Musterd Seed Remedies - ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸಲು ಸಾಸಿವೆಯನ್ನು ಬಳಸಲಾಗುತ್ತದೆ. ಸಾಸಿವೆ ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಕೂಡ ಬಳಸಲಾಗುತ್ತದೆ. ಆದರೆ ನಿಮ್ಮ ಅಡುಗೆ ಮನೆಯಲ್ಲಿ ಬಳಕೆಯಾಗುವ ಸಾಸಿವೆ ನಿಮಗೆ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತದೆ. ಸಾಸಿವೆ ಬೀಜಗಳ ಕೆಲ ತಂತ್ರಗಳು ನಿಮ್ಮ ಮನೆಯಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿದೆ. ಸಾಸಿವೆಯನ್ನು ಬಲಸಿ ನೀವು ಆರ್ಥಿಕ ಸಮಸ್ಯೆಗಳನ್ನು ಹೇಗೆ ಮುಕ್ತಿ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ತೊಂದರೆಯಿಂದ ಮುಕ್ತಿ ಸಿಗುತ್ತದೆ
ಸಾಸಿವೆ ಕಾಳುಗಳ ಪರಿಹಾರ ನಿಮ್ಮ ದುರಾದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುತ್ತದೆ ಎಂದು ತಂತ್ರ ಶಾಸ್ತ್ರ ಹೇಳುತ್ತದೆ. ಅದೃಷ್ಟವು ಒಲವು ತೋರದಿದ್ದಾಗ, ತೊಂದರೆಗಳು ನಿಮ್ಮನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರೆದಿದ್ದರೆ, ಒಂದು ಹೂಜಿಯನ್ನು ನೀರಿನಿಂದ ತುಂಬಿಸಿ ಮತ್ತು ಅದರಲ್ಲಿ ಕೆಲವು ಸಾಸಿವೆ ಎಲೆಗಳನ್ನು ಹಾಕಿ. ನಂತರ ಶನಿವಾರ ಆ ನೀರಿನಿಂದ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕೆಟ್ಟ ದಿನಗಳು ಅಂತ್ಯಗೊಂಡು, ಬಡತನ ಮತ್ತು ರೋಗಗಳಿಂದ ಮುಕ್ತಿ ಸಿಗುತ್ತದೆ.
ವ್ಯಾಪಾರ ಹೆಚ್ಚಾಗುತ್ತದೆ
ವ್ಯಾಪಾರ ಅಥವಾ ಅಂಗಡಿಯಲ್ಲಿ ಅಭಿವೃದ್ಧಿಗಾಗಿ ಕೆಲವು ಸಾಸಿವೆ ಕಾಳುಗಳು, ಕಪ್ಪು ಎಳ್ಳು ಮತ್ತು ಪೂರ್ಣ ಪ್ರಮಾಣದ ಕೊತ್ತಂಬರಿ ಬೀಜಗಳನ್ನು ಮೂರು ಪ್ರತ್ಯೇಕ ಪಾತ್ರೆಗಳಲ್ಲಿ ಇರಿಸಿ ಭಾನುವಾರದಂದು ವ್ಯಾಪಾರದ ಸ್ಥಳದಲ್ಲಿ ಅಥವಾ ಅಂಗಡಿಯ ಯಾವುದೇ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಧಾನಗತಿಯಲ್ಲಿ ನಿಮ್ಮ ವಾಪಾರ ವೃದ್ಧಿಯಾಗಲು ಶುರುವಾಗುವುದರ ಜೊತೆಗೆ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತದೆ.
ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗುತ್ತದೆ
ತಂತ್ರ ಶಾಸ್ತ್ರದ ಪ್ರಕಾರ ಸಾಸಿವೆಯ ಬಳಕೆಯಿಂದ ಕೆಟ್ಟ ದೃಷ್ಟಿ ತೊಲಗುತ್ತದೆ. ಮನೆಯಲ್ಲಿ ಯಾರಾದರೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಮಾವಿನ ಮರದ ಕಟ್ಟಿಗೆ ಬಳಿಸಿ ಬೆಂಕಿ ಉರಿಸಿ. ನಂತರ ಏಳು ಸಾಸಿವೆ ಕಾಳುಗಳು, ಏಳು ಕೆಂಪು ಮೆಣಸಿನಕಾಯಿಗಳು ಮತ್ತು ಏಳು ಉಪ್ಪಿನ ಗಟ್ಟಿಗಳನ್ನು ತೆಗೆದುಕೊಂಡು ಎಡಗೈಯಿಂದ ಕಾಯಿಲೆಯಿಂದ ಬಾಳುತ್ತಿರುವ ವ್ಯಕ್ತಿಯ ಮೇಲೆ ಏಳು ಬಾರಿ ನಿವಾಳಿಸಿ ಬೆಂಕಿಯಲ್ಲಿ ಹಾಕಿ. ಹೀಗೆ ಮಾಡುವುದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ.
ಇದನ್ನೂ ಓದಿ-Weight Loss: ಗೋಡಂಬಿ ಸೇವನೆಯಿಂದ ತೂಕ ಇಳಿಕೆಯಾಗುತ್ತದೆ... ನಿಜಾನಾ?
ಬಿಗಡಾಯಿಸಿದ ಕೆಲಸಗಳು ಪೂರ್ಣಗೊಳ್ಳಲಿವೆ
ಯಾವುದೇ ಕೆಲಸ ಕೊನೆಯ ಹಂತಕ್ಕೆ ಬಂದರೂ ಪೂರ್ಣಗೊಳ್ಳದೇ ಇದ್ದರೆ ಈ ಅಡಚಣೆಯನ್ನು ಹೋಗಲಾಡಿಸಲು ಗುರುವಾರದಂದು ಸಾಸಿವೆಯನ್ನು ದಾನ ಮಾಡಿ. ಕಾರ್ಯದಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ .
ಇದನ್ನೂ ಓದಿ-Diabetes ರೋಗಿಗಳಿಗೆ ಒಂದು ಪರಿಣಾಮಕಾರಿ ಮನೆಮದ್ದು ಈ ಚಿರೋಂಜಿ ಮಿಲ್ಕ್!
ಸಾಲ ಬಾಧೆಯಿಂದ ಮುಕ್ತಿ
ಋಣಬಾಧೆ ನಿವಾರಣೆಗೆ ಶುಕ್ಲ ಪಕ್ಷದ ಮೊದಲ ಶನಿವಾರ ರಾತ್ರಿ ಬಲಗೈಯಲ್ಲಿನ ಸಾಸಿವೆ ಕಾಳುಗಳನ್ನು ಹಿಡಿದು ಎಡಭಾಗಕ್ಕೆ ಮತ್ತು ಎಡಗೈಯಲ್ಲಿ ಹಿಡಿದ ಸಾಸಿವೆ ಕಾಳುಗಳನ್ನು ಹಿಡಿದು ಬಲಭಾಗಕ್ಕೆ ಎಸೆಯಿರಿ. ಈ ಕೆಲಸ ಮಾಡುವಾಗ ನಿಮ್ಮ ಮುಖವು ಪೂರ್ವ ದಿಕ್ಕಿಗೆ ಇರಬೇಕು. ಇದಾದ ನಂತರ ಅಡ್ಡದಾರಿಯಲ್ಲಿ ಸಾಸಿವೆ ಎಣ್ಣೆಯ ಎರಡು ಮುಖದ ದೀಪವನ್ನು ಬೆಳಗಿ ಹಿಂದಿರುಗಿ ನೋಡದೆಯೇ ನೇರವಾಗಿ ಮನೆಗೆ ಬನ್ನಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.