ಅಸ್ತಿತ್ವದ ಭಯದಿಂದ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆಯೇ?: ಬಿಜೆಪಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಂತಹ ಮುತ್ಸದ್ದಿಯನ್ನು ಜಾತಿ ರಾಜಕಾರಣಕ್ಕಾಗಿ ಜೆಡಿಎಸ್ ಬಳಸಿಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Nov 12, 2022, 03:02 PM IST
  • ಅಸ್ತಿತ್ವದ ಭಯದಿಂದ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆಯೇ?
  • 3 ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಈಗ "ಅನುಕಂಪದ" ರಾಜಕಾರಣಕ್ಕೆ ಮೊರೆ ಹೋಗಿದೆ
  • ದೇವೇಗೌಡರಂತಹ ಮುತ್ಸದ್ದಿಯನ್ನು ಜಾತಿ ರಾಜಕಾರಣಕ್ಕೆ JDS ಬಳಸಿಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ
ಅಸ್ತಿತ್ವದ ಭಯದಿಂದ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆಯೇ?: ಬಿಜೆಪಿ title=
ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‍.ಡಿ.ದೇವೇಗೌಡರಿಗೆ ಆಹ್ವಾನ ಪತ್ರಿಕೆ ನೀಡುವ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಇದೇ ವಿಚಾರವಾಗಿ ಸರಣಿ ಟ್ವೀಟ್ ಮೂಲಕ ಬಿಜೆಪಿ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದೆ.

‘ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಸ್ವತಃ ಫೋನ್‌ ಕರೆ ಮೂಲಕ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಿದ್ದಾರೆ. ಸರಿಸುಮಾರು 20 ದಿನಗಳ ಹಿಂದೆಯೇ ಸಚಿವರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆಹ್ವಾನ ಪತ್ರಿಕೆಯಲ್ಲೂ ದೇವೇಗೌಡರ ಹೆಸರು ನಮೂದಿಸಲಾಗಿತ್ತು. ಅಸ್ತಿತ್ವದ ಭಯದಿಂದ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘3 ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್‌ ಪಕ್ಷ ಈಗ "ಅನುಕಂಪದ" ರಾಜಕಾರಣಕ್ಕೆ ಮೊರೆ ಹೋಗಿದೆ. ದೇವೇಗೌಡ ಅವರಂತಹ ಮುತ್ಸದ್ದಿಯನ್ನು ಜಾತಿ ರಾಜಕಾರಣಕ್ಕಾಗಿ ಜೆಡಿಎಸ್ ಬಳಸಿಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ. ಬಿಜೆಪಿಯ ಒಕ್ಕಲಿಗ ನಾಯಕರು ಮುನ್ನೆಲೆಗೆ ಬರುತ್ತಿರುವುದು ಕುಮಾರಸ್ವಾಮಿಯವರಿಗೆ ಸಹಿಸಲಾಗುತ್ತಿಲ್ಲವೇ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಮೊದಲ ಆಹ್ವಾನವೇ ದೇವೇಗೌಡರಿಗೆ; ಸುಳ್ಳಾಡುವ JDS ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದ ಬಿಜೆಪಿ

‘ನಾಡ ಪ್ರಭು ಕೆಂಪೇಗೌಡರ ವಿಚಾರದಲ್ಲೂ ಜೆಡಿಎಸ್ ರಾಜಕೀಯ ಮಾಡುತ್ತಿರುವುದು ನಾಚಿಗೆಗೇಡಿನ ಸಂಗತಿ. ನಿಜವಾಗಿಯೂ ಕೆಂಪೇಗೌಡರು ಹಾಗೂ ದೇವೇಗೌಡರ ಬಗ್ಗೆ ಸದಭಿಪ್ರಾಯ ಇರುವವರು ಆಹ್ವಾನದ ವಿಚಾರವನ್ನು ವಿವಾದವನ್ನಾಗಿ ಮಾಡುತ್ತಲೇ ಇರಲಿಲ್ಲ. ಒಕ್ಕಲಿಗರ ಮತ ಧ್ರುವೀಕರಣದ ಭೀತಿಯಿಂದ ಕಂಗಾಲಾಗಿರುವ ಜೆಡಿಎಸ್ ಈಗ ಅಪಪ್ರಚಾರದ ಮೊರೆ ಹೋಗಿದೆ’ ಎಂದು ಬಿಜೆಪಿ ಕುಟುಕಿದೆ.

ಕೆಂಪೇಗೌಡರಿಗೆ ವಿರೋಧವೇಕೆ?

‘ಕೆಂಪೇಗೌಡರ ಪ್ರತಿಮೆ ಅನಾವರಣ, ಸಂತ ಕನಕದಾಸರು & ವಾಲ್ಮೀಕಿ ಮಹರ್ಷಿಗಳ ಪ್ರತಿಮೆಗಳಿಗೆ ಮಾಲೆ ಹಾಕಿದ್ದರಿಂದ ಈ ಮಹನೀಯರ ಸಮುದಾಯದವರ ಹೊಟ್ಟೆ ತುಂಬುವುದಿಲ್ಲ, ಅವರ ಸಮಸ್ಯೆಗಳು ಬಗೆಹರಿಯುವುದಿಲ್ಲ, ಕಣ್ಣೀರು ಕೊನೆಯಾಗುವುದಿಲ್ಲ’ವೆಂದು ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿಗೆ ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಬಿಜೆಪಿ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಿ ಯಾರ ಹೊಟ್ಟೆ ತುಂಬಿಸಿದಿರಿ ಶಿವಕುಮಾರ್ ಅವರೇ? ಮೈಸೂರಿನಲ್ಲಿ ಕನ್ನಡ ವಿರೋಧಿ, ಮತಾಂಧ ಟಿಪ್ಪುವಿನ ಪ್ರತಿಮೆ ನಿರ್ಮಿಸಲು ಹೊರಟಿರುವುದು ಯಾರ ಹೊಟ್ಟೆ ತುಂಬಿಸಲು? ಏಸು, ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಇರದ ವಿರೋಧ ಕೆಂಪೇಗೌಡ ಅವರಿಗೇಕೆ?. ಕೆಂಪೇಗೌಡರು ಹಿಂದೂ ಎನ್ನುವ ಕಾರಣಕ್ಕಾಗಿಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ: ಜೆಡಿಎಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News