ಶನಿ ಸಾಡೇಸಾತಿ ಮುಕ್ತಿಯಿಂದ ಯಾವಾಗ ಬದಲಾಗಲಿದೆ ಈ ರಾಶಿಯ ಅದೃಷ್ಟ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯ ಸಾಡೇ ಸಾತಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಬರುತ್ತದೆ. ಇದಲ್ಲದೇ ವ್ಯಕ್ತಿಯ ಜಾತಕದಲ್ಲಿ ಶನಿ ಸಾಡೇಸಾತಿಯ ಪ್ರಭಾವವಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

Written by - Ranjitha R K | Last Updated : Dec 22, 2021, 03:58 PM IST
  • ಶನಿ ಸಾಡೇಸಾತಿಯಿಂದ ಈ ರಾಶಿಯವರಿಗೆ ಮುಕ್ತಿ ಯಾವಾಗ
  • ಯಾವಾಗ ಬೆಳಗಲಿದೆ ಈ ರಾಶಿಯವರ ಅದೃಷ್ಟ
  • ಮೀನ ರಾಶಿಗೆ 2022 ರಲ್ಲಿ ಆರಂಭವಾಗಲಿದೆ ಶನಿಸಾಡೇಸಾತಿ
ಶನಿ ಸಾಡೇಸಾತಿ ಮುಕ್ತಿಯಿಂದ ಯಾವಾಗ ಬದಲಾಗಲಿದೆ  ಈ ರಾಶಿಯ ಅದೃಷ್ಟ title=
ಶನಿ ಸಾಡೇಸಾತಿಯಿಂದ ಈ ರಾಶಿಯವರಿಗೆ ಮುಕ್ತಿ ಯಾವಾಗ

ನವದೆಹಲಿ : ಏಳೂವರೆ ವರ್ಷಗಳ ಕಾಲ ನಡೆಯುವ ಶನಿಯ ದೆಸೆಯನ್ನು ಸಾಡೇ ಸತಿ (Shani sadesati) ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಶನಿಯು ಒಂಬತ್ತು ಗ್ರಹಗಳಲ್ಲಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಾನೆ. ಶನಿದೇವನು (Shanidev) ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯ ಸಾಡೇ ಸಾತಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಬರುತ್ತದೆ. ಇದಲ್ಲದೇ ವ್ಯಕ್ತಿಯ ಜಾತಕದಲ್ಲಿ ಶನಿ ಸಾಡೇಸಾತಿಯ ಪ್ರಭಾವವಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ವ್ಯಕ್ತಿಯ ಜಾತಕದಲ್ಲಿ ಶನಿಯ ದೆಸೆ (shanidese) ಸರಿಯಾಗಿದ್ದರೆ, ಅವನು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾನೆ.  3 ರಾಶಿಚಕ್ರಗಳಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ಯಾವಾಗ ನೋಡೋಣ.  

ಶನಿ ಸಾಡೇಸಾತಿಯಿಂದ ಮುಕ್ತಿ ಯಾವಾಗ ? 
ಪ್ರಸ್ತುತ, ಮೂರು ರಾಶಿಗಳಲ್ಲಿ ಶನಿ-ಸಾಡೇಸಾತಿ (Shani sadesati) ದೆಸೆ ನಡೆಯುತ್ತಿದೆ. ಪ್ರಸ್ತುತ ಶನಿಯು ಮಕರ ರಾಶಿಯಲ್ಲಿದೆ. ಮಕರ ರಾಶಿಯ ಜೊತೆಗೆ ಧನು, ಕುಂಭ ರಾಶಿಯವರ ಶನಿ ಸಾಡೇಸಾತಿ ನಡೆಯುತ್ತಿದೆ. ಧನು ರಾಶಿಯಲ್ಲಿ (Sagitarius) ಶನಿ ಸಾಡೇ ಸತಿಯ ಕೊನೆಯ ಹಂತವಾಗಿದೆ. ಈ ರಾಶಿಯಿಂದ ಶನಿ ಸಾಡೇ ಸತಿಯ ಪ್ರಭಾವವು 2023 ರಲ್ಲಿ ಕೊನೆಗೊಳ್ಳುತ್ತದೆ. ಇದಲ್ಲದೇ ಮಕರ ರಾಶಿಯವರಿಗೆ  ಶನಿಯ ಸಾಡೇಸಾತಿಯ ಎರಡನೇ ಘಟ್ಟ ನಡೆಯುತ್ತಿದೆ. ಈ ರಾಶಿಯವರಿಗೆ ಏಳೂವರೆ ಶನಿ 2025 ರಲ್ಲಿ ಕೊನೆಗೊಳ್ಳುತ್ತದೆ. ಇನ್ನೊಂದೆಡೆ ಕುಂಭ ರಾಶಿಯವರಿಗೆ ಶನಿಯ ಸಾಡೇಸಾತಿಯ ಮೊದಲ ಘಟ್ಟ ನಡೆಯುತ್ತಿದೆ. ಈ ರಾಶಿಯಿಂದ (Zodiac sign) ಶನಿಯ ಸಾಡೇಸಾತಿಯ ಪರಿಣಾಮವು ಜನವರಿ 23, 2028 ರಂದು ಕೊನೆಗೊಳ್ಳುತ್ತದೆ.  

ಇದನ್ನೂ ಓದಿ : ಹೊಸ ವರ್ಷದಲ್ಲಿ ಈ ರಾಶಿಯವರ ಪ್ರತೀ ಕನಸು ನನಸಾಗಲಿದೆ, ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಯಶಸ್ಸು

ಮೀನ ರಾಶಿಗೆ ಶನಿ ಸಾಡೇಸಾತಿ 2022 ರಲ್ಲಿ ಪ್ರಾರಂಭವಾಗಲಿದೆ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಶನಿಯು ರಾಶಿಚಕ್ರವನ್ನು ಬದಲಾಯಿಸಿದಾಗ, ಒಂದು ರಾಶಿಯ ಸಾಡೇಸಾತಿ ಕೊನೆಗೊಂಡಾಗ ಇನ್ನೊಂದು ರಾಶಿಗೆ ಏಳೂವರೆ ಶನಿ ಆರಂಭವಾಗುತ್ತದೆ. 2022 ರಲ್ಲಿ, ಶನಿಯು ಏಪ್ರಿಲ್ 29 ರಂದು ಕುಂಭ ರಾಶಿಗೆ (Aquarius) ಪ್ರವೇಶಿಸಲಿದೆ. ಅದರ ನಂತರ ಧನು ರಾಶಿಯಿಂದ ಸಾಡೇಸಾತಿ ಪ್ರಭಾವ ಕೊನೆಗೊಳ್ಳುತ್ತದೆ. ಅಲ್ಲದೆ, ಮೀನ ರಾಶಿಯಲ್ಲಿ ಏಳೂವರೆ ಶನಿ ಪ್ರಾರಂಭವಾಗಲಿದೆ.

ಇದನ್ನೂ ಓದಿ : Mercury Pushya Yoga: ರೂಪುಗೊಳ್ಳುತ್ತಿದೆ ಅಪರೂಪದ ಬುಧ-ಪುಷ್ಯ ಯೋಗ; ಈ ವಸ್ತುಗಳನ್ನು ಮನೆಗೆ ತರುವುದರಿಂದ ಹೆಚ್ಚುತ್ತೆ ಸುಖ-ಸಮೃದ್ಧಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News