ಹೊಸ ವರ್ಷದಲ್ಲಿ ಈ ರಾಶಿಯವರ ಪ್ರತೀ ಕನಸು ನನಸಾಗಲಿದೆ, ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಯಶಸ್ಸು

ಹೊಸ ವರ್ಷದಲ್ಲಿ ಈ ರಾಶಿಗಳ ಎಲ್ಲಾ ಕನಸುಗಳು ಈಡೇರಲಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದಾರೆ.

Written by - Ranjitha R K | Last Updated : Dec 22, 2021, 12:17 PM IST
  • ಹೊಸ ವರ್ಷ ಶುಭವನ್ನೇ ಹೊತ್ತು ತರಲಿದೆ ಈ ರಾಶಿಯವರಿಗೆ
  • ಹಿಡಿದ ಎಲ್ಲಾ ಕೆಲಸಗಳಲ್ಲಿ ಪ್ರಗತಿ ಸಾಧಿಸಲಿದ್ದಾರೆ ಈ ರಾಶಿಯವರು
  • ಯಶಸ್ಸು ಹಿಂಬಾಲಿಸಿಕೊಂಡೇ ಬರಲಿದೆ
 ಹೊಸ ವರ್ಷದಲ್ಲಿ ಈ ರಾಶಿಯವರ ಪ್ರತೀ ಕನಸು ನನಸಾಗಲಿದೆ, ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಯಶಸ್ಸು  title=
Extremely Lucky Zodiac Signs In 2022 (file photo)

ನವದೆಹಲಿ :  Extremely Lucky Zodiac Signs In 2022 :  2022 ರ ರಾಶಿ ಫಲದ ಪ್ರಕಾರ, ಮುಂಬರುವ ವರ್ಷವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ (Zodiac sign) ಬಹಳ ಅದ್ಭುತವಾಗಿರುತ್ತದೆ. ರಾಶಿಚಕ್ರದ ಪ್ರಕಾರ, ಹೊಸ ವರ್ಷದಲ್ಲಿ ಕೆಲವು ರಾಶಿಗಳ ಜನರು, ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲಿದ್ದಾರೆ. ಈ ರಾಶಿಗಳ ಎಲ್ಲಾ ಕನಸುಗಳು ಈಡೇರಲಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಸಮಯ  ಈ ಕೆಳಗಿನ ರಾಶಿಯವರಿಗೆ..

ವೃಷಭ ರಾಶಿ : ಹೊಸ ವರ್ಷವು ಈ ರಾಶಿಚಕ್ರದ (Zodiac sign) ಜನರಿಗೆ ಶುಭವಾಗಿ ಸಾಬೀತಾಗಲಿದೆ. ಹೊಸ ವರ್ಷದಲ್ಲಿ ಈ ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿಗೆ ಹೆಚ್ಚಿನ ಅವಕಾಶಗಳಿವೆ. ಮಾಡಬೇಕೆಂದಿರುವ ಎಲ್ಲಾ ಕೆಲಸಗಳಲ್ಲಿಯೂ ಯಶ ಸಿಗಲಿದೆ.
 

ಇದನ್ನೂ ಓದಿ : Mercury Pushya Yoga: ರೂಪುಗೊಳ್ಳುತ್ತಿದೆ ಅಪರೂಪದ ಬುಧ-ಪುಷ್ಯ ಯೋಗ; ಈ ವಸ್ತುಗಳನ್ನು ಮನೆಗೆ ತರುವುದರಿಂದ ಹೆಚ್ಚುತ್ತೆ ಸುಖ-ಸಮೃದ್ಧಿ
 
ಸಿಂಹ : ಸಿಂಹ ರಾಶಿಯವರಿಗೆ (Leo) ಹೊಸ ವರ್ಷವು ಅನೇಕ ಶುಭ ಚಿಹ್ನೆಗಳನ್ನು ನೀಡುತ್ತಿದೆ. ಈ ಸಮಯವು ವರದಾನಕ್ಕಿಂತ ಕಡಿಮೆಯಿರುವುದಿಲ್ಲ. ವೃತ್ತಿ ಮತ್ತು ವ್ಯವಹಾರದಲ್ಲಿ ಶುಭವೇ ಆಗಲಿದೆ. ಹೊಸ ಹೊಸ ಅವಕಾಶಗಳು ಈ ರಾಶಿಯವರನ್ನು ಅರಸಿಕೊಂಡು ಬರುತ್ತವೆ. 

ತುಲಾ ರಾಶಿ : ಮುಂಬರುವ ವರ್ಷವು ತುಲಾ ರಾಶಿಯವರಿಗೆ (Libra) ಅನೇಕ ಮಂಗಳಕರ ಅವಕಾಶಗಳನ್ನು ತರಲಿದೆ. ಜೀವನದ ಪ್ರತಿ ಹಂತದಲ್ಲಿ ಯಶಸ್ಸು ಸಿಗಲಿದೆ. ಪ್ರತಿ ಕಾರ್ಯದಲ್ಲೂ ಲಾಭವಾಗಲಿದೆ. 

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ (Scorpio) 2022 ರ ವರ್ಷವು ನಿಜವಾಗಿಯೂ ಶುಭ ಫಲವನ್ನೇ ಹೊತ್ತು ತರಲಿದೆ. ಈ ಸಮಯದಲ್ಲಿ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನೆಚ್ಚಿನ ಕೆಲಸವನ್ನು ಪಡೆಯುವ ಸಾಧ್ಯತೆ ಕೂಡಾ ದಟ್ಟವಾಗಿದೆ. 

ಇದನ್ನೂ ಓದಿ : Tulsi Plants: ಈ ದಿನ ಅಪ್ಪಿ-ತಪ್ಪಿ ಕೂಡ ತುಳಸಿ ಎಲೆಯನ್ನು ಕೀಳಬೇಡಿ, ಇಲ್ಲವೇ ಜೀವನದಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು, ಎಚ್ಚರ!

ಮಕರ ರಾಶಿ : ಮಕರ ರಾಶಿಯವರಿಗೆ (Capricorn) ಹೊಸ ವರ್ಷದಲ್ಲಿ ಲ್ಲಾ ಕ್ಷೇತ್ರಗಳಳ್ಲಿಯೂ ಪ್ರಗತಿ ಸಿಗಲಿದೆ. 2022 ರ ಸಮಯವು ಈ ರಾಶಿಯವಬರ ಪಾಲಿಗೆ ಮಂಗಳಕರವಾಗಿರಲಿದೆ. ಈ ಬಾರಿಯೂ ಯಶಸ್ಸಿನ ಹಾದಿಯಲ್ಲಿಯೇ ಈ ರಾಶಿಯವರು ಮುಂದುವರಿಯಲಿದ್ದಾರೆ. ಅದೃಷ್ಟವು ಸದಾ ಈ ರಾಶಿತಯವರನ್ನು ಬೆಂಬಲಿಸಲಿದೆ.

ಕುಂಭ (Aquarius) :  ನಿಮ್ಮ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಪ್ರಾರಂಭಿಸುವಿರಿ. ಇದೇ ರೀತಿಯ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕೂಡಾ  ಪಡೆಯಲಿದ್ದೀರಿ. ಜೀವನದ ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Tulsi plant

Trending News