭಕ್ತರ ಜೀವನದಲ್ಲಿ ಸಕಲ ಅಡೆತಡೆಗಳು ದೂರವಾಗಿ ಇಷ್ಟಾರ್ಥ ಸಿದ್ಧಿಯಾಗಲಿದೆ ಎಂದು ಹೇಳಲಾಗುತ್ತದೆ. ನೇಮ ನಿಷ್ಠೆಯಿಂದ ಗಣಪತಿಯನ್ನು ಆರಾಧಿಸುವ ಮನೆಯಲ್ಲಿ ಯಾವುದೇ ಕೆಲಸದಲ್ಲಿ ವಿಘ್ನಗಳು ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ. 

ನಿತ್ಯ  ಗಣಪತಿಯನ್ನು  ಪೂಜಿಸುವುದರಿಂದ ಮನೆಯಲ್ಲಿ ರಿದ್ಧಿ-ಸಿದ್ಧಿ ನೆಲೆಸುತ್ತದೆ. ಬುಧವಾರದಂದು ಮಾಡಿದ ಗಣಪತಿಯ ಆರಾಧನೆಯು ಜೀವನದ ಎಲ್ಲಾ ಅಡೆತಡೆಗಳನ್ನು ನಾಶಪಡಿಸುತ್ತದೆ. ಅದಕ್ಕಾಗಿ, ಬುಧವಾರದಂದು ಗಣಪತಿಯನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಪೂಜೆಯ ಸಮಯದಲ್ಲಿ, ಕೆಲವು ಮಹತ್ತರವಾದ ಕ್ರಮಗಳನ್ನು ತೆಗೆದುಕೊಂಡರೆ, ಗಣೇಶನು ಶೀಘ್ರದಲ್ಲೇ ಸಂತಸಗೊಂಡು ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಅಕ್ಷಯ ತೃತೀಯದಂದು ಚಿನ್ನ ಮಾತ್ರವಲ್ಲ ಈ ವಸ್ತುಗಳನ್ನು ಖರೀದಿಸುವುದೂ ತುಂಬಾ ಮಂಗಳಕರ

ಸಕಲ ವಿಘ್ನ ನಿವಾರಣೆಗಾಗಿ ಬುಧವಾರ ಗಣಪತಿಯನ್ನು ಈ ರೀತಿ ಪೂಜಿಸಿ :
ದರ್ಬೆ:

ಗಣಪನಿಗೆ ದರ್ಬೆ ಎಂದರೆ ಬಲು ಪ್ರಿಯ. ಹಾಗಾಗಿ ಗಣಪತಿಯ ಆರಾಧನೆಯಲ್ಲಿ ದರ್ಬೆ ಬಳಕೆ ಮುಖ್ಯ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಗಣಪತಿ ಪೂಜೆಯ ವೇಳೆ ಅವನ ತಲೆಯ ಮೇಲೆ 21 ದರ್ಬೆಯನ್ನು ಅರ್ಪಿಸುವುದರಿಂದ ಗಣಪತಿಯು ಬೇಗ ಸಂತುಷ್ಟನಾಗಿ ಭಕ್ತರ ಆಸೆ ಪೂರೈಸುವನು ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳಲ್ಲಿ ದರ್ಬೆಯನ್ನು ಅಮೃತದಂತೆ ಪರಿಗಣಿಸಲಾಗಿದೆ. ಇದನ್ನು ನೈವೇದ್ಯ ಮಾಡುವುದರಿಂದ ಭಕ್ತರ ಸಂಕಷ್ಟ ದೂರವಾಗುತ್ತದೆ. 

ಶಮಿ ಸಸ್ಯ:
ಬುಧವಾರದಂದು ಗಣೇಶನಿಗೆ ಶಮಿ ಗಿಡದ ಎಲೆಗಳನ್ನು  ಅರ್ಪಿಸಬೇಕು ಎಂಬುದು ಧಾರ್ಮಿಕ ನಂಬಿಕೆ. ಹೀಗೆ ಮಾಡುವುದರಿಂದ ವ್ಯಕ್ತಿಯು ಅನಂತ ಪುಣ್ಯವನ್ನು ಹೊಂದುತ್ತಾನೆ ಮತ್ತು ಗಣೇಶನ ಅನುಗ್ರಹವನ್ನು ಪಡೆಯುತ್ತಾನೆ. ಗಣೇಶನನ್ನು ಶಮಿಯೊಂದಿಗೆ ಪೂಜಿಸಿದರೆ, ಭಕ್ತರು ಎಂದಿಗೂ ಸೋಲನ್ನು ಎದುರಿಸಬೇಕಾಗಿಲ್ಲ ಎಂದು ನಂಬಲಾಗಿದೆ. 

ಗಣಪತಿಗೆ ಅಕ್ಷತೆ ಅರ್ಪಿಸಿ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಕ್ಷತೆ ಇಲ್ಲದೆ ಗಣೇಶನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಗಣೇಶನ ಪೂಜೆಯಲ್ಲಿ ಅಕ್ಷತೆಯನ್ನು ಬಳಸಿದಾಗ, ಗಣೇಶನು ತುಂಬಾ ಸಂತೋಷಪಡುತ್ತಾನೆ ಮತ್ತು ಭಕ್ತರ ಮೇಲೆ ಆಶೀರ್ವಾದವನ್ನು ನೀಡುತ್ತಾನೆ ಎನ್ನಲಾಗುವುದು.

ಇದನ್ನೂ ಓದಿ- ನಿಮ್ಮ ಜನ್ಮ ದಿನ-ಸಮಯದಿಂದ ನೀವು ಎಷ್ಟು ಅದೃಷ್ಟವಂತರು ತಿಳಿಯಿರಿ

ಪೂಜೆಯ ಸಮಯದಲ್ಲಿ ಗಣೇಶನಿಗೆ ಇಷ್ಟವಾದ ವಸ್ತುವನ್ನು ಅರ್ಪಿಸಿದರೆ, ಅವನು ಶೀಘ್ರದಲ್ಲೇ ಸಂತೋಷಪಡುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ, ಬುಧವಾರ, ಗಣೇಶ್ ಜಿಗೆ ಲಡ್ಡುಗಳು ಮತ್ತು ಮೋದಕಗಳನ್ನು ಅರ್ಪಿಸಿ. ಇದರಿಂದ ಗಣಪತಿಯು ಪ್ರಸನ್ನನಾಗುತ್ತಾನೆ. ಇದರಿಂದ ನಿಮ್ಮ ಪ್ರತಿ ಕೆಲಸದಲ್ಲೂ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News